ಮಾಸಾಶನಕ್ಕೆ ಹೆಚ್ಚುವರಿ ದಾಖಲೆ ಕೇಳಿಲ್ಲ: ತಹಸೀಲ್ದಾರ್‌ ಸ್ಪಷ್ಟನೆ

KannadaprabhaNewsNetwork |  
Published : Jul 18, 2026, 01:15 AM IST
ಕನ್ನಡಪ್ರಭ ಜೂ.25ರಂದು ಪ್ರಕಟಿಸಿದ್ದ ವರದಿ | Kannada Prabha

ಸಾರಾಂಶ

‘ಹೆಚ್ಚುವರಿ ದಾಖಲೆ ಬೇಡಿಕೆ: ಮಾಸಾಶನಕ್ಕೆ ವೃದ್ಧರ ಅಲೆದಾಟ’ ಎಂಬ ಶೀರ್ಷಿಕೆಯಡಿ ‘ಕನ್ನಡಪ್ರಭ’ ಕಳೆದ ಜೂ.25ರಂದು ವಿಶೇಷ ವರದಿ ಪ್ರಕಟಿಸಿದ್ದು, ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯ ಅಧಿಕಾರಿಗಳು ಕೊಡಗು ಜಿಲ್ಲಾಧಿಕಾರಿ ಬಳಿ ವರದಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಕುಶಾಲನಗರ ತಹಸೀಲ್ದಾರ್ ಮಾಸಾಶನಕ್ಕಾಗಿ ನಾವು ಹೆಚ್ಚುವರಿ ದಾಖಲೆ ಕೇಳಿಲ್ಲ. ಇಲಾಖೆಯ ನಿಯಮಾನುಸಾರ ದಾಖಲೆಗಳನ್ನಷ್ಟೇ ಕೇಳಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸುಂಟಿಕೊಪ್ಪ: ‘ಹೆಚ್ಚುವರಿ ದಾಖಲೆ ಬೇಡಿಕೆ: ಮಾಸಾಶನಕ್ಕೆ ವೃದ್ಧರ ಅಲೆದಾಟ’ ಎಂಬ ಶೀರ್ಷಿಕೆಯಡಿ ‘ಕನ್ನಡಪ್ರಭ’ ಕಳೆದ ಜೂ.25ರಂದು ವಿಶೇಷ ವರದಿ ಪ್ರಕಟಿಸಿದ್ದು, ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯ ಅಧಿಕಾರಿಗಳು ಕೊಡಗು ಜಿಲ್ಲಾಧಿಕಾರಿ ಬಳಿ ವರದಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಕುಶಾಲನಗರ ತಹಸೀಲ್ದಾರ್ ಮಾಸಾಶನಕ್ಕಾಗಿ ನಾವು ಹೆಚ್ಚುವರಿ ದಾಖಲೆ ಕೇಳಿಲ್ಲ. ಇಲಾಖೆಯ ನಿಯಮಾನುಸಾರ ದಾಖಲೆಗಳನ್ನಷ್ಟೇ ಕೇಳಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕನ್ನಡಪ್ರಭ ಪ್ರಕಟಸಿದ್ದ ವರದಿಯಲ್ಲಿ ಮಾಸಾಶನ ಪಡೆಯಲು ಕಂದಾಯ ಕಚೇರಿಯ ಗ್ರಾಮ ಆಡಳಿತ ಅಧಿಕಾರಿಗಳನ್ನು ಅವರು ಸೂಚಿಸುವ ದಾಖಲಾತಿಗಳಿಗಾಗಿ ಅಲೆಯುವ ದುಃಸ್ಥಿತಿ ಎದುರಾಗಿದೆ. ಈ ಬಾರಿ ಅರ್ಜಿ ಸಲ್ಲಿಸುವ ಸಂದರ್ಭ ಇಲ್ಲಿಯ ತನಕ ಬಿಪಿಎಲ್ ಪಡಿತರ ಚೀಟಿ, ಆಧಾರ್‌ ಕಾರ್ಡ್, ಮತದಾನದ ಗುರುತಿನ ಚೀಟಿ ಹಾಗೂ ಬ್ಯಾಂಕ್ ಪಾಸ್‌ ಪುಸ್ತಕ ದಾಖಲಾತಿಯಾಗಿ ಸ್ವೀಕರಿಸಲಾಗುತ್ತಿತ್ತು ಎಂದು ಗಮನ ಸೆಳೆಯಲಾಗಿತ್ತು. ಆದರೆ ಇದೀಗ ಹೊಸದಾಗಿ ಮಕ್ಕಳ ಶಿಕ್ಷಣದ ಪ್ರಮಾಣಪತ್ರ ಅಥವಾ ಸರ್ಕಾರಿ ಆರೋಗ್ಯ ವೈದ್ಯರಿಂದ ವಯಸ್ಸಿನ ದೃಢೀಕರಣ ಪತ್ರವನ್ನು ನೀಡಬೇಕಾಗಿದೆ. ಸರ್ಕಾರ ಈ ಕಾನೂನಿನ ಪರಿಣಾಮ ಸಾಕಷ್ಟು ಕುಗ್ರಾಮಗಳ ವಯೋ ವೃದ್ಧರು ಮಾಸನದಿಂದ ವಂಚಿಗೊಳ್ಳಲಿದ್ದಾರೆ ಎಂದು ಸಾರ್ವಜನಿಕರು ದೂರಿಕೊಂಡಿದ್ದರು. ಈ ಬಗ್ಗೆ ಕನ್ನಡಪ್ರಭ ವಿವಿಧ ಹಿರಿಯರನ್ನು, ಮಾಜಿ ಜನಪ್ರತಿನಿಧಿಗಳನ್ನು ಮಾತನಾಡಿಸಿ, ದಾಖಲೆಗಳನ್ನು ಹೊಂದಿಸಲಾಗದೆ ಹಿರಿಯರು ಪಡುತ್ತಿರುವ ಕಷ್ಟದ ಕುರಿತು ಚಿತ್ರ ಸಹಿತ ವರದಿ ಪ್ರಕಟಿಸಿತ್ತು. ‘ಕನ್ನಡಪ್ರಭ’ ವರದಿ ಮುಖ್ಯಮಂತ್ರಿಗಳ ಸಚಿವಾಲಯದ ಗಮನಕ್ಕೆ ಬಂದಿದ್ದು, ಮುಖ್ಯ ಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಡಾ. ಕೆ. ವೈಷ್ಣವಿ ಅವರು 30-06-2026ರಂದು ಸರ್ಕಾರದ ಕಂದಾಯ ಇಲಾಖೆಯ ಅಪಾರ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ವಿಷಯದ ವಾಸ್ತಂಶದ ಬಗ್ಗೆ ಪರಿಶೀಲಿಸಿ ಅನುಪಾನ ವರದಿಯನ್ನು ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಕಳುಹಿಸಿ ಕೊಡಲು ನಿರ್ದೇಶಿಸಿದ್ದರು.

