ರವಿ ಕಾಂಬಳೆ
ಕನ್ನಡಪ್ರಭ ವಾರ್ತೆ ಹುಕ್ಕೇರಿಉತ್ತರ ಕರ್ನಾಟಕದ ಪ್ರತ್ಯೇಕತೆ ಮಾತು ನೆನಪಿಗೆ ಬಂದಾಗಲೆಲ್ಲ ಮುಂಚೂಣಿಯಲ್ಲಿರುವುದೇ ಉಮೇಶ ಕತ್ತಿ ಎಂಬ ಧೀಮಂತ ನಾಯಕನ ಹೆಸರು ಅವರ ಅಗಲಿಕೆ ಬಳಿಕ ಆ ಸ್ಥಾನದ ಭರವಸೆ ಉಳಿಸುವ ಜವಾಬ್ದಾರಿ ಹೊತ್ತವರು ಅವರ ಮಗ ನಿಖಿಲ್ ಕತ್ತಿ.
ಅನೇಕ ಭರವಸೆಗಳ ನೆನಪಿಗೆ ಅಭಿವೃದ್ಧಿ ಎಂಬ ಸಸಿ ನೆಟ್ಟು ನೀರೆರೆದು ಬೆಳೆಸುವ ದಿಟ್ಟತನದೊಂದಿಗೆ ಮುನ್ನುಗತ್ತಿರುವ ಶಾಸಕ ನಿಖಿಲ್ ಕತ್ತಿ ತನ್ನ ಯುವ ನಾಯಕತ್ವವನ್ನು ಗುರುತಿಸಿ ಪರಚಯಿಸಿಕೊಂಡು ತಂದೆ ದಿ.ಉಮೇಶ ಕತ್ತಿ ಹೆಜ್ಜೆ ಗುರುತಿನಲ್ಲಿ ಚಿಕ್ಕಪ್ಪ ರಮೇಶ ಕತ್ತಿ ಮಾರ್ಗದರ್ಶನದಲ್ಲಿ ಸಮಯೋಚಿತ ಕಾರ್ಯಗಳ ಮೂಲಕ ಜನಮಾನಸದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.ತಂದೆಯ ಗುರುತು-ಚಿಕ್ಕಪ್ಪನೇ ನೆರಳು:ತಂದೆಯ ಅಕಾಲಿಕ ನಿಧನದ ಬಳಿಕ ಕತ್ತಿ ಕುಟುಂಬದ ಮೂರನೇ ತಲೆಮಾರಿನ ರಾಜಕಾರಣಿಯಾಗಿ ಹೊರಹೊಮ್ಮಿರುವ ನಿಖಿಲ್ ಕತ್ತಿ ತಮಗಿರುವ ಕತೃತ್ವಶಕ್ತಿಯ ಮೂಲಕ ತಂದೆ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಮೂಡಿಸಿದ್ದ ಹೆಜ್ಜೆ ಗುರುತಿನಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಯಶಸ್ಸಿನ ಪಯಣ ಮುಂದುವರೆಸಿದ್ದಾರೆ. ಅಲ್ಲದೇ ಗಡಿಜಿಲ್ಲೆಯಲ್ಲಿ ಸಹಕಾರ ಹಾಗೂ ರಾಜಕೀಯ ರಂಗದ ಭೀಷ್ಮ ಅಂತಲೇ ಕರೆಯಿಸಿಕೊಳ್ಳುವ ಚಿಕ್ಕಪ್ಪ ರಮೇಶ ಕತ್ತಿ ಅವರ ಸಮರ್ಥ ಮಾರ್ಗದರ್ಶನ ನಿಖಿಲ್ ಅವರ ಪ್ರತಿ ಕಾರ್ಯದಲ್ಲಿ ಸುಡುವ ಬಿಸಿಲಿನಲ್ಲಿ ನೆರಳಿನಂತೆ ಆಸರೆಯಾಗಿ ನಿಂತಿದೆ.ಅಪ್ಪನ ಕನಸ್ಸಿಗೆ ಬಲ:
