ವೆನ್ಲಾಕ್ ಆಸ್ಪತ್ರೆಯ ಹೊಸ ಬ್ಲಾಕ್‌ನಲ್ಲಿ ನೂತನ ಶಸ್ತ್ರಚಿಕಿತ್ಸೆ ಕೊಠಡಿ ಕಾರ್ಯಾರಂಭ

KannadaprabhaNewsNetwork |  
Published : Nov 09, 2024, 01:15 AM IST
ಕಾರ್ಯಾರಂಭಗೊಂಡ ವೆನ್ಲಾಕ್‌ನ ನೂತನ ಶಸ್ತ್ರಚಿಕಿತ್ಸಾ ಕೊಠಡಿ | Kannada Prabha

ಸಾರಾಂಶ

ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಶಸ್ತ್ರಚಿಕಿತ್ಸಾ ಕೊಠಡಿಗಳು ಹಾಗೂ ವಾರ್ಡ್‍ಗಳು ಈ ಭಾಗದ ಬಡವರಿಗೆ ವರದಾನ ಆಗಲಿದೆ ಎಂದು ವೆನ್ಲಾಕ್‌ ಆಸ್ಪತ್ರೆ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ. ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ವೆನ್ಲಾಕ್‌ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣಗೊಂಡ ಹೊಸ ಶಸ್ತ್ರಚಿಕಿತ್ಸಾ ಕಟ್ಟಡದಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಶಸ್ತ್ರಚಿಕಿತ್ಸೆ ಆರಂಭಿಸಲಾಗಿದ್ದು, ಮೊದಲ ದಿನವೇ ಏಳು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಡಿಸೆಂಬರ್ 1 ರಿಂದ ಮೂಳೆ ವಿಭಾಗದ ಶಸ್ತ್ರ ಚಿಕಿತ್ಸಾ ಕೊಠಡಿ ಪ್ರಾರಂಭವಾಗಲಿದ್ದು, ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

ತಜ್ಞ ವೈದ್ಯ ಡಾ. ಸದಾನಂದ ಪೂಜಾರಿ ಹಾಗೂ ಆಸ್ಪತ್ರೆ ಸಿಬ್ಬಂದಿ ಕಾರ್ಯಾರಂಭಕ್ಕೆ ಸಹಕಾರ ಮಾಡಿದ್ದಾರೆ. ಮೊದಲ ದಿನ ಡಾ. ಸುರೇಶ ಪೈ ತಂಡದಿಂದ ಥೋರಾಸಿಕ್ ಸರ್ಜರಿ ಮಾಡಲಾಯಿತು. ಡಾ. ಹೇಮಲತಾ ಹಾಗೂ ಡಾ. ವಿಶ್ವವಿಜೇತ ತಂಡ ಐದು ಮಂದಿಯ ಮೂಗಿನ ಶಸ್ತ್ರಚಿಕಿತ್ಸೆ ನಡೆಸಿದರು. ಡಾ. ಅರ್ಜುನ್ ಶೆಟ್ಟಿ ತಂಡ ಮೆದುಳಲ್ಲಿ ರಕ್ತ ಹೆಪ್ಪು ಗಟ್ಟಿದ ರೋಗಿಗೆ ತುರ್ತು ಶಸ್ತ್ರ ಚಿಕಿತ್ಸೆ ಮಾಡಿದರು. ಡಾ. ಸುರೇಶ ಭಟ್ ಅರಿವಳಿಕೆ ತಂಡದ ಮುಖ್ಯಸ್ಥರಾಗಿದ್ದು ಎಲ್ಲ ಶಸ್ತ್ರ ಚಿಕಿತ್ಸೆ ಯಾವುದೇ ತೊಂದರೆಯಾಗದೆ ನೆರವೇರಿತು.

ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ನರ್ಸಿಂಗ್‌ ವಿಭಾಗದ ಅಧಿಕಾರಿಗಳಾದ ಶೈಲಾ, ಜೆಸಿಂತಾ, ಅಶ್ವಿನಿ, ರೇಷ್ಮ, ಅಲ್ವಿನ್‌ ಮಿನೇಜಸ್‌, ಆಪರೇಷನ್‌ ಕೊಠಡಿಯ ಟೆಕ್ನಿಷಿಯನ್‍ಗಳಾದ ಧನು, ಶ್ರದ್ದಾ, ಹೇಮಾಶ್ರೀ, ಅರ್ಪಿತಾ, ಪ್ರದೀಪ್ ಹಾಗೂ ಡಿ ಗ್ರೂಪ್ ನೌಕರರಾದ ಜಯಪ್ರಕಾಶ್ ಮತ್ತು ಹರೀಶ್ ಇದ್ದರು. ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಶಸ್ತ್ರಚಿಕಿತ್ಸಾ ಕೊಠಡಿಗಳು ಹಾಗೂ ವಾರ್ಡ್‍ಗಳು ಈ ಭಾಗದ ಬಡವರಿಗೆ ವರದಾನ ಆಗಲಿದೆ ಎಂದು ವೆನ್ಲಾಕ್‌ ಆಸ್ಪತ್ರೆ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ. ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ನೀರು ದರ ಶೇ.3 ಹೆಚ್ಚಳ
ಇಂದು ವರ್ಣರಂಜಿತ ಬೆಂಗಳೂರು ಕರಗ