ಮೆಣಸೆ ಪಿಎಂಶ್ರೀ ಶಾಸಕರ ಸರ್ಕಾರಿ ಮಾದರಿ ಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ
ನಮ್ಮ ಸುತ್ತಮುತ್ತಲಿನ ಜಗತ್ತಿನ ಪ್ರಚಲಿತ ವಿದ್ಯಮಾನಗಳನ್ನು ದಿನನಿತ್ಯ ನಮಗೆ ತಿಳಿಸುವ ಕೆಲಸ ಪತ್ರಿಕೆಗಳು ಮಾಡುತ್ತಿವೆ. ಪತ್ರಿಕೆಗಳು ಕೇವಲ ಸುದ್ದಿಗಳನ್ನು ನೀಡುವ ಕೆಲಸ ಮಾಡುತ್ತಿಲ್ಲ. ವಿವಿಧ ವಿಷಯಗಳನ್ನು ನೀಡುತ್ತದೆ. ಪತ್ರಿಕೆಗಳು ಸಾಮಾನ್ಯ ಜ್ಞಾನದ ಕಣಜ ಎಂದು ತಾಪಂ ಮಾಜಿ ಸದಸ್ಯ ಕೆ.ಎಸ್.ರಮೇಶ್ ಹೇಳಿದರು.
ತಾಲೂಕಿನ ಮೆಣಸೆ ಪಂಚಾಯಿತಿ ಮೆಣಸೆ ಪಿಎಂಶ್ರೀ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಆಯೋಜಿಸಿದ್ದ ಕನ್ನಡ ಪ್ರಭ ಯುವ ಆವೃತ್ತಿ ಬಿಡುಗಡೆಗೊಳಿಸಿ ಮಾತನಾಡಿದರು. ಕ್ರೀಡೆ, ರಾಜಕೀಯ, ಸಿನೆಮಾ, ಸಾಹಿತ್ಯ, ಆರೋಗ್ಯ,ಶಿಕ್ಷಣ,ಸಾಂಸ್ಕೃತಿಕ ಸೇರಿ ಹಲವಾರು ವಿಷಯಗಳನ್ನು ಪತ್ರಿಕೆ ಒಳಗೊಂಡಿರುತ್ತದೆ. ದೇಶದ ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಜಗತ್ತಿನ ಅನೇಕ ದೇಶಗಳ ಸ್ವಾತಂತ್ರ್ಯ ಹೋರಾಟ, ಕ್ರಾಂತಿಗಳಲ್ಲಿ ಪತ್ರಿಕೆಗಳು ಮಹತ್ತರ ಪಾತ್ರ ವಹಿಸಿದೆ ಎಂದರು.ಪತ್ರಿಕೆಗಳು ಜನಜಾಗೃತಿ ಜೊತೆಗೆ ಸಮಾಜ ಕಟ್ಟುವ ಕೆಲಸ ಮಾಡಬೇಕು. ಸಮಾಜದಲ್ಲಿರುವ ಸಮಸ್ಯೆ, ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ದಿನನಿತ್ಯ ಪತ್ರಿಕೆ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು. ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಪಠ್ಯ ವಿಷಯಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಬೇಕು ಎಂದರು.
ಪತ್ರಕರ್ತ ನೆಮ್ಮಾರ್ ಅಬೂಬಕರ್ ಕನ್ನಡ ಪ್ರಭ ಯುವ ಆವೃತ್ತಿ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಉಪಯುಕ್ತ ಅತ್ಯ ಮೂಲ್ಯ ವಿಷಯಗಳು ಈ ಸಂಚಿಕೆಯಲ್ಲಿದೆ. ಪ್ರಚಲಿತ ವಿದ್ಯಮಾನಗಳು,ಸಾಮಾನ್ಯ ಜ್ಞಾನ ವಿಷಯಗಳು,ಸ್ಪರ್ಧಾತ್ಮಕ ವಿಷಯಗಳು,ಉದ್ಯೋಗ ಅಂಕಣ,ಶೈಕ್ಷಣಿಕ ವಿಷಯಗಳು ಇದರಲ್ಲಿವೆ.ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತ. ವಿದ್ಯಾರ್ಥಿಗಳು ಈ ಆವೃತ್ತಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
2 ಶ್ರೀ ಚಿತ್ರ 1-