ಅಕ್ಷೇಪಾರ್ಹ ಸ್ಥಳದಲ್ಲೇ ಹೊಸ ವೈನ್‌ಶಾಪ್‌

KannadaprabhaNewsNetwork |  
Published : Nov 02, 2026, 02:30 AM IST
ಪಟ್ಟಣದಲ್ಲಿ  | Kannada Prabha

ಸಾರಾಂಶ

ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದ ಬಳಿಯ ಚರ್ಚ್ ಹತ್ತಿರ ತೆರೆಯಲು ಉದ್ದೇಶಿಸಿರುವ ಹೊಸ ಮದ್ಯದಂಗಡಿ ಅಕ್ಷೇಪಾರ್ಹ ಸ್ಥಳದಲ್ಲಿಯೇ ಇದೆ ಎಂದು ಅಬಕಾರಿ ಇಲಾಖೆಯೇ ಪರಿಶೀಲನೆ ನಡೆಸಿ ಚಾಮರಾಜನಗರ ಜಿಲ್ಲಾ ಅಬಕಾರಿ ಉಪ ಆಯುಕ್ತರಿಗೆ ಸಲ್ಲಿಸಿರುವ ವರದಿಯಲ್ಲಿ ಬಹಿರಂಗವಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದ ಬಳಿಯ ಚರ್ಚ್ ಹತ್ತಿರ ತೆರೆಯಲು ಉದ್ದೇಶಿಸಿರುವ ಹೊಸ ಮದ್ಯದಂಗಡಿ ಅಕ್ಷೇಪಾರ್ಹ ಸ್ಥಳದಲ್ಲಿಯೇ ಇದೆ ಎಂದು ಅಬಕಾರಿ ಇಲಾಖೆಯೇ ಪರಿಶೀಲನೆ ನಡೆಸಿ ಚಾಮರಾಜನಗರ ಜಿಲ್ಲಾ ಅಬಕಾರಿ ಉಪ ಆಯುಕ್ತರಿಗೆ ಸಲ್ಲಿಸಿರುವ ವರದಿಯಲ್ಲಿ ಬಹಿರಂಗವಾಗಿದೆ.

ಪಟ್ಟಣದ ಅವರ್ ಲೇಡಿ ಆಫ್ ಲೂರ್ಡ್ಸ್ ಚರ್ಚ್‌ನ ಹತ್ತಿರ ಕಳೆದ ಜು.೨೦ ರಂದು ನಡೆದ ಹರಾಜಿನಲ್ಲಿ ಬಿಡ್ ಪಡೆದಿರುವ ಹೊಸ ಮದ್ಯದಂಗಡಿ ತೆರೆಯುವ ಪ್ರಸ್ತಾವನೆಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು.

ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕರು ಮತ್ತು ಸ್ಥಳೀಯ ನಿವಾಸಿಗಳು ದೂರು ನೀಡಿದ್ದರು.ಚರ್ಚ್ ಮತ್ತು ಶಾಲೆಯ 100 ಮೀಟರ್ ವ್ಯಾಪ್ತಿಯೊಳಗೆ ಹೊಸದಾಗಿ ಮದ್ಯದಂಗಡಿ ತೆರೆಯಲು ಪ್ರಸ್ತಾವಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಈ ದೂರಿನ ಹಿನ್ನೆಲೆಯಲ್ಲಿ ಕಳೆದ ಸೆ.೩ ರಂದು ಗುಂಡ್ಲುಪೇಟೆ ಅಬಕಾರಿ ವಲಯ ನಿರೀಕ್ಷಕರು ಹಾಗೂ ಇತರೆ ಅಧಿಕಾರಿಗಳು,ದೂರುದಾರರು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಪರಿಶೀಲನೆ ವೇಳೆ ಗೂಗಲ್ ಮ್ಯಾಪ್ ಮೂಲಕ ದೂರವನ್ನು ಅಳೆದಾಗ,ಉದ್ದೇಶಿತ ಕಟ್ಟಡದ ಮೊದಲನೇಯ ರೋಲಿಂಗ್ ಶೆಟರ್‌ನಿಂದ ಚರ್ಚ್ ಹಾಗೂ ಶಾಲೆಯ ಗೇಟ್‌ವರೆಗೆ 88 ಮೀಟರ್ ಮತ್ತು 2 ನೇಯ ರೋಲಿಂಗ್ ಶೆಟರ್‌ನಿಂದ 92 ಮೀಟರ್ ದೂರವಿದೆ ಎಂದು ಖಚಿತವಾಗಿದೆ.

