ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ಮೂಡುಬಿದಿರೆ ವಲಯದ 15ನೇ ವಾರ್ಷಿಕ ಸಭೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಿತು.ಜಿಲ್ಲಾಧ್ಯಕ್ಷ ಪದ್ಮ ಪ್ರಸಾದ್ ಜೈನ್ ಸಭೆ ಉದ್ಘಾಟಿಸಿದರು. ಈ ಸಂದರ್ಭ 2025/27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.ನೂತನ ಅಧ್ಯಕ್ಷರಾಗಿ ನಿತಿನ್ ಬೆಳುವಾಯಿ , ಪ್ರಧಾನ ಕಾರ್ಯದರ್ಶಿಯಾಗಿ ನಮಿತ್ ಬಂಗೇರಾ, ಉಪಾಧ್ಯಕ್ಷರಾಗಿ ರಂಜಿತ್ ಕೋಟ್ಯಾನ್, ಕೋಶಾಧಿಕಾರಿಯಾಗಿ ಪದ್ಮನಾಭ ಮಿಜಾರು, ಗೌರವಾಧ್ಯಕ್ಷರಾಗಿ ಉದಯ ಭಟ್, ಜೊತೆ ಕಾರ್ಯದರ್ಶಿಯಾಗಿ ಚಂದ್ರಹಾಸ ನೀರ್ಕೇರೆ, ಸಂಘಟನಾ ಕಾರ್ಯದರ್ಶಿಯಾಗಿ ಮಿಥುನ್, ಕ್ರೀಡಾ ಕಾರ್ಯದರ್ಶಿಗಳಾಗಿ ರೆಹಮಾನ್ ಮತ್ತು ವಿನಯ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಭಾಸ್ಕರ್ ಕೋಟ್ಯಾನ್, ಛಾಯಾ ಕಾರ್ಯದರ್ಶಿಯಾಗಿ ಸತೀಶ್ ಅಳಿಯೂರು, ಪತ್ರಿಕಾ ಪ್ರತಿನಿಧಿಯಾಗಿ ಪ್ರಮೋದ್ ಪಾಲಡ್ಕ, ವಲಯ ಪ್ರತಿನಿಧಿಗಳಾಗಿ ರಾಜೇಶ್ ಕೆಲ್ಲ ಪುತ್ತಿಗೆ, ಪ್ರಕಾಶ್ ಭಟ್, ಕಾರ್ತಿಕ್ ಗಂಜಿಮಠ, ಸಮೀರ್, ಅನೀತ್ ಜೈನ್, ಜಿಲ್ಲಾ ಕಾರ್ಯಕಾರಿ ಸದಸ್ಯರಾಗಿ ರಾಜೇಶ್ ಅಮೀನ್, ಸುನಿಲ್ ಕೋಟ್ಯಾನ್, ರವಿ ಕೋಟ್ಯಾನ್, ಅಭಯ್ ಕುಮಾರ್ ಜೈನ್,ಇಕ್ಬಾಲ್ ಪುತ್ತಿಗೆ, ವಿಲ್ಫ್ರೆಡ್ ಮೆಂಡೋನ್ಸಾ ಆಯ್ಕೆಯಾದರು.
ವಲಯದ ಅಧ್ಯಕ್ಷ ರಾಜೇಶ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಸಲಹಾ ಸಮಿತಿ ಸಂಚಾಲಕ ಕರುಣಾಕರ ಕಾನಂಗಿ, ಜಿಲ್ಲಾ ಉಪಾಧ್ಯಕ್ಷ ರಮೇಶ್ ಕಲಾಶ್ರೀ, ಜಿಲ್ಲಾ ಛಾಯಾ ಕಾರ್ಯದರ್ಶಿ ರವಿ ಕೋಟ್ಯಾನ್, ಜಿಲ್ಲಾ ಕಟ್ಟಡ ಸಮಿತಿ ವಲಯ ಪ್ರತಿನಿಧಿ ವಿಲ್ಫ್ರೆಡ್ ಮೆಂಡೋನ್ಸ, ಗೌರವಾಧ್ಯಕ್ಷ ಸುಂದರ ಸಾಲ್ಯಾನ್, ಸೊಸೈಟಿ ನಿರ್ದೇಶಕ ರಾಮ ಕೋಟ್ಯಾನ್, ಉಪಾಧ್ಯಕ್ಷ ಮನೋಜ್ ಪುತ್ತಿಗೆ ಹಾಜರಿದ್ದರು.ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೋಟ್ಯಾನ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ರಂಜಿತ್ ಕೋಟ್ಯಾನ್ ಲೆಕ್ಕಪತ್ರ ಮಂಡಿಸಿದರು. ಸದಸ್ಯ ಸುರೇಶ್ ಅಂಚನ್ ವಂದಿಸಿದರು. ನಿತಿನ್ ಬೆಳುವಾಯಿ ನಿರೂಪಿಸಿದರು.