ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದುರುದ್ದೇಶಪೂರಿತ ಎಫ್.ಐ.ಆರ್. ದಾಖಲಿಸಿರುವುದನ್ನು ವಿರೋಧಿಸಿ ಸಚಿವ ಎಂ.ಬಿ. ಪಾಟೀಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವಿಜ್ಞಾಪಕ ಪತ್ರ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದುರುದ್ದೇಶಪೂರಿತ ಎಫ್.ಐ.ಆರ್. ದಾಖಲಿಸಿರುವುದನ್ನು ವಿರೋಧಿಸಿ ಸಚಿವ ಎಂ.ಬಿ. ಪಾಟೀಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವಿಜ್ಞಾಪಕ ಪತ್ರ ಸಲ್ಲಿಸಲಾಯಿತು.ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹಲದ್ವಾನಿ ರ‍್ಯಾಲಿ ನಂತರ ಬಿಜೆಪಿ ಆರ್.ಎಸ್.ಎಸ್. ಕಾರ್ಯಕರ್ತರು ನಡೆಸಿದ ಅತ್ಯಂತ ಕೀಳುಮಟ್ಟದ ರ‍್ಯಾಲಿ ನಡೆದ ಸ್ಥಳದ ಶುದ್ದೀಕರಣ ಆಚರಣೆಯ ವಿಷಯವಾಗಿ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೊಗೊಳ್ಳಲು ಒತ್ತಾಯಿಸಿದರು. ಸಂವಿಧಾನಿಕ ಮೌಲ್ಯಗಳಿಗೆ ಅವಮಾನ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಬಿಜೆಪಿ ರಾಜ್ಯ ಸರ್ಕಾರದ ಪ್ರಚೋದನೆಯಂತೆ ಕಾರ್ಯನಿರ್ವಹಿಸುತ್ತಿರುವ ಉತ್ತರಾಖಂಡ ಪೊಲೀಸರು ಆಘಾತಕಾರಿ ರೀತಿಯಲ್ಲಿ ಹಲದ್ವಾನಿ ನಗರದ ಕೋತವಾಲಿ ಪೊಲೀಸರ ಠಾಣೆಯಲ್ಲಿ ರಾಹುಲ್ ಗಾಂಧಿರವರ ವಿರುದ್ಧ ಎಫ್.ಐ.ಆರ್. ದಾಖಲಿಸಿದ್ದಾರೆ. ಈ ಜಾತಿವಾದಿ ವರ್ತನೆಯನ್ನು ಬಿಜೆಪಿ ಬಹಿರಂಗವಾಗಿ ಸಮರ್ಥಿಸಿಕೊಂಡಿರುವುದು ಹಾಗೂ ಲೋಕಸಭೆ ವಿರೋಧ ಪಕ್ಷದ ಮುಖಂಡರ ಮೇಲೆ ಕ್ರಮ ಕೈಗೊಳ್ಳಲು ಉತ್ತರಾಖಂಡ ಪೊಲೀಸರನ್ನು ಬಳಿಸಿಕೊಂಡಿರುವುದು ನಾಚಿಕಿಗೇಡಿನ ಸಂಗತಿ. ಈ ಸೇಡಿನ ರಾಜಕಾರಣವನ್ನು ತೀವ್ರವಾಗಿ ಖಂಡಿಸಿ ಉತ್ತರಾಖಂಡದ ತಪ್ಪಿತಸ್ಥ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.ರಾಹುಲ್ ಗಾಂಧಿ ವಿರುದ್ಧ ಆರೋಪಪತ್ರಗಳ ಸಲ್ಲಿಕೆ ಮಾಡಿದ್ದು, ಕೇಂದ್ರ ಸರ್ಕಾರ ಪ್ರತೀಕಾರಾತ್ಮಕ ಕ್ರಮ ಆಗಿದೆ. ಇದು ಕೇವಲ ಕಾನೂನು ಪ್ರಕ್ರಿಯೆ ವಿಷಯವಲ್ಲ, ಬದಲಿಗೆ ಇದೊಂದು ರಾಜಕೀಯ ಪ್ರೇರಿತ, ಉದ್ದೇಶಪೂರ್ವಕ ಗುರಿಯಾಗಿಸಲಾಗಿದೆ ಎಂದು ಹೇಳಿದರು.
ನಾಗಠಾಣ ಶಾಸಕರಾದ ವಿಠ್ಠಲ ಕಟಕಧೋಂಡ, ಲೋಕಸಭಾ ಅಭ್ಯರ್ಥಿ ರಾಜು ಆಲಗೂರ, ಡಾ.ಪ್ರಭುಗೌಡ ಲಿಂಗದಳ್ಳಿ, ಅಬ್ದುಲರಜಾಕ ಹೊರ್ತಿ, ಡಾ.ಗಂಗಾಧರ ಸಂಬಣ್ಣಿ, ಆರತಿ ಶಾಪೂರ, ಸೋಮನಾಥ ಕಳ್ಳಿಮನಿ, ವಸಂತ ಹೊನಮೋಡೆ, ಶಕೀಲ ಬಾಗಮಾರೆ, ವಿದ್ಯಾರಾಣಿ ತುಂಗಳ, ಫಯಾಜ ಕಲಾದಗಿ, ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.