ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ಭ್ರಷ್ಟ ಆಡಳಿತ ಇಷ್ಟವಿಲ್ಲ ಎಂಬ ಸಂದೇಶವನ್ನು ಸರ್ಕಾರಕ್ಕೆ ಕೊಡಲು ಜನರು ಮುಂದಾಗಿದ್ದಾರೆ. ಗ್ಯಾರಂಟಿಗಳಿಗೆ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಬಳಕೆಯಾಗಬೇಕಿತ್ತಾ? ದಲಿತರ ಮೇಲೆ ಕಾಳಜಿ ಇದ್ದಿದ್ದರೆ ಅವರ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿದ್ದು ಯಾಕೆ? ಅಲ್ಪಸಂಖ್ಯಾತರ ಹಣವನ್ನು ಏಕೆ ಬಳಕೆ ಮಾಡಿಕೊಳ್ಳಲಿಲ್ಲ. ಅಲ್ಪಸಂಖ್ಯಾತರಿಗೆ ಹತ್ತು ಸಾವಿರ ಕೋಟಿ ಕೊಟ್ಟ ಸಿದ್ದರಾಮಯ್ಯ ಹಿಂದೂಗಳ ಕಲ್ಯಾಣಕ್ಕೆ ಎಷ್ಟು ಕೋಟಿ ಕೊಟ್ಟಿದ್ದಾರೆ ಎಂದು ಸರ್ಕಾರದ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದರು.
ಕಳ್ಳೆತ್ತು ವಾಲ್ಮೀಕಿ ನಿಗಮ, ಬೋವಿ ನಿಗಮದ ಹಣ ನುಂಗಿ ಒಂದೂ ಅಭಿವೃದ್ಧಿ ಕೆಲಸ ಮಾಡದೇ ಸುಳ್ಳು ಹೇಳಿ ಕಾಲಹರಣ ಮಾಡಿತು. ಇದರ ಮೇಲೆಯೇ ದುಡಿಯೋ ಎತ್ತು ಯಾವುದು ಕಳ್ಳೆತ್ತು ಯಾವುದು ಎಂದು ಜನರಿಗೆ ಗೊತ್ತಾಗುತ್ತದೆ. ಕೇಂದ್ರವು ಅಕ್ಕಿ ಕೊಡದಿದ್ದರೆ ಇವರ ಹಣೆ ಬರಹ ಗೊತ್ತಾಗುತ್ತಿತ್ತು. ಮೋದಿ ಅವರು ಕೊಟ್ಟಿರುವುದನ್ನು ಕೇವಲ ಮುಟ್ಟಿ ಕೊಟ್ಟು ತಾವು ಕೊಟ್ಟಿದ್ದೇವೆ ಎಂದು ಬೀಗುತ್ತಾರೆ. ಇದು ಯಾವ ಸೀಮೆಯ ನ್ಯಾಯ? ಸಿದ್ದರಾಮಯ್ಯ ಸಾಲ ಮಾಡಿದ್ದು ಸುಳ್ಳಾ? ಸ್ವತಃ ಮುಖ್ಯಮಂತ್ರಿಗಳೇ ₹5 ಲಕ್ಷ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ ಎಂದರು.ಗ್ಯಾರಂಟಿ ನಾನು ಕೊಟ್ಟಿದ್ದು ಎಂದು ಹೇಳಿದ ಹಾಗೆ ಸಾಲ ನಾನೇ ಮಾಡಿದ್ದು ಎಂದು ಹೇಳಲಿ. ಬೆಲೆಗಳ ಹೆಚ್ಚಳದಿಂದ ₹20 ಬಾಂಡ್ ಪೇಪರ್ ಕೂಡ ಮಾಯ ಮಾಡಿದ್ದಾರೆ. ಜನ ಒತ್ತೆ ಇಟ್ಟ ತಮ್ಮ ಚಿನ್ನಕ್ಕೆ ಹಣ ಕಟ್ಟುವ ಸ್ಥಿತಿಗೆ ತಂದಿಟ್ಟಿದ್ದಾರೆ. ಬಾಗಲಕೋಟೆ ಹಿಂದುತ್ವ ಕೋಟೆ ಇಲ್ಲಿ ಬಿಜೆಪಿ ಗೆಲ್ಲಬೇಕು ಎಂದು ಹೇಳಿದರು.