ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದ ತಹಸೀಲ್ದಾರ್ ಕಚೇರಿಗೆ ಮಂಗಳವಾರ ಆಗಮಿಸಿದ ಚವನಭಾವಿ ಗ್ರಾಮದ ರೈತರು ಹಾಗೂ ಮುಖಂಡರು, ಶಿರಸ್ತೇದಾರ ಎಂ.ಎ. ಬಾಗೇವಾಡಿ ಅವರ ಮೂಲಕ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಪ್ರಸ್ತುತ ಭೀಕರ ಬರಗಾಲ ಹಿನ್ನೆಲೆ ಬೆಳೆಗಳು ಕೈಕೊಟ್ಟಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕನಿಷ್ಠ ಕುಡಿಯುವ ನೀರನ್ನಾದರೂ ಒದಗಿಸುವುದು ಜಿಲ್ಲಾಡಳಿತದ ಕರ್ತವ್ಯವಾಗಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.ಕಾಲುವೆಗೆ ನೀರು ಹರಿಸಿದ್ದರೂ ಅಧಿಕಾರಿಗಳು ಸಮರ್ಪಕವಾಗಿ ಸ್ಥಳ ಪರಿಶೀಲನೆ ನಡೆಸದ ಕಾರಣ ಮಲಗಲದಿನ್ನಿ ಕೆರೆ ಇದುವರೆಗೂ ಭರ್ತಿಯಾಗಿಲ್ಲ. ಕಾಲುವೆ ನೀರು ಅಕ್ರಮವಾಗಿ ಬಳಕೆಯಾಗುವುದನ್ನು ಹಾಗೂ ಅನಗತ್ಯವಾಗಿ ಪೋಲಾಗುವುದನ್ನು ತಕ್ಷಣವೇ ತಡೆಗಟ್ಟಬೇಕು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೆರೆಗೆ ಸಮರ್ಪಕವಾಗಿ ನೀರು ಹರಿಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.
ಮುಖಂಡರಾದ ಭರಣ್ಣ ಹಂಚಿನಾಳ, ರೇವಣ್ಣಪ್ಪ ಹಂಚಿನಾಳ, ಶರಣಪ್ಪ ಮುರಾಳ, ಗೋವಿಂದಪ್ಪಗೌಡ ಪಾಟೀಲ, ಸಿದ್ದಪ್ಪ ಮದರಿ, ಪ್ರಚಂಡ ಚಲವಾದಿ, ದ್ಯಾಮಣ್ಣ ಮುರಾಳ, ವೀರೇಶ ಜಂಗಡಭಾವಿ, ಸಿದ್ದಪ್ಪ ಹಂಚಿನಾಳ, ನಿಂಗಪ್ಪ ಮಾವಿನಬಾವಿ, ಲಕ್ಷ್ಮಣ ಗುರಿಕಾರ, ಬಸಣ್ಣ ನಾಯ್ಕೋಡಿ, ನಿಂಗಪ್ಪ ಜಂಗಡಭಾವಿ, ನಿಂಗಪ್ಪ ಮದರಿ, ಹುಲಗಪ್ಪ ಜಂಗಡಭಾವಿ, ಬಸಪ್ಪ ನಾಲತವಾಡ, ಮಾಳಪ್ಪ ಬಿರಾದಾರ, ಬೀರಪ್ಪ ಸೋಮನಾಳ, ನೀಲಪ್ಪ ಮುರಾಳ ಸೇರಿದಂತೆ ಚವನಭಾವಿ ಗ್ರಾಮದ ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.