ಗಡಿಜಿಲ್ಲೆಯ ರಾಜಕಾರಣದಲ್ಲಿ ಪ್ರತಿಯೊಬ್ಬರ ತುಟಿಯಂಚಿನಲ್ಲಿ ಒಂದು ಮಾತು ಬರತ್ತದೆ ಉಮೇಶ ಕತ್ತಿ ಇದ್ದಿದ್ದರೆ ಈ ಪ್ರಸಂಗ ಬರುತ್ತಿರಲಿಲ್ಲ ಎಂಬುದೇ ಆಗಿರುತ್ತದೆ. ಆದರೆ ಅಪ್ಪ ಇಲ್ಲದ ಕೊರಗು ನೀಗಿಸುವ ಮಹತ್ವಕಾಂಕ್ಷೆ ನಿಖಿಲ್ ಕತ್ತಿ ಅವರದ್ದಾಗಿದ್ದು, ರಾಜಕೀಯದಲ್ಲಿ ಒಂದೊಂದೆ ಹೆಜ್ಜೆ ಮುಂದಿಡುತ್ತ ನಿಖಿಲ್ ಕತ್ತಿ ಆಮೆ ನಡುಗೆಯ ಮೂಲಕ ಆನೆಭಾರದ ಅನುದಾನ ತಂದಿದ್ದು ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಿದ್ದಾರೆ. ಹಿಡಕಲ್ ಡ್ಯಾಂ ಉದ್ಯಾನಕಾಶಿಯಲ್ಲಿ ಚಿಟ್ಟೆ ಪಾರ್ಕ್, ಸಂಕೇಶ್ವರ-ಗೋಕಾಕ ರಸ್ತೆ ಅಭಿವೃದ್ಧಿ, ಶಾಲಾ-ಕಾಲೇಜುಗಳ ಕಟ್ಟಡ ನಿರ್ಮಾಣ, ಜಲಜೀವನ ಮಷಿನ್, ಸ್ಲಂ ನಿವಾಸಿಗಳಿಗೆ ಸ್ವಂತ ಸೂರು, ಕೃಷಿ ಡಿಪ್ಲೋಮಾ ಕಾಲೇಜು, ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಅನುದಾನ ತರುವಲ್ಲಿ ಯಶಸ್ಸಿನ ನಡುಗೆ ಆರಂಭಿಸಿದ್ದಾರೆ. ಇಡೀ ರಾಜ್ಯವೇ ಅಭಿವೃದ್ಧಿಗೆ ಅನುದಾನ ಎದುರುತ್ತಿರುವ ಸಂದರ್ಭದಲ್ಲಿ ತನ್ನ ಕುಟುಂಬಕ್ಕಿರುವ ರಾಜಕೀಯ ಸಂಪರ್ಕ ಬಳಸಿ ಹೆಚ್ಚಿನ ಅನುದಾನ ತರುವತ್ತ ದಿಟ್ಟತನ ಮೆರೆದಿರುವ ನಿಖಿಲ್ ಕತ್ತಿ ಅವರಿಂದ ಇನ್ನಷ್ಟು ಅಭಿವೃದ್ಧಿಯ ನಿರೀಕ್ಷೆ ಜನರದ್ದಾಗಿದೆ.ಹಿರಾಶುಗರ ಝಲಕ್:ಸಂಕೇಶ್ವರದ ಪ್ರತಿಷ್ಠಿತ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ತಮ್ಮ ಕುಟುಂಬದ ಆಸ್ತಿ ಅಡಮಾನವಿಟ್ಟು ರೈತರ ಕಬ್ಬಿನ ಬಿಲ್ ಪಾವತಿಸುವ ಉದಾರತೆ ಮೆರೆದಿದ್ದ ಕತ್ತಿ ಕುಟುಂಬ. ಆಡಳಿತ ಮಂಡಳಿ ನಡುವೆ ವೈಮನಸು ಎದುರಾದಾಗ ತಮ್ಮ ಸಾರಥ್ಯದಲ್ಲಿಯೇ ಅವಿರೋಧ ಆಯ್ಕೆಗೊಂಡ ಸದಸ್ಯರ ಹೆಗಲಿಗೆ ಕಾರ್ಖಾಖಾನೆ ಸಾರಥ್ಯ ವಹಿಸಿ ಸ್ವ ಇಚ್ಛೆಯಿಂದಲೆ ಕಾರಖಾನೆ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿ ತಮ್ಮ ಉದಾರ ಮನೊಭಾವನೆಯನ್ನು ಎತ್ತಿತೋರಿದ್ದಾರೆ.