ಜಿಲ್ಲೆಯ ಮೂರು ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್‌ ಬೋರ್ಡ್‌ ವಿತರಣೆ

KannadaprabhaNewsNetwork |  
Published : Apr 05, 2026, 02:45 AM IST
 | Kannada Prabha

ಸಾರಾಂಶ

ಸಿಎಂಸಿಎ ಸಂಸ್ಥೆ ಬೆಂಗಳೂರು ಮತ್ತು ನಾವು ಪ್ರತಿಷ್ಠಾನ ಕೊಡಗು ಸಹಯೋಗ ಮತ್ತು ಐಡಿಬಿಐ ಬ್ಯಾಂಕ್‌ನ ಸಿಎಸ್‌ಆರ್ ಸಹಾಯದೊಂದಿಗೆ ಸಿವಿಕ್ ಕ್ಲಬ್ ಹಾಗೂ ಮಕ್ಕಳ ಸಂವಿಧಾನ ಕ್ಲಬ್ ಕಾರ್ಯಕ್ರಮದಡಿ ಜಿಲ್ಲೆಯ ಮೂರು ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ ಮತ್ತು ಪರಿಕರಗಳನ್ನು ಬುಧವಾರ ವಿತರಿಸಲಾಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸಿಎಂಸಿಎ ಸಂಸ್ಥೆ ಬೆಂಗಳೂರು ಮತ್ತು ನಾವು ಪ್ರತಿಷ್ಠಾನ ಕೊಡಗು ಸಹಯೋಗ ಮತ್ತು ಐಡಿಬಿಐ ಬ್ಯಾಂಕ್‌ನ ಸಿಎಸ್‌ಆರ್ ಸಹಾಯದೊಂದಿಗೆ ಸಿವಿಕ್ ಕ್ಲಬ್ ಹಾಗೂ ಮಕ್ಕಳ ಸಂವಿಧಾನ ಕ್ಲಬ್ ಕಾರ್ಯಕ್ರಮದಡಿ ಜಿಲ್ಲೆಯ ಮೂರು ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ ಮತ್ತು ಪರಿಕರಗಳನ್ನು ಬುಧವಾರ ವಿತರಿಸಲಾಯಿತು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಸೋಮವಾರಪೇಟೆ ತಾಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆ ಆಲೂರು ಸಿದ್ದಾಪುರ, ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗು ತಿತಿಮತಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಇಂಟರಾಕ್ಟೀವ್ ಸ್ಮಾರ್ಟ್ ಬೋರ್ಡ್, ಲಘು ಯುಪಿಎಸ್ ಹಾಗೂ ಒಂದು ವರ್ಷದ ಇಂಟರ್ನೆಟ್ ರೀಚಾರ್ಜ್ ಸಹಿತ ವೈ-ಫೈ ರೂಟರ್‌ಗಳನ್ನು ವಿತರಿಸಿದರು. ಆಲೂರು ಸಿದ್ದಾಪುರ ಶಾಲೆಯಲ್ಲಿ ಪರಿಕರ ವಿತರಿಸಿದ ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ಅವರು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಡಿಜಿಟಲ್ ಉಪಕರಣಗಳ ಮೂಲಕ ಸರ್ಕಾರಿ ಶಾಲೆಗಳ ಮಕ್ಕಳು ಹೊಸ ಕೌಶಲ್ಯಗಳನ್ನು ಕಲಿತು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು. ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು ಎಂದರು.ಸಿಎಂಸಿಎ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ಸುಮನ್ ಮ್ಯಾಥ್ಯೂ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸಮಾನತೆ, ಲಿಂಗ ಸಮಾನತೆ, ಅನುಭೂತಿ ಹಾಗೂ ನಾಗರಿಕ ಮೌಲ್ಯಗಳನ್ನು ಬೆಳೆಸಲು ನಮ್ಮ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಜೊತೆಗೆ ೨೧ನೇ ಶತಮಾನದ ಕೌಶಲ್ಯಗಳಾದ ಜೀವನ ಕೌಶಲ್ಯಗಳು, ನಾಯಕತ್ವ, ಭಾವನಾತ್ಮಕ ಬುದ್ಧಿಮತ್ತೆ ಮತ್ತು ನಾಗರಿಕ ಭಾಗವಹಿಸುವಿಕೆಗೆ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭ ಶಿಕ್ಷಕಿಯರಾದ ಪೂರ್ಣಿಮ, ಲೋಲಾಕ್ಷಿ, ನಂದಿನಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ನದ ರಾಮಯ್ಯ ಅಲ್ಲ, ನೀನು ಚೀಲದ ರಾಮಯ್ಯ: ಆರ್‌.ಅಶೋಕ
ಉಪ ಚುನಾವಣೆಯಿಂದ ರಾಜ್ಯಕ್ಕೆ ಹೊಸ ದಿಕ್ಸೂಚಿ: ಸುನೀಲ್‌ ಕುಮಾರ್‌