ಪಾವಂಜೆ ಮೇಳಕ್ಕೆ ನೂತನ ವೇಷ ಭೂಷಣ: ನಾಳೆಯಿಂದ ತಿರುಗಾಟ

KannadaprabhaNewsNetwork |  
Published : Nov 02, 2025, 04:00 AM IST
ಪಾವಂಜೆ ಮೇಳಕ್ಕೆ ನೂತನ ವೇಷ಼ ಭೂಷಣ   | Kannada Prabha

ಸಾರಾಂಶ

ಪ್ರಸ್ತುತ ಸಾಲಿನಲ್ಲಿ ಮೇಳಕ್ಕೆ ಹೊಸ ವೇಷ ಭೂಷಣ ತಯಾರಾಗಿದ್ದು, ಕಳೆದ ಕೆಲವು ತಿಂಗಳಿನಿಂದ ರವಿ ಭಟ್ ಪಾವಂಜೆ ನೇತೃತ್ವದ ಯಕ್ಷ ವರ್ಣ ಕಲಾ ತಂಡ ತಯಾರಿಕೆಯಲ್ಲಿ ತೊಡಗಿಕೊಂಡಿತ್ತು. ವೇಷ ಭೂಷಣದಲ್ಲಿ ಕೆಲವೊಂದು ಹಳೆಯ ಪರಂಪರೆಯನ್ನು ಮರು ನಿರ್ಮಿಸುವ ಕಾರ್ಯ ಈ ತಂಡ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಆರನೇ ವರ್ಷದ ತಿರುಗಾಟ ನ.3ರಿಂದ ಆರಂಭವಾಗಲಿದ್ದು, ನ.2ರಂದು ಪಾವಂಜೆ ಕ್ಷೇತ್ರದಲ್ಲಿ ಸೇವೆಯಾಟ ನಡೆಯಲಿದೆ.

ಪ್ರಸ್ತುತ ಸಾಲಿನಲ್ಲಿ ಮೇಳಕ್ಕೆ ಹೊಸ ವೇಷ ಭೂಷಣ ತಯಾರಾಗಿದ್ದು, ಕಳೆದ ಕೆಲವು ತಿಂಗಳಿನಿಂದ ರವಿ ಭಟ್ ಪಾವಂಜೆ ನೇತೃತ್ವದ ಯಕ್ಷ ವರ್ಣ ಕಲಾ ತಂಡ ತಯಾರಿಕೆಯಲ್ಲಿ ತೊಡಗಿಕೊಂಡಿತ್ತು. ವೇಷ ಭೂಷಣದಲ್ಲಿ ಕೆಲವೊಂದು ಹಳೆಯ ಪರಂಪರೆಯನ್ನು ಮರು ನಿರ್ಮಿಸುವ ಕಾರ್ಯ ಈ ತಂಡ ಮಾಡುತ್ತಿದೆ. ಹಿಂದಿನ ಕಾಲದಲ್ಲಿದಂತಹ ಕಾಲಿದಿಂಬು, ಕಾಲಿನ ಕಡ ಇಂತಹ ಅನೇಕ ವೇಷ ಭೂಷಣವನ್ನು ಮತ್ತೆ ರಂಗಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ. ಕಿರೀಟ ಸಮೇತ ಕೆಲವೊಂದು ಅಭರಣಗಳಲ್ಲಿ ಮರದ ತುಂಡನ್ನು ಉಪಯೋಗಿಸುತ್ತಿದ್ದು, ಈ ಬಾರಿ ಕೆಲವೊಂದು ಅಭರಣಗಳಲ್ಲಿ ಪೈಬರ್ ತುಂಡುಗಳನ್ನು ಅಳವಡಿಸಲಾಗಿದೆ. ಈ ಕಾರಣದಿಂದ ಅಭರಣಗಳು ಕಡಿಮೆ ತೂಕದಾಗಿದ್ದು, ಕಲಾವಿದರಿಗೂ ಅನೂಕೂಲವಾಗಲಿದೆ. ನ.3ರಿಂದ ಮೇ 25ರ ವರೆಗೆ ತಿರುಗಾಟ ನಡೆಯಲಿದ್ದು, ಸುಮಾರು 220 ಪ್ರದರ್ಶನ ನಡೆಯಲಿದೆ.

ಈ ಬಾರಿ ಪವನ್ ಕಿರಣ್ ಕೆರೆಯವರ ‘ಶ್ರೀ ತುಳಸಿ’ ಮತ್ತು ಕದ್ರಿ ನವನೀತ ಶೆಟ್ಟಿಯವರ ‘ಛಾಯಾನಂದನ’ ಎಂಬ ನೂತನ ಎರಡು ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ. ಅಲ್ಲದೆ ಸುಮಾರು 60ರಷ್ಟು ಪೌರಾಣಿಕ ಪ್ರಸಂಗಗಳು ಪ್ರದರ್ಶನಕ್ಕೆ ಸಿದ್ಧವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’