ವಿಜಯಪುರ ರಸ್ತೆ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆ

KannadaprabhaNewsNetwork |  
Published : Sep 02, 2026, 04:15 AM IST
ನಗರದ ರಸ್ತೆ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆ: ಎಂ.ಬಿ.ಪಾಟೀಲ | Kannada Prabha

ಸಾರಾಂಶ

ವಿಜಯಪುರ: ಉತ್ತಮ ರಸ್ತೆ ನಿರ್ಮಾಣದಿಂದ ನಗರದ ಅಭಿವೃದ್ಧಿಗೆ ವೇಗದ ಸ್ಪರ್ಷ ಸಿಗುವುದರ ಜೊತೆಗೆ ಜನರ ಸುಗಮ ಸಂಚಾರಕ್ಕೆ ಮತ್ತಷ್ಟು ಅನುಕೂಲವಾಗಲು ಮಹತ್ವದ ಹೆಜ್ಜೆಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಉತ್ತಮ ರಸ್ತೆ ನಿರ್ಮಾಣದಿಂದ ನಗರದ ಅಭಿವೃದ್ಧಿಗೆ ವೇಗದ ಸ್ಪರ್ಷ ಸಿಗುವುದರ ಜೊತೆಗೆ ಜನರ ಸುಗಮ ಸಂಚಾರಕ್ಕೆ ಮತ್ತಷ್ಟು ಅನುಕೂಲವಾಗಲು ಮಹತ್ವದ ಹೆಜ್ಜೆಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದ ರಹಮಾನಿಯ ವೃತ್ತದಿಂದ ಕನ್ನಾನ ಫಂಕ್ಷನ್ ಹಾಲ್, ಬಾರಾಕೊಟ್ರಿ ತಾಂಡಾ ಮೂಲಕ ಜುಮನಾಳ, ಖತಿಜಾಪುರ ಕೂಡು ರಸ್ತೆ ನಿರ್ಮಾಣಕ್ಕೆ ₹5 ಕೋಟಿ ವೆಚ್ಚದಲ್ಲಿ ಹಾಗೂ ಅಥಣಿ ಮುಖ್ಯ ರಸ್ತೆಯಿಂದ ರಾಜಕುಮಾರ ಲೇಔಟ್ ಕೂಡು ರಸ್ತೆ ₹1.50 ಕೋಟಿ ವೆಚ್ಚದಲ್ಲಿ ಕೈಗೊಳ್ಳುತ್ತಿರುವ ರಸ್ತೆ ಕಾಮಗಾರಿಗಳಿಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಅವರೊಂದಿಗೆ ಜಂಟಿಯಾಗಿ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದ ಅವರು, ವಿಜಯಪುರದ ಸಮಗ್ರ ಅಭಿವೃದ್ಧಿಯ ಪಯಣ ನಿರಂತರವಾಗಿರಲಿದೆ ಎಂದರು.

ನಗರದ ರೆಹಮಾನಿಯಾ ವೃತ್ತದಿಂದ ಕನ್ನಾನ್‌ ಫಂಕ್ಷನ್ ಹಾಲ್ ಹಾಗೂ ಬಾರಾಕೊಟ್ರಿ ತಾಂಡಾ ಮೂಲಕ ಜುಮನಾಳ ಹಾಗೂ ಖತಿಜಾಪುರ ಕೂಡು ರಸ್ತೆ ಸುಧಾರಣೆ ಅಂದಾಜು ₹5 ಕೋಟಿ ವೆಚ್ಚ ಮಾಡಲಾಗುತ್ತಿದೆ. 3 ಕಿಮೀ. ರಸ್ತೆ ಅಭಿವೃದ್ಧಿಪಡಿಸಲಾಗುವುದು. ಈ ಕಾಮಗಾರಿಯಲ್ಲಿ ಎಂಬ್ಯಾಕ್‌ಮೆಟ್, ಸಬ್ ಗ್ರೇಡ್ (300 ಎಂಎ), ಜಿಎಸ್‌ಬಿ, ಡಬ್ಲ್ಯೂ ಎಂ.ಎಂ, ಡಾಂಬರೀಕರಣ (ಬಿಎಂ ಮತ್ತು ಎಸ್‌ಡಿಬಿಸಿ) ಮತ್ತು 8 ಸಿಡಿ ಕಾಮಗಾರಿಗಳು ಸೇರಿವೆ. ಜಿಲ್ಲೆಯ ತಿಕೋಟಾ ತಾಲೂಕಿನ ನವಸರಪುರ, ತಾಜಪುರ ಕೂಡು ರಸ್ತೆ ಸುಧಾರಣೆಗೆ ₹150 ಲಕ್ಷ ಬಿಡುಗಡೆಯಾಗಿದೆ. ಈ ಅನುದಾನದಡಿ 700 ಮೀ. ರಸ್ತೆ ಡಾಂಬರೀಕರಣ ಹಾಗೂ 185 ಮೀಟರ್‌ ಕಾಂಕ್ರೀಟ್ ರಸ್ತೆ ಮತ್ತು ಫೂಟ್ ಬ್ರಿಡ್ಜ್ ನಿರ್ಮಿಸಲಾಗುವುದು ಎಂದು ಹೇಳಿದರು.

