ಗ್ರಾಮಾಂತರಕ್ಕೆಪರಿಸರದಲ್ಲಿ ತಾಪಮಾನ ಏರಿಕೆಗೆ ಜಗತ್ತಿನ ಜನಸಂಖ್ಯಾ ಸ್ಫೋಟವೇ ಪ್ರಮುಖ ಕಾರಣ

KannadaprabhaNewsNetwork |  
Published : Jun 07, 2024, 12:32 AM IST
63 | Kannada Prabha

ಸಾರಾಂಶ

ಇಂದು ಪರಿಸರ ನಾಶದಿಂದ ತಾಪಮಾನ ಏರಿಕೆ ಕಂಡಿದ್ದು, ಪರಿಣಾಮವಾಗಿ ಜನರು ಸಾಯುವಂತ ಪರಿಸ್ಥಿತಿ ತಲುಪಿದ್ದಾರೆ

ಕನ್ನಡಪ್ರಭ ವಾರ್ತೆ ಬನ್ನೂರು

ಪರಿಸರದಲ್ಲಿ ತಾಪಮಾನ ಏರಿಕೆಗೆ ಜಗತ್ತಿನ ಜನಸಂಖ್ಯಾ ಸ್ಫೋಟವೇ ಪ್ರಮುಖ ಕಾರಣವಾಗಿದೆ ಎಂದು ನಿವೃತ್ತ ಉಪ ಅರಣ್ಯಸಂರಕ್ಷಣಾಧಿಕಾರಿ ಹುಚ್ಚಯ್ಯ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಜಿಪಂ ಮತ್ತು ಸಾಮಾಜಿಕ ಅರಣ್ಯವಲಯ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಮತ್ತು ಅಂತರಾಷ್ಷ್ರೀಯ ಜೀವ ವೈವಿದ್ಯ ದಿನಾಚರಣೆಯನ್ನು ಸಸಿಗಳಿಗೆ ನೀರು ಹಾಕುವ ಉದ್ಘಾಟಿಸಿ, ಅವರು ಮಾತನಾಡಿದರು.

ಇಂದು ಪರಿಸರ ನಾಶದಿಂದ ತಾಪಮಾನ ಏರಿಕೆ ಕಂಡಿದ್ದು, ಪರಿಣಾಮವಾಗಿ ಜನರು ಸಾಯುವಂತ ಪರಿಸ್ಥಿತಿ ತಲುಪಿದ್ದಾರೆ ಎಂದು ತಿಳಿಸಿದರು. ಇದಕ್ಕೆಲ್ಲ ಪ್ರಮುಖ ಕಾರಣ , ಅಭಿವೃದ್ದಿಯ ಹೆಸರಿನಲ್ಲಿ ಹೆಚ್ಚುತ್ತಿರುವಂತ ಕೈಗಾರಿಕರಣ, ಜನಸಂಖ್ಯಾ ಸ್ಫೋಟವೇ ಕಾರಣವಾಗಿದೆ ಎಂದರು. ಇಂದು ಪ್ರತಿಯೊಬ್ಬರು ಶೀತಲಿಕರಣ ಯಂತ್ರ ಬಳಸುತ್ತಿದ್ದು, ಅದರಿಂದ ಬಿಡುಗಡೆಯಾಗುವಂತ ಕಾರ್ಬನ್ ಮೋನಾಕ್ಸೈಡ್ ಪರಿಸರದ ಓಜೋನ್ ಪದರವನ್ನು ಹಾಳು ಮಾಡುತ್ತಿದೆ ಎಂದರು. ಇದರಿಂದ ವಿದ್ಯಾರ್ಥಿಗಳು ತಮ್ಮ ಪರಿಸರ ರಕ್ಷಣೆಗೆ ಮುಂದಾಗಿ, ಮುಂದಿನ ಪೀಳಿಗೆಯ ರಕ್ಷಣೆಗೆ ಶ್ರಮಿಸಬೇಕಿದೆ ಎಂದರು.

ರೈತ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಸರ್ಕಾರ ಅನೇಕ ವಿವಿಧ ಯೋಜನೆ ಮೂಲಕ ಗಿಡ ನಡುವಂತ ಕಾರ್ಯಕ್ರಮ ಮಾಡುತ್ತದೆ ಅದರೆ ಅದನ್ನು ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಂದ ರಕ್ಷಣೆ ಮಾಡಿ ಉಳಸಿ ಬೆಳಸುವಂತ ಕಾರ್ಯ ರೈತರಿಂದ ಆಗಬೇಕು ಎಂದು ತಿಳಿಸಿದರು.

ಪೊಲೀಸ್‌ ಇನ್‌ಸ್ಪೆಕ್ಟರ್‌ ಪುನೀತ್, ಕೃಷಿ ಅಧಿಕಾರಿ ವಿಶಾಲು, ಪ್ರಾಂಶುಪಾಲ ರವೀಶ್, ರೈತ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಉಪವಲಯ ಅರಣ್ಯಾಧಿಕಾರಿ ಆಂತೋನಿ ಸ್ವಾಮಿ, ವಲಯ ಅರಣ್ಯಾಧಿಕಾರಿ ಎಸ್.ಡಿ. ರಾಜೇಶ್, ನಿವೃತ್ತ ಉಪ ಅರಣ್ಯಸಂರಕ್ಷಣಾಧಿಕಾರಿ ಹುಚ್ಚಯ್ಯ, ಆರ್. ವಿನಯಕುಮಾರ್, ಎಂ. ಮಹದೇವಸ್ವಾಮಿ, ರೈತ ಸಂಘದ ಹೋಬಳಿ ಅಧ್ಯಕ್ಷ ಹುಚ್ಚೇಗೌಡ, ಶಂಕರ್, ರಾಜು, ದಿನೇಶ್, ನಾರಾಯಣಿ, ಚಂದ್ರು, ಶಿವಣ್ಣ, ಕೇಶವಮೂರ್ತಿ, ಮಹದೇವು, ರಮೇಶ್, ಕಂಪೇಗೌಡ, ಮಹೇಶ್, ರವಿ, ಹೂವಯ್ಯ, ಕುಮಾರ್, ಶಿವಮಲ್ಲಪ್ಪ, ಶಿವರುದ್ರಪ್ಪ, ರಮೇಶ್ ಇದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!