ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಾಣವಾಗಬೇಕು. ಬನಹಟ್ಟಿಗೆ ನ್ಯಾಯ ದೊರೆಯುವವರೆಗೆ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ಕಾಡಸಿದ್ದೇಶ್ವರ ಹಮಾಲರ ಸಂಘದ ಅಧ್ಯಕ್ಷ ಮಾಳಪ್ಪ ಕರಿಗಾರ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಾಣವಾಗಬೇಕು. ಬನಹಟ್ಟಿಗೆ ನ್ಯಾಯ ದೊರೆಯುವವರೆಗೆ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ಕಾಡಸಿದ್ದೇಶ್ವರ ಹಮಾಲರ ಸಂಘದ ಅಧ್ಯಕ್ಷ ಮಾಳಪ್ಪ ಕರಿಗಾರ ಹೇಳಿದರು.

ಮಂಗಳವಾರ 25ನೇ ದಿನದ ಸರದಿ ಸತ್ಯಾಗ್ರಹದಲ್ಲಿ ಕಾಡಸಿದ್ದೇಶ್ವರ ಹಮಾಲರ ಸಂಘದಿಂದ ಬೆಂಬಲ ನೀಡಿ ಮಾತನಾಡಿದ ಅವರು, ಪ್ರಜಾಸೌಧ ಬನಹಟ್ಟಿಯಲ್ಲೇ ನಿರ್ಮಾಣವಾಗಬೇಕು ಎಂಬುವುದು ನಮ್ಮ ದೃಢ ನಿಲುವು. ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಿಸುವ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಪ್ರಜಾಸೌಧ ಬನಹಟ್ಟಿಯಲ್ಲಿ ನಿರ್ಮಾಣವಾಗದಿದ್ದರೆ ಸತ್ಯಾಗ್ರಹ ಹಿಂಪಡೆಯುವುದಿಲ್ಲ. ಈ ಹೋರಾಟಕ್ಕೆ ಜಾತಿ, ಧರ್ಮ, ಪಕ್ಷ ಹಾಗೂ ಪಂಥದ ಭೇದವಿಲ್ಲದೆ ಎಲ್ಲ ಸಮುದಾಯಗಳಿಂದಲೂ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ ಎಂದರು.

ಮುಖಂಡ ಸದಾಶಿವ ಹನಗಂಡಿ ಮಾತನಾಡಿ, ಆರಂಭದಲ್ಲಿ 40, 50 ಜನರೊಂದಿಗೆ ಆರಂಭವಾದ ಹೋರಾಟ ಇಂದು 2000 ದಿಂದ 3000 ಸಾವಿರ ಜನರ ಬೃಹತ್ ಜನಾಂದೋಲನವಾಗಿ ರೂಪುಗೊಂಡಿದೆ. ಇದು ಕೆಲವೇ ವ್ಯಕ್ತಿಗಳ ಹೋರಾಟವಲ್ಲ, ಇಡೀ ಬನಹಟ್ಟಿ ಜನರ ಹಕ್ಕಿನ ಹೋರಾಟವಾಗಿದೆ ಎಂದರು.

ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಬನಹಟ್ಟಿ ಕಾಡಸಿದ್ದೇಶ್ವರ ಹಮಾಲರ ಸಂಘದ ಸದಸ್ಯರು ಹಾಗೂ ಗೆಳೆಯರ ಬಳಗದವರು ಬೆಳಗ್ಗೆ ಕಾಡಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ನಡೆಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರತಿಭಟನೆ ಬೆಂಬಲಿಸಿದರು.

ಕಾರ್ಮಿಕ ಸಂಘದ ಮುಖಂಡರಾದ ಪರಸಪ್ಪ ವಗ್ಗ, ರಾಜು ಗೊಂಗಡಿ, ನಾಗಪ್ಪ ಮಹೇಶವಾಡಗಿ, ಸದಾಶಿವ ಆಲಕನೂರ, ನಾಗಪ್ಪ ಹುದ್ದಾರ, ಶರೀಫ್ ಸೌದಾಗರ, ಆನಂದ ಭಜಂತ್ರಿ, ಮಹಾಂತೇಶ ಗಡದಿ, ಮಾಳು ಹಿಪ್ಪರಗಿ, ಗಂಗಪ್ಪ ಕೋಳಿ, ಲಕ್ಷ್ಮಣ ಗಡದಿ, ಹಣಮಂತ ಕುಡಚಿ, ರಾಜೇಸಾಬ ಸೌದಾಗರ, ಲಕ್ಷ್ಮಣ ಹನಗಂಡಿ, ಮಹಾದೇವ ಪಾಟೀಲ ಸೇರಿದಂತೆ ಹಲವರು ಇದ್ದರು.