ತೊರವಿ ಅತಾಲಟ್ಟಿಯಿಂದ ವಿಜಯಪುರ-ಅಥಣಿ ರಾಷ್ಟ್ರೀಯ ಹೆದ್ದಾರಿ 548ಕ್ಕೆ ಸಂಪರ್ಕ ಕಲ್ಪಿಸುವ ಡಾಂಬರ್‌ ರಸ್ತೆ ಮೇಲ್ಮೈ ಹಾಳಾಗಿದ್ದು, 700ಮೀ. ಉದ್ದಕ್ಕೂ ಎಸ್‌ಡಿಬಿಸಿ ಹಾಗೂ 186 ಮೀ. ಉದ್ದದ ಆಂತರಿಕ ರಸ್ತೆಗೆ ಸಿಸಿ ರಸ್ತೆ ಸೇರಿಸಲಾಗುವುದು ಜೊತೆಗೆ ಮೈದಾನದಲ್ಲಿ ರಸ್ತೆ ಅಳವಡಿಸಲಾಗುವುದು ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಮಾತನಾಡಿ, ತಿಕೋಟಾ ತಾಲೂಕಿನ ನವರಸಪುರ ತಾಜಪುರ ಜೋಡು ರಸ್ತೆಯ ಸುಧಾರಣೆ ಮಾಡಲಾಗುತ್ತಿದ್ದು, ವಿಜಯಪುರ ನಗರದ ತೊರವಿ ಅತಾಲಟ್ಟಿಯಿಂದ ವಿಜಯಪುರ-ಅಥಣಿ ರಾಷ್ಟ್ರೀಯ ಹೆದ್ದಾರಿ 548ಬಿ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ಕಾಲುಸಂಕ (ಫೂಟ್ ಬ್ರಿಡ್ಜ್) ನಿರ್ಮಾಣ ಸೇರಿಸಲಾಗಿದೆ. ಅಥಣಿ ಮುಖ್ಯ ರಸ್ತೆಯಿಂದ ರಾಜಕುಮಾರ ಲೇಔಟ್ ಮುಖ್ಯ ರಸ್ತೆ, ಸುಪ್ರಿಂ ಮೆಡಿಕಲ್ ನಿಂದ ತೊರವಿ ಅತಾಲಟ್ಟಿ ಕೂಡು ರಸ್ತೆ ಹಾಗೂ ಆಂತರಿಕ ರಸ್ತೆ ಸುಧಾರಣೆಗೆ ₹150 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

1.16 ಕಿ.ಮೀ. ರಸ್ತೆಯ ಉದ್ದದ ರಸ್ತೆಗೆ 340 ಮೀ. ಡಾಂಬರು ರಸ್ತೆ ಹಾಗೂ 820 ಮೀ. ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು. ಆಂತರಿಕ ರಸ್ತೆಗಳ ಡಾಂಬರೀಕರಣ ಮತ್ತು ಸಿಸಿ ರಸ್ತೆ ನಿರ್ಮಾಣದ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆಗಳಿಂದ ವಿಜಯಪುರ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.

ಶಾಸಕ ವಿಠ್ಠಲ ಕಟಕದೊಂಡ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸಿ.ಎಸ್.ಪೊಲೀಸಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವಿ ಪವಾರ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್‌; ಕಾಂಗ್ರೆಸ್‌ ಪ್ರತಿಭಟನೆ
ಇಳಕಲ್ಲ ಪೊಲೀಸ್ ಠಾಣೆಗೆ ಐಜಿಪಿ ಸಂದೀಪ್ ಪಾಟೀಲ್ ಭೇಟಿ