ಕಾರ್ಕಳ: ನಿಟ್ಟೆಯ ಆಫ್-ಕ್ಯಾಂಪಸ್ ಕೇಂದ್ರವಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ತನ್ನ ಕ್ಯಾಂಪಸ್‌ನಲ್ಲಿ ಜಪಾನ್‌ನ ಟಿಕೆ ಎಂಜಿನಿಯರಿಂಗ್ ಸಹಭಾಗಿತ್ವದಲ್ಲಿ ಅತ್ಯಾಧುನಿಕ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಿದ್ದು, ಶುಕ್ರವಾರ ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ನಿಟ್ಟೆ ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೇರಾಯ ವಹಿಸಿದ್ದರು.ಎನ್ಎಂಎಎಂಐಟಿ ಪ್ರಾಂಶುಪಾಲ ಡಾ.ನಿರಂಜನ್ ಎನ್. ಚಿಪ್ಳೂಣ್ಕರ್ ಸ್ವಾಗತಿಸಿ, ಕಲಿಕೆ, ಸಂಶೋಧನೆ ಮತ್ತು ಉದ್ಯಮ-ಶೈಕ್ಷಣಿಕ ಸಹಯೋಗವನ್ನು ಉತ್ತೇಜಿಸುವ ಸೆಂಟರ್ ಆಫ್ ಎಕ್ಸಲೆನ್ಸ್‌ನ ದೃಷ್ಟಿಕೋನವನ್ನು ವಿವರಿಸಿದರು.
ನಿಟ್ಟೆ ಡಿಯು ಅಂತಾರಾಷ್ಟ್ರೀಯ ಸಂಬಂಧಗಳ ನಿರ್ದೇಶಕ ಪ್ರೊ.ಹರಿಕೃಷ್ಣ ಭಟ್, ಜಾಗತಿಕ ಪಾಲುದಾರಿಕೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಈ ಕೇಂದ್ರದ ಸಾಮರ್ಥ್ಯವನ್ನು ಹೇಳಿದರು.ಈ ಕಾರ್ಯಕ್ರಮವನ್ನು ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಕೆಲಸ ಮಾಡುವ ವಿದ್ಯಾರ್ಥಿಗಳ ಸಲಹೆಗಾರರಾದ ರಾಘವೇಂದ್ರ ಪೈ ಕೆ. ಅವರು ಸಂಯೋಜಿಸಿದರು.