ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೊಸ ಕಾಯಕಲ್ಪ

KannadaprabhaNewsNetwork |  
Published : Dec 09, 2024, 12:47 AM IST

ಸಾರಾಂಶ

ಪ್ರಸಾದ್‌ ಯೋಜನೆಯಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾದ್ವಾರ, ವೇಸ್ಟ್ ಮೆನೆಜ್‌ಮೆಂಟ್, ದೇವಳದ ಕಚೇರಿ, ಮೂಲಭೂತ ಸೌಕರ್ಯ, ಗೋಶಾಲೆ, ಮಂಟಪ, ವಿಐಪಿ ವ್ಯವಸ್ಥೆ, ಪ್ರಸಾದ ಕೌಂಟರ್, ಆವರಣಗೋಡೆ, ಆಡಿಟೋರಿಯಂ ಕಲಾಗ್ರಾಮ ನಿರ್ಮಾಣವಾಗಲಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವ ದೇವಳದ ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ‘ಪ್ರಸಾದ್‌’ ಯೋಜನೆಯಡಿ ೫೫ ಕೋಟಿ ರುಪಾಯಿಯ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಆಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಕೇಂದ್ರ ಪ್ರವಾಸೋಧ್ಯಮ ಇಲಾಖೆಯ ಪ್ರಸಾದ್‌ ಯೋಜನೆಯಡಿ ದೇವಸ್ಥಾನವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ರಾಜ್ಯ ಇಲಾಖೆಗೆ ಅ. ೨೫ ರಂದು ಪ್ರಸ್ತಾವನೆಯನ್ನು ಕಳುಹಿಸಲಾಗಿತ್ತು. ಇದೇ ಪ್ರಸ್ತಾವನೆಯನ್ನು ಇದೀಗ ರಾಜ್ಯ ಸರಕಾರದವು ಕೇಂದ್ರ ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಿದ್ದು, ಸರ್ಕಾರವು ಡಿ. ೬ ರಂದು ಈ ಪ್ರಸ್ತಾವನೆಯನ್ನು ಕೇಂದ್ರ ಪ್ರವಾಸೋದ್ಯಮ ಇಲಖೆಗೆ ಕಳುಹಿಸಿದೆ. ಪ್ರಸಾದ್‌ ಯೋಜನೆಯಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾದ್ವಾರ, ವೇಸ್ಟ್ ಮೆನೆಜ್‌ಮೆಂಟ್, ದೇವಳದ ಕಚೇರಿ, ಮೂಲಭೂತ ಸೌಕರ್ಯ, ಗೋಶಾಲೆ, ಮಂಟಪ, ವಿಐಪಿ ವ್ಯವಸ್ಥೆ, ಪ್ರಸಾದ ಕೌಂಟರ್, ಆವರಣಗೋಡೆ, ಆಡಿಟೋರಿಯಂ ಕಲಾಗ್ರಾಮ, ಯಾತ್ರಿ ನಿವಾಸ್, ಹೊಸ ವಿನ್ಯಾಸದ ಬೆಳಕಿನ ವ್ಯವಸ್ಥೆ ಮತ್ತು ಲ್ಯಾಂಡ್ ಸ್ಕೇಪ್ ನಿರ್ಮಾಣವಾಗಲಿದೆ ಎಂದು ಶಾಸಕರು ತಿಳಿಸಿದ್ದಾರೆ. ಸಂಸದರು ಸಹಕರಿಸಿ: ಪ್ರಸಾದ್‌ ಯೋನೆಯು ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಅನುದಾನವಾಗಿದ್ದು, ಸಂಸದರು ಈ ಬಗ್ಗೆ ಫಾಲೋಆಪ್ ಮಾಡುವ ಮೂಲಕ ಸಹಕಾರ ನೀಡಬೇಕು. ಕೇಂದ್ರ ಪ್ರವಾಸೋದ್ಯಮ ಇಲಾಖೆ ಮತ್ತು ಸಚಿವರಿಗೆ ಒತ್ತಡ ತರುವ ಕೆಲಸವನ್ನು ಮಾಡಬೇಕು ಎಂದು ಸಂಸದ ಬ್ರಿಜೇಶ್ ಚೌಟ ಅವರಲ್ಲಿ ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!