ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
೨೦೨೪-೨೫ನೇ ಸಾಲಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪತ್ರಿಕೆ ವಿತರಣೆ ಮಾಡಿಕೊಂಡು ಓದಿ ಎರಡು ಚಿನ್ನದ ಪದಕ ಪಡೆದ ಚಂದನ್ ಎಂದು ಇವರು ಇಂದಿನ ಯುವ ಪೀಳಿಗೆಗೆ ಮಾದರಿ ಎಂದು ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಧ್ಯಕ್ಷರಾದ ಶಂಭುಲಿಂಗ ಮಾತನಾಡುತ್ತಾ ತಿಳಿಸಿದರು.
ಇದೇ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ನಾದೂರು ವಾಸುದೇವ ಅವರು ರಾಜ ಒಕ್ಕೂಟದ ಮಾರ್ಗದರ್ಶಿಗಳಾದ ದಾವಣಗೆರೆ ಕೃಷ್ಣಮೂರ್ತಿ ಚಿತ್ರದುರ್ಗ ಜಿಲ್ಲಾ ಸಂಘದ ಗೌರವ ಅಧ್ಯಕ್ಷರಾದ ತಿಪ್ಪೇಸ್ವಾಮಿ ಇಂಗಳದಾಳ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ ವೇದಿಕೆ ಹಂಚಿಕೊಂಡು ಗೌರವಿಸಿದರು. ಇದೇ ಸಂದರ್ಭದಲ್ಲಿ ಪತ್ರಿಕಾ ವಿತರಕರ ಸಂಘದ ಪದಾಧಿಕಾರಿಗಳಾದ ಕುಮಾರ್ ದುಗ್ಗಪ್ಪ ನಾಗರಾಜ್ ಶೆಟ್ಟಿ ಲಂಕೇಶ್ ರವಿ ಸುನಿಲ್ ಇನ್ನುಳಿದ ಜಿಲ್ಲಾ ಪತ್ರಿಕ ವಿತರಕರು ಭಾಗಿಯಾಗಿದ್ದರು.ಇದೇ ಸಂದರ್ಭದಲ್ಲಿ ಚಂದನ್ ಅವರ ತಂದೆ ಮಲ್ಲಿಕಾರ್ಜುನಾಚಾರಿ ಭಾಗವಹಿಸಿದ್ದರು.