ಮುಂಡರಗಿ: ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನಿತಿನ್ ನಬಿನ್ ಅವರನ್ನು ಆಯ್ಕೆ ಮಾಡಿದ ಹಿನ್ನೆಲೆ ಮಂಗಳವಾರ ಪಟ್ಟಣದಲ್ಲಿ ಮುಂಡರಗಿ ಮಂಡಲದ ವತಿಯಿಂದ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಕುಮಾರಸ್ವಾಮಿ ಹಿರೇಮಠ, ಎಸ್.ಎಸ್. ಗಡ್ಡದ, ಮಾತನಾಡಿ, ಬಿಜೆಪಿ ಯುವಕರಿಗೆ ಆದ್ಯತೆ ನೀಡುವ ಮೂಲಕ ಸಂಘಟನೆಗೆ ವಯಸ್ಸು ಮುಖ್ಯವಲ್ಲ, ಚಾಣಾಕ್ಷತನ ಮುಖ್ಯ ಎನ್ನುವುದನ್ನು ಬಿಜೆಪಿ ನಿತಿನ್ ನಬಿನ್ ಅವರನ್ನು ಆಯ್ಕೆ ಮಾಡುವ ಮೂಲಕ ಸಾಬೀತು ಪಡಿಸಿದೆ. ಇದು ಚುನಾವಣಾ ವರ್ಷವಾಗಿರುವುದರಿಂದ ಎಲ್ಲರೂ ಕಂಕಣಬದ್ಧರಾಗಿ ಕಾರ್ಯನಿರ್ವಹಿಸುವ ಮೂಲಕ ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವಂತೆ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಹಣಜಿ ಅವರನ್ನು ಸನ್ಮಾನಿಸಲಾಯಿತು. ರವೀಂದ್ರ ಉಪ್ಪಿನಬೆಟಗೇರಿ, ಮಲ್ಲಿಕಾರ್ಜುನ ಹಣಜಿ, ಬಸವರಾಜ ಬಿಳಿಮಗ್ಗದ, ಪ್ರಶಾಂತಗೌಡ ಗುಡದಪ್ಪನವರ, ಪವಿತ್ರಾ ಕಲ್ಲಕುಟಗರ್, ಪವನ್ ಮೇಟಿ, ಜ್ಯೋತಿ ಹಾನಗಲ್, ಮೈಲಾರಪ್ಪ ಕಲಕೇರಿ, ಪರಶುರಾಮ ಕರಡಿಕೊಳ್ಳ, ರಂಗಪ್ಪ ಕೋಳಿ, ನಾಗರಾಜ ಕೊರ್ಲಹಳ್ಳಿ, ಪ್ರಕಾಶ ಹಲವಾಗಲಿ, ಸುಭಾಸ ಕ್ವಾಟಿ, ಅಶೋಕ ಚೂರಿ, ಬಸವರಾಜ ಚಿಗಣ್ಣವರ, ಪನನ್ ಲಾಂಡ್ವೆ, ಅರುಣಾ ಪಾಟೀಲ, ರಾಧಾ ಬಾರಕೇರ, ವೀಣಾ ಬೂದಿಹಾಳ, ಸೋಮರಡ್ಡಿ ಮುದ್ದಾಬಳ್ಳಿ, ಮರಿಯಪ್ಪ ರಾಮೇನಹಳ್ಳಿ, ವೀರನಗೌಡ ಪಾಟೀಲ ಇತರರು ಇದ್ದರು.