ಜಿಲ್ಲಾಧಿಕಾರಿ ಕಚೇರಿ ಸ್ಪಷ್ಟನೆ: ಅದರಂತೆ ಜಿಲ್ಲಾಧಿಕಾರಿಗಳ ಕಚೇರಿಯಿಂದ 10-07-2026 ಅನುಪಾಲನಾ ವರದಿಯನ್ನು ಕಳುಹಿಸಿದ್ದು, ಅದರಲ್ಲಿ ಸುಂಟಿಕೊಪ್ಪ ಹೋಬಳಿಯಲ್ಲಿ ವಿವಿಧ ಪಲಾನುಭವಿಗಳ ಒಟ್ಟು ಸಂಖ್ಯೆ 993 ಆಗಿದ್ದು, ಇವುಗಳನ್ನು ಸರ್ಕಾರಿ ಆದೇಶ ಸಂಖ್ಯೆ 10-02-21 ಸರ್ಕಾರದ ಸುತ್ತೋಲೆಯಂತೆ ಸಾಮಾಜಿ ಭದ್ರತೆ ಮತ್ತು ಪಿಂಚಣಿದಾರರಿಗೆ ನಿಗದಿಪಡಿಸಲಾದ ವಾರ್ಷಿಕ ಆದಾಯ ಮಿತಿಯನ್ನು32,000 ರು. ಎಂದು ನಿಗದಿಗೊಳಿಸಿದ್ದು ಕೆಲವು ಕಡೆ 32,000ಕ್ಕಿಂತ ಕಡಿಮೆ ಆದಾಯವಿರುವ ಕುಟುಂಬಗಳಿಗೆ ತಪ್ಪಾಗಿ 32,000 ರು.ಗಿಂತ ಹೆಚ್ಚು ಆದಾಯ ನಮೂದಾಗಿರುವ ಹಿನ್ನೆಲೆಯಲ್ಲಿ ತಿದ್ದುಪಡಿ ಮಾಡಿ ಆದಾಯ ದೃಢೀಕರಣ ನೀಡಿ ಅಪ್ಲೋಡ್‌ ಮಾಡಲಾಗುತ್ತಿದೆ. ಹೊರತು ಯಾವುದೇ ಫಲಾನುಭವಿಗಳ ಪೈಕಿ ಸಂದೇಹಕ್ಕೆ ಆಸ್ಪದವಾಗಿ ಪಿಂಚಣಿ ಪಡೆಯುತ್ತಿರುವ ಪಲಾನುಭವಿಗಳ ಪಿಂಚಣಿಯನ್ನು ಪರಿಶೀಲಿಸಿದ ಸಂದರ್ಭ ಪಲಾನುಭವಿಗಳಿಂದ ದಾಖಲಾತಿಗಳನ್ನು ಹೆಚ್ಚುವರಿಯಾಗಿ ಪಡೆಯುತ್ತಿಲ್ಲ ಎಂದು ವರದಿ ನೀಡಿದೆ.

ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಫಲಾನುಭವಿಗಳ ಮಾಹಿತಿ ಪರಿಶೀಲಿಸುವ ಸಂದರ್ಭ ಗ್ರಾಮ ಆಡಳಿತ ಅಧಿಕಾರಿಗಳು, ಮನೆ ಮನೆಗೆ ತೆರಳಿ ನಡೆದಾಡಲು ಸಾಧ್ಯವಾಗದೆ ಹಾಸಿಗೆಯಲ್ಲಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪೂರಕ ದಾಖಲೆಗಳನ್ನು ಪಡೆಯುತ್ತಿದ್ದಾರೆ.

ಸರ್ಕಾರದ ಆದೇಶದಂತೆ ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ವನ್ ಕೇಂದ್ರಗಳನ್ನು ತೆರೆಯಲಾಗಿದ್ದು, ಸದರಿ ಕೇಂದ್ರಗಳಲ್ಲಿ ಪಿಂಚಣಿದಾರರು ಸರ್ಕಾರದ ನಿಗಧಿತ ಶುಲ್ಕ ಪಾವತಿಸಿ ಆದಾಯ ದೃಢೀಕರಣ ಕೋರಿ ಅರ್ಜಿ ಸಲ್ಲಿಸಿದ್ದಲ್ಲಿ ನಿಗಧಿತ ದಿನಗಳೊಳಗೆ ದೃಢೀಕರಣ ನೀಡಲು ಕ್ರಮ ವಹಿಸಲಾಗುತ್ತಿದೆ. ಸುಂಟಿಕೊಪ್ಪ ನಾಡ ಕಚೇರಿಗೆ ಫಲಾನುಭವಿಗಳು ಬರುವ ಅವಶ್ಯಕತೆ ