ಯಲಬುರ್ಗಾ: ನವಜೋಡಿಗಳು ಸಮಾಜದಲ್ಲಿ ಆದರ್ಶ ಜೀವನ ನಡೆಸುವ ಮೂಲಕ ಮಾದರಿಯಾಗಬೇಕು ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.
ದಾಂಪತ್ಯ ಜೀವನಕ್ಕೆ ಕಾಲಿಡುವ ಸತಿ-ಪತಿಗಳು ಸಹಬಾಳ್ವೆಯಿಂದ ಜೀವನ ನಡೆಸಬೇಕು. ಇಂದು ಮದುವೆಯಾದ ಕಲವೇ ವರ್ಷಗಳಲ್ಲಿ ಕುಟುಂಬಗಳು ಬೇರೆಯಾಗುತ್ತಿರುವುದು ವಿಷಾದನೀಯ ಸಂಗತಿ. ಅತ್ತೆ-ಮಾವ-ಗಂಡನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಗ್ರಾಮದ ಗುರು-ಹಿರಿಯರು, ಯುವಕರು ಒಗ್ಗಟ್ಟಾಗಿ ಜಾತ್ರೆ ನಡೆಸಿಕೊಂಡು ಬರುತ್ತಿರುವ ಕಾರ್ಯ ಶ್ಲಾಘನೀಯ. ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟ.ಇದಕ್ಕಾಗಿ ಅನಗತ್ಯ ಹಣ ವ್ಯರ್ಥ ಮಾಡುವ ಅಗತ್ಯವಿಲ್ಲ.ಸಾಮೂಹಿಕ ವಿವಾಹದಲ್ಲಿ ಸಂಸಾರ ಜೀವನಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಆದರ್ಶವಾಗಲಿದೆ. ಇದು ಕುಟುಂಬಕ್ಕೆ ಮಾತ್ರವಲ್ಲದೇ ದೇಶದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಮಿತ ಸಂತಾನ, ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಎಂದರು.
ಹಾಲುಮತ ಸಮಾಜದ ಅಧ್ಯಕ್ಷ ವೀರನಗೌಡ ಬಳೂಟಗಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯ. ಗ್ರಾಮ ಶಾಂತಿಯಿಂದ ಕೂಡಿದೆ. ಗ್ರಾಮದಲ್ಲಿ ಭಕ್ತಿ-ಭಾವ ಮೇಳೈಸಿದೆ. ಧಾರ್ಮಿಕ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಧರ ಮುರುಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ, ಯಡ್ಡೋಣಿ ಕೇಶಾವಾನಂದ ಸ್ವಾಮೀಜಿ, ಮಹ್ಮದರಶೀದ್ ಖಾಜಿ, ಷಣ್ಮುಖಪ್ಪಜ್ಜನವರು, ನಾಗಲಿಂಗಪ್ಪಜ್ಜನವರು, ಶರಣಯ್ಯ ಹಿರೇಮಠ, ಹನುಂತಪ್ಪಜ್ಜ ಧರ್ಮರಮಠ ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಬಸಲಿಂಗಪ್ಪ ಭೂತೆ, ಮಲ್ಲನಗೌಡ ಕೋನನಗೌಡ್ರ, ಈರಪ್ಪ ಕುಡಗುಂಟಿ, ಅರವಿಂದಗೌಡ ಪಾಟೀಲ್, ಗ್ರಾಪಂ ಅಧ್ಯಕ್ಷೆ ಹೊಳಿಯಮ್ಮ ಹಳ್ಳಿಕೇರಿ, ಅಲ್ಲಾಸಾಬ್ ದಮ್ಮೂರು, ರಸೂಲಸಾಬ್ ಹಿರೇಮನಿ, ಗುರುಮೂರ್ತಿ ಬಡಿಗೇರ, ಶರಣಬಸಪ್ಪ ದಾನಕೈ, ಹುಲಗಪ್ಪ ಬಂಡಿವಡ್ಡರ, ಬಸವನಗೌಡ ರಾಮಶೆಟ್ಟರ್,ಭೀಮಪ್ಪ ಜರಕುಂಟಿ, ರಿಜ್ವಾನಸಾಬ್ ವಾಲಿಕಾರ ಇದ್ದರು.