ನಿರೂಪಣೆ ಸವಾಲಿನ ಕೆಲಸ: ಡಾ. ರವಿಪ್ರಕಾಶ್‌

KannadaprabhaNewsNetwork |  
Published : Sep 17, 2025, 01:05 AM IST
ಿ್‌ಿ್ಿ | Kannada Prabha

ಸಾರಾಂಶ

ನಿರೂಪಕರು ಒಂದು ಟಿವಿ ವಾಹಿನಿಯ ಪ್ರತಿನಿಧಿಯಂತೆ. ಸಮಾಜದಲ್ಲಿನ ಒಳಿತು ಕೆಡಕುಗಳ ಸುದ್ದಿಗಳನ್ನು ಜನರಿಗೆ ಮನಮುಟ್ಟುವಂತೆ ವಿವರಿಸುವಂತಹ ಕಾರ್ಯವನ್ನು ನಿರ್ವಹಿಸುತ್ತಾರೆ.

ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿರುವ

ಕನ್ನಡಪ್ರಭ ವಾರ್ತೆ, ತುಮಕೂರುನಿರೂಪಕರು ಒಂದು ಟಿವಿ ವಾಹಿನಿಯ ಪ್ರತಿನಿಧಿಯಂತೆ. ಸಮಾಜದಲ್ಲಿನ ಒಳಿತು ಕೆಡಕುಗಳ ಸುದ್ದಿಗಳನ್ನು ಜನರಿಗೆ ಮನಮುಟ್ಟುವಂತೆ ವಿವರಿಸುವಂತಹ ಕಾರ್ಯವನ್ನು ನಿರ್ವಹಿಸುತ್ತಾರೆ. ಇವರ ಜ್ಞಾನಮಟ್ಟದಿಂದ ಆ ವಾಹಿನಿಯ ಘನತೆ ನಿರ್ಧಾರವಾಗಿರುತ್ತದೆ ಇದೊಂದು ಸವಾಲಿನ ಕೆಲಸ ಎಂದು ಎಸ್ ಎಸ್ ಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಸ್ ರವಿಪ್ರಕಾಶ್ ತಿಳಿಸಿದರು. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿರುವ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಿಂದ ಆಯೋಜಿಸಲಾಗಿದ್ದ 3 ದಿನಗಳ ಸುದ್ದಿ ನಿರೂಪಣಾ ಕಾರ್ಯಗಾರ ಉಧ್ಘಾಟಿಸಿ ಮಾತನಾಡಿದರು.ಪತ್ರಕರ್ತರು ಜನರ ಮತ್ತು ಸರ್ಕಾರದ ನಡುವಿನ ಒಂದು ಸೇತುವೆಯಂತೆ ಕೆಲಸಮಾಡುತ್ತಾರೆ. ಪತ್ರಕರ್ತ ತಾನು ಮಾಡುವ ಕೆಲಸಕ್ಕೆ ಪ್ರಾಮಾಣಿಕವಾಗಿ ಇದ್ದಾಗ ಮಾತ್ರ ಸಮಾಜ ಅಭಿವೃದ್ಧಿಯತ್ತ ಸಾಗುತ್ತದೆ. ಪತ್ರಕರ್ತ ಯಾವಾಗಲೂ ಸಮಾಜವನ್ನು ಗಮನಿಸುತ್ತಾ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತಹ ಕೆಲಸವನ್ನು ಮಾಡಬೇಕು. ಇಂದು ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಸಾಕಷ್ಟು ಪತ್ರಕರ್ತರನ್ನು ಪತ್ರಿಕಾರಂಗಕ್ಕೆ ನೀಡಿದೆ. ಅದರಂತೆ ಇಂದು ರಾಜ್ಯದ ಮೂಲೆ ಮೂಲೆಗಳಿಂದ ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಕರೆತಂದು ಅವರಿಗೆ ಅನುಕೂಲವಾಗಲಿ ಎಂದು ಸುದ್ದಿ ನಿರೂಪಣಾ ಕಾರ್ಯಗಾರವನ್ನು ಆಯೋಜಿಸಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಖಾಸಗೀ ವಾಹಿನಿಯ ಹಿರಿಯ ಸುದ್ದಿ ನಿರೂಪಕರಾದ ಶಾಂಕುಂತಲ ಮಾತನಾಡಿ ಪತ್ರಕರ್ತ ಎಂದರೆ ಸಮಾಜದ ಪ್ರತಿಯೊಂದು ವಿಷಯದ ಬಗ್ಗೆ ವಿಮರ್ಶೆ ಮಾಡುವಂತವರಾಗಿರಬೇಕು, ಪ್ರತಿಕೋಧ್ಯಮ ಎಂದರೆ ಕೇವಲ ಸತ್ಯವನ್ನು ಹುಡುಕುವುದು ಮಾತ್ರವಲ್ಲ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಂತಹ ಜವಾಬ್ದಾರಿಯೂ ಕೂಡ ಒಬ್ಬ ನಿಜವಾದ ಪತ್ರಕರ್ತನ ಮೇಲಿರುತ್ತದೆ ಎಂದರು. ಖಾಸಗೀ ವಾಹಿನಿಯ ಇನ್ ಪುಟ್ ಕೋಆರ್ಡಿನೇಟರ್ ಕಾವ್ಯ ಮಾತನಾಡಿ ಒಬ್ಬ ಉತ್ತಮ ಪತ್ರಕರ್ತನಾದವನು ಮಾನವೀಯ ಮೌಲ್ಯಗಳನ್ನು ಬೆಳಸಿಕೊಂಡಾಗ ಮಾತ್ರ ಸಮಾಜದಲ್ಲಿನ ಸಮಸ್ಯೆಗಳನ್ನು ಗುರುತಿಸಲು ಸಾಧ್ಯ ಹಾಗೂ ಅದನ್ನು ಬದಲಾಯಿಸಲೂ ಸಾಧ್ಯ, ಪತ್ರಕರ್ತ ನಿಂತ ನೀರಾಗದೆ ನಿರಂತರ ಅಭ್ಯಾಸದಲ್ಲಿದ್ದಾಗ ಮಾತ್ರ ಅವನು ಪತ್ರಕರ್ತನಾಗಿ ಉಳಿಯುತ್ತಾನೆ ಹಾಗಾಗಿ ಎಲ್ಲಾ ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಿ, ಪ್ರಚಲಿತ ವಿದ್ಯಮಾನಗಳ ಕುರಿತು ಅರಿವಿರಲಿ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಬಿ.ಟಿ ಮುದ್ದೇಶ್, ಖ್ಯಾತ ಕಾದಂಬರಿ ಕಾರರಾದ ಕಮಲಾ ನರಸಿಂಹ, ಹಿರಿಯ ಸುದ್ದಿ ನಿರೂಪಕ ಎಂ.ಜಿ ಹರಿಪ್ರಸಾದ್ ಹಾಗೂ ಮಾಧ್ಯಮ ಅಧ್ಯಯನ ಕೇಂದ್ರದ ಅಧ್ಯಾಪಕರು ಮತ್ತು ಸಿಬ್ಬಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