ಕರ್ನಾಟಕ ಅಬಕಾರಿ (ಸಾಮಾನ್ಯ ಷರತ್ತು) ನಿಯಮಗಳು 1967 ರ ನಿಯಮ 5 ರ ಪ್ರಕಾರ,ಚರ್ಚ್,ಶಾಲೆ,ಆಸ್ಪತ್ರೆ, ಮಸೀದಿ,ದೇವಸ್ಥಾನಗಳಂತಹ ಆಕ್ಷೇಪಾರ್ಹ ಸ್ಥಳಗಳಿಂದ 100 ಮೀಟರ್ ವ್ಯಾಪ್ತಿಯೊಳಗೆ ಮದ್ಯದಂಗಡಿ ಇರಬಾರದು ಎಂದಿದೆ.

ಆ ರೀತಿ ಅಳೆದಾಗಲೂ ದೂರ 100 ಮೀಟರ್‌ಗಿಂತ ಕಡಿಮೆ ಬರುವುದರಿಂದ,ಉದ್ದೇಶಿತ ಕಟ್ಟಡವು ನಿಯಮ 5 ರೀತ್ಯಾ ಆಕ್ಷೇಪಾರ್ಹ ಸ್ಥಳದಲ್ಲೇ ಇರುತ್ತದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಅನುಮಾನ?:

ಇದೇ ವಿಚಾರದಲ್ಲಿ ಪುರಸಭೆಯ ನಡೆ ಕೂಡ ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.ಪುರಸಭೆ ಮೊದಲು ಈ ಮದ್ಯದಂಗಡಿಗೆ ಟ್ರೇಡ್ ಲೈಸನ್ಸ್ ನೀಡಿತ್ತು. ನಂತರ ಸಾರ್ವಜನಿಕರ ದೂರು ಬಂದ ಕಾರಣ ಟ್ರೇಡ್ ಲೈಸನ್ಸ್ ರದ್ದುಪಡಿಸಿತ್ತು.ಆದರೆ ಬಳಿಕ ಮತ್ತೆ ಅದೇ ಮದ್ಯದಂಗಡಿಗೆ ಪುರಸಭೆ ಟ್ರೇಡ್ ಲೈಸನ್ಸ್ ನೀಡಿದೆ.

ಯಾವ ಕೈವಾಡ?:

ಅಬಕಾರಿ ಇಲಾಖೆ ವರದಿಯಲ್ಲೇ ಸ್ಥಳ ಅಕ್ಷೇಪಾರ್ಹ ಎಂದು ಸ್ಪಷ್ಟವಾಗಿದ್ದರೂ,ಅದರೆ ಇಲ್ಲಿನ ಪುರಸಭೆ ರದ್ದು ಮಾಡಿದ್ದ ಲೈಸನ್ಸ್‌ನ್ನು ಮತ್ತೆ ಹೇಗೆ ನೀಡಿತು ಎಂಬುದು ಜನರ ಪ್ರಶ್ನೆಯಾಗಿದೆ.ಆದರೆ ಮತ್ತೆ ಪುರಸಭೆ ಟ್ರೇಡ್‌ ಲೈಸನ್ಸ್‌ ನೀಡಿದ ಹಿಂದೆ ಯಾರ ಕೈವಾಡ ಇದೆ ಎಂಬುದರ ಬಗ್ಗೆ ಪಟ್ಟಣದಲ್ಲಿ ಚರ್ಚೆ ನಡೆಯುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕ್ರಮ: ಸಹಕಾರ ಸಚಿವ ಲಕ್ಷ್ಮಣ ಸವದಿ
ನದಿ ಜೋಡಣೆ ವಿರೋಧಿಸಿ ಬೃಹತ್‌ ಹೋರಾಟಕ್ಕೆ ಅಣಿ