ಹೊಸ ಕ್ರಿಮಿನಲ್ ಕಾಯ್ದೆಗಳಿಂದ ಶೀಘ್ರ ನ್ಯಾಯದಾನಕ್ಕೆ ಸಹಕಾರಿ: ಪ್ರೀತಂ ಡೇವಿಡ್

KannadaprabhaNewsNetwork |  
Published : Jun 07, 2024, 12:32 AM IST
6ಕೆಎಂಎನ್ ಡಿ20 | Kannada Prabha

ಸಾರಾಂಶ

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಲಾಗಿರುವ ಮೂರು ಹೊಸ ಕ್ರಿಮಿನಲ್ ಕಾಯ್ದೆಗಳು ಜಾರಿಗೆ ಬರಲಿವೆ. ಈ ಹಿಂದೆ ಬ್ರಿಟಿಷರ ಕಾಲದಲ್ಲಿ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯ ಸಂಹಿತೆ ಮತ್ತು 1872 ಸಾಕ್ಷಿ ಸಂಹಿತೆಗೆ ತಿದ್ದುಪಡಿ ಮಾಡಿ ಈಗ ಭಾರತೀಯ ನ್ಯಾಯ ಸಂಹಿತೆ, ನಾಗರಿಕ ಸುರಕ್ಷೆ ಹಾಗೂ ಸಾಕ್ಷಿ ಕಾಯ್ದೆ ಎಂದು ಬದಲಾವಣೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಕೇಂದ್ರ ಸರ್ಕಾರ ಜು.1ರಿಂದ ಜಾರಿಗೆ ತರಲಿರುವ ಹೊಸ ಕ್ರಿಮಿನಲ್ ಕಾಯ್ದೆಗಳಿಂದ ನ್ಯಾಯಾಲಯದಲ್ಲಿ ತ್ವರಿತ ವಿಚಾರಣೆಯೊಂದಿಗೆ ಶೀಘ್ರ ನ್ಯಾಯದಾನಕ್ಕೆ ಸಹಕಾರವಾಗುತ್ತದೆ ಎಂದು ಜೆಎಂಎಫ್‌ಸಿ 2ನೇ ಅಪರ ಸಿವಿಲ್ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಪ್ರೀತಂ ಡೇವಿಡ್ ಜಿ. ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ನ್ಯಾಯಾಂಗ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ, ನ್ಯಾಯ ಸಂಹಿತೆ ಮತ್ತು ಸಾಕ್ಷಿ ಅಧಿನಿಯಮ ಕುರಿತು ಮದ್ದೂರು ವೃತ್ತದ ಪೊಲೀಸರಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಕಾಯ್ದೆಗಳ ಕುರಿತು ಪ್ರಧಾನ ಭಾಷಣ ಮಾಡಿದರು.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಲಾಗಿರುವ ಮೂರು ಹೊಸ ಕ್ರಿಮಿನಲ್ ಕಾಯ್ದೆಗಳು ಜಾರಿಗೆ ಬರಲಿವೆ. ಈ ಹಿಂದೆ ಬ್ರಿಟಿಷರ ಕಾಲದಲ್ಲಿ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯ ಸಂಹಿತೆ ಮತ್ತು 1872 ಸಾಕ್ಷಿ ಸಂಹಿತೆಗೆ ತಿದ್ದುಪಡಿ ಮಾಡಿ ಈಗ ಭಾರತೀಯ ನ್ಯಾಯ ಸಂಹಿತೆ, ನಾಗರಿಕ ಸುರಕ್ಷೆ ಹಾಗೂ ಸಾಕ್ಷಿ ಕಾಯ್ದೆ ಎಂದು ಬದಲಾವಣೆ ಮಾಡಲಾಗಿದೆ ಎಂದರು.

ಪ್ರಮುಖ ಮೂರು ಹೊಸ ಕ್ರಿಮಿನಲ್ ಕಾಯ್ದೆಗಳಲ್ಲಿ ಭಯೋತ್ಪಾದನೆಗೆ ಆಸ್ತಿ ಮುಟ್ಟುಗೋಲು, ಲೈಂಗಿಕ ಅಪರಾಧ, ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರಕ್ಕೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಹಾಗೂ ದೇಶ ವಿರೋಧಿ ಕೃತ್ಯಕ್ಕೆ ಜೀವಾವಧಿ ಶಿಕ್ಷೆ ಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕ್ರಿಮಿನಲ್ ಕಾಯ್ದೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ಈ ಎಲ್ಲಾ ಕಾಯ್ದೆಗಳು ಜಾರಿಗೆ ಬಂದ ನಂತರ ಪೊಲೀಸರು 90 ದಿನದಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಬೇಕು. 180 ದಿನದಲ್ಲಿ ತನಿಖೆ ಮುಗಿಸಿ ವಿಚಾರಣೆಗೆ ಕಳಿಸುವುದು ಕಡ್ಡಾಯವಾಗಿದೆ ಎಂದು ಸೂಚಿಸಿದರು.

ಈ ಎಲ್ಲಾ ಹೊಸ ಕ್ರಿಮಿನಲ್ ಕಾಯ್ದೆಗಳಿಂದ ನ್ಯಾಯಾಲಯದಲ್ಲಿ ತ್ವರಿತ ವಿಚಾರಣೆ ಜೊತೆಗೆ ನೊಂದವರಿಗೆ ಶೀಘ್ರ ನ್ಯಾಯದಾನ ಮತ್ತು ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸಲು ಸಾಧ್ಯವಾಗುತ್ತದೆ. ಪೊಲೀಸರು ಹೊಸ ಕಾನೂನುಗಳನ್ನು ಅಧ್ಯಯನ ನಡೆಸುವುದರೊಂದಿಗೆ ಕಾನೂನುಗಳ ಸಮರ್ಪಕ ಜಾರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಾಗಾರದಲ್ಲಿ ಮದ್ದೂರು ವೃತ್ತ ನಿರೀಕ್ಷಕ ಕೆ.ಆರ್. ಪ್ರಸಾದ್, ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ. ಪಿಎಸ್ಐಗಳಾದ ಮಂಜುನಾಥ, ನರೇಶ್ ಕುಮಾರ್, ಮಲ್ಲಪ್ಪ ಸಂಗಪ್ಪ ಕಂಬಾರ, ಜಮೀರ್ ಅಹಮದ್, ಸಂಚಾರಿ ಠಾಣೆ ಪಿಎಸ್ಐ ಜೆ.ಎಂ.ಮಹೇಶ್. ಸರೋಜಾ ಬಾಯಿ ಸೇರಿದಂತೆ ವಿವಿಧ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