ಎನ್‌ಎಂಪಿಎ ನೂತನ ಭದ್ರತಾ ಕಣ್ಗಾವಲು ಗೋಪುರ ಉದ್ಘಾಟನೆ

KannadaprabhaNewsNetwork |  
Published : Jun 30, 2025, 12:34 AM IST
ಎನ್‌ಎಂಪಿಎಗೆ ಕೇಂದ್ರ ಸಚಿವಾಲಯ ಕಾರ್ಯದರ್ಶಿ ಟಿ.ಕೆ.ರಾಮಚಂದ್ರನ್‌ ಭೇಟಿ | Kannada Prabha

ಸಾರಾಂಶ

ಎನ್‌ಎಂಪಿಎಯ ಪ್ರಮುಖ ಮೂಲಸೌಕರ್ಯ ಉಪಕ್ರಮ ಹಾಗೂ ನೂತನ ಭದ್ರತಾ ಕಣ್ಗಾವಲು ಗೋಪುರವನ್ನು ಟಿ.ಕೆ. ರಾಮಚಂದ್ರನ್‌ ಉದ್ಘಾಟಿಸಿದರು. ಜತೆಗೆ ಕಸ್ಟಮ್ಸ್‌ ಹೌಸ್‌ ಬಳಿ ಟ್ರಕ್‌ ಪಾರ್ಕಿಂಗ್‌ ಟರ್ಮಿನಲ್‌ ವಿಸ್ತರಣೆಗೆ ಗುದ್ದಲಿಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದೇಶದ ಪ್ರಮುಖ ಬಂದರು ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿ)ಗೆ ಹಡಗು ಮತ್ತು ಜಲಮಾರ್ಗ ಸಚಿವಾಲಯದ ಕಾರ್ಯದರ್ಶಿ ಟಿ.ಕೆ. ರಾಮಚಂದ್ರನ್‌ ಶುಕ್ರವಾರ ಭೇಟಿ ನೀಡಿ ಪ್ರಮುಖ ಮೂಲಸೌಕರ್ಯ ಯೋಜನೆಗಳು ಮತ್ತು ಹಸಿರು ಬಂದರು ಉಪಕ್ರಮಗಳು, ಬಂದರು ನೇತೃತ್ವದ ಕೈಗಾರಿಕೀಕರಣ, ಲಾಜಿಸ್ಟಿಕ್‌ ಪಾರ್ಕ್ ಅಭಿವೃದ್ಧಿ, ಸರಕು ನಿರ್ವಹಣೆಯ ಯಾಂತ್ರೀಕರಣ ಮತ್ತು ಕ್ರೂಸ್‌ ಪ್ರವಾಸೋದ್ಯಮ ಮೂಲಸೌಕರ್ಯ ಸೇರಿದಂತೆ ಭವಿಷ್ಯದ ಯೋಜನೆಗಳ ಸಮಗ್ರ ಅವಲೋಕನ ನಡೆಸಿ ಮೆಚ್ಚುಗೆ ಸೂಚಿಸಿದರು.

ಈ ಸಂದರ್ಭ ಎನ್‌ಎಂಪಿಎಯ ಪ್ರಮುಖ ಮೂಲಸೌಕರ್ಯ ಉಪಕ್ರಮ ಹಾಗೂ ನೂತನ ಭದ್ರತಾ ಕಣ್ಗಾವಲು ಗೋಪುರವನ್ನು ಟಿ.ಕೆ. ರಾಮಚಂದ್ರನ್‌ ಉದ್ಘಾಟಿಸಿದರು. ಜತೆಗೆ ಕಸ್ಟಮ್ಸ್‌ ಹೌಸ್‌ ಬಳಿ ಟ್ರಕ್‌ ಪಾರ್ಕಿಂಗ್‌ ಟರ್ಮಿನಲ್‌ ವಿಸ್ತರಣೆಗೆ ಗುದ್ದಲಿಪೂಜೆ ನೆರವೇರಿಸಿದರು. ಬಂದರಿನ ಇತ್ತೀಚಿನ ಸಾಧನೆಗಳನ್ನು ಗುರುತಿಸಿ ಮತ್ತು ಸಾಗರ ಕ್ಷೇತ್ರದ ಬೆಳವಣಿಗೆಗೆ ತಮ್ಮ ಕೊಡುಗೆಯನ್ನು ಮುಂದುವರಿಸಲು ನೌಕರರನ್ನುಪ್ರೋತ್ಸಾಹಿಸಿದರು.

ಸ್ವಯಂಚಾಲಿತ ತೂಕದ ಸೇತುವೆಗಳು, ಡ್ರೋನ್‌ ಆಧಾರಿತ ಕಣ್ಗಾವಲು, ಸ್ವಯಂಚಾಲಿತ ಅಗ್ನಿಶಾಮಕ, ಬಂದರು ದಾಖಲೆಗಳ ಡಿಜಿಟಲ್‌ ಪ್ರಕ್ರಿಯೆ, ಇ-ಕಾರ್ಡ್‌ ಟಿಕೆಟಿಂಗ್‌ ಸೇರಿದಂತೆ ಅತ್ಯಾಧುನಿಕ ಯಾಂತ್ರೀಕೃತಗೊಂಡ ಮತ್ತು ಡಿಜಿಟಲ್‌ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಎನ್‌ಎಂಪಿಎ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

ಎನ್‌ಎಂಪಿಎ ಅಧ್ಯಕ್ಷ ಡಾ.ಎ.ವಿ.ರಮಣ ಅವರು, ಬಂದರಿನ ಪ್ರಮುಖ ಮೂಲಸೌಕರ್ಯಗಳು, ಸೌಲಭ್ಯಗಳು, ವಿವಿಧ ಯೋಜನೆಗಳು, ಪ್ರಮಾಣೀಕರಣಗಳು, ಬಂದರಿನ ಸಾಧನೆಗಳು ಮತ್ತು ಕಾರ್ಯಾಚರಣೆ ಸಾಮರ್ಥ್ಯಗಳ ಕುರಿತು ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