ರೈತರಿಗೆ ಹೊಸ ತಂತ್ರಜ್ಞಾನ ಬಲ ತುಂಬಬೇಕು: ಕೋಟ

KannadaprabhaNewsNetwork |  
Published : Oct 20, 2026, 02:00 AM IST
ಕೃಷಿ ಮತ್ತು ತೋಟಗಾರಿಕೆ ಮೇಳವನ್ನು ಸಂಸದ ಕೋಟ ಅವರು ಉದ್ಘಾಟಿಸಿದರು | Kannada Prabha

ಸಾರಾಂಶ

ಕೃಷಿ - ತೋಟಗಾರಿಕೆಯನ್ನು ನಂಬಿದವರ ಬದುಕು ಹಾಳಾಗುವುದಿಲ್ಲ. ಆದಕ್ಕೆ ಪೂರಕವಾಗಿ ಹೊಸ ತಳಿಗಳು, ಹೊಸ ತಂತ್ರಜ್ಞಾನಗಳಿಂದ ಕೃಷಿಕರಿಗೆ ಇನ್ನಷ್ಟು ಬಲ ತುಂಬಬೇಕು, ಬೆಳೆಗಳ ಮೌಲ್ಯವರ್ಧನೆಯಂತಹ ಯೋಜನೆಗಳನ್ನು ಪರಿಣಾಮಯಾಗಿ ರೈತರನ್ನು ತಲುಪಿಸಿ, ಅವರು ಸ್ವಾವಲಂಬಿಗಳಾಗಬೇಕು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿ : ಕೃಷಿ - ತೋಟಗಾರಿಕೆಯನ್ನು ನಂಬಿದವರ ಬದುಕು ಹಾಳಾಗುವುದಿಲ್ಲ. ಆದಕ್ಕೆ ಪೂರಕವಾಗಿ ಹೊಸ ತಳಿಗಳು, ಹೊಸ ತಂತ್ರಜ್ಞಾನಗಳಿಂದ ಕೃಷಿಕರಿಗೆ ಇನ್ನಷ್ಟು ಬಲ ತುಂಬಬೇಕು, ಬೆಳೆಗಳ ಮೌಲ್ಯವರ್ಧನೆಯಂತಹ ಯೋಜನೆಗಳನ್ನು ಪರಿಣಾಮಯಾಗಿ ರೈತರನ್ನು ತಲುಪಿಸಿ, ಅವರು ಸ್ವಾವಲಂಬಿಗಳಾಗಬೇಕು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ, ಕೃಷಿ ಮತ್ತು ತೋಟಗಾರಿಕೆ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಪೂರ್ ಮಾತನಾಡಿ, ಕೃಷಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ದೇವರಾಜ ಅರಸು ಅವರು ಜಾರಿಗೆ ತಂದ ಭೂಸುಧಾರಣೆ ಕಾಯ್ದೆಯಿಂದ ಕರಾವಳಿಯ ಸುಮಾರು 6 ಲಕ್ಷ ಕುಟುಂಬಗಳು ಭೂಮಾಲೀಕ, ಸ್ವಯಂ ಕೃಷಿಕರಾದರು, ಇಂದು ಯುವಜನತೆ ಕೃಷಿಯತ್ತ ಗಮನ ಹರಿಸಬೇಕು ಎಂದರು.ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿಯ ಕುಲಪತಿ ಡಾ. ಎಂ.ವಿ ಧನಂಜಯ ಅವರು, ಪ್ರಾಸ್ತಾವಿಕವಾಗಿ ಮಾತನಾಡಿ, ಕರಾವಳಿ ಕರ್ನಾಟಕದ ಕೃಷಿ ಹೆಚ್ಚು ಲಾಭದಾಯಕವಾಗಿದೆ. ಹವಾಮಾನ ಸಹಿಷ್ಠುತೆ, ಸುಸ್ಥಿರ ಮತ್ತು ತಂತ್ರಜ್ಞಾನ ಆಧರಿಸಿ ಕೃಷಿ ಮಾಡಬೇಕು, ಮೌಲ್ಯವರ್ಧನೆಗೆ ಇರುವ ಅವಕಾಶವನ್ನು ಬಳಸಿಕೊಂಡು ಉದ್ಯಮಿಗಳಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯಿಂದ ‘ಚಂದದ ಮನೆಯೊಡತಿಯಿಂದ ಅಂದದ ತಾರಸಿ ತೋಟ’ ಎಂಬ ತಾಂತ್ರಿಕ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರನ್ನು ಹಾಗೂ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಭತ್ತದ ಬೆಳೆ ಸ್ಪರ್ಧೆಯಲ್ಲಿ ವಿಜೇತರಾದ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಶಿವಮೊಗ್ಗ ಕೃ.ತೋ. ವಿವಿ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಹೆಚ್.ಡಿ ದೇವಿ ಕುಮಾರ್, ಹೆಚ್.ಎಸ್ ಶಶಾಂಕ್, ಟಿ.ಬಸವರಾಜ ನಾಯ್ಕ್ ಹಾಗೂ ಡಾ. ಶಾಮರಾವ್ ಜಹಾಗೀರದಾರ್, ಉಡುಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ ಕುಮಾರ್ ಕೊಡ್ಗಿ, ಬ್ರಹ್ಮಾವರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪಿ. ವೈಕುಂಠ ಹೇರ್ಳೆ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಪೂರ್ಣಿಮ ಜಿ.ಸಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ, ಕೃ.ತೋ. ವಿವಿ ಶಿಕ್ಷಣ ನಿರ್ದೇಶಕ ಡಾ. ಬಿ ಹೇಮ್ಲಾ ನಾಯಕ್, ಸಂಶೋಧನಾ ನಿರ್ದೇಶಕ ಡಾ. ಶ್ರೀಧರ ಎಸ್, ವಿಸ್ತರಣಾ ನಿರ್ದೇಶಕ ಡಾ. ರಾಘವೇಂದ್ರ ಕೆ ಮೆಸ್ತಾ ಮತ್ತಿತರರು ಉಪಸ್ಥಿತರಿದ್ದರು.

ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ರೇವಣ್ಣ ಸ್ವಾಗತಿಸಿ, ಪ್ರವೀಣ್ ಎಸ್ ಕುಂಡಲ ನಿರೂಪಿಸಿ, ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ನವೀನ್ ಎನ್.ಈ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದಾಪುರ: ಆರನೇ ವರ್ಷದ ಸಾರ್ವಜನಿಕ ಆಯುಧಪೂಜೆ ಇಂದು
ಮೈಸೂರು ಕೊಡಗು ಗೌಡ ಸಮಾಜ ಕಾವೇರಿ ತೀರ್ಥ ವಿತರಣೆ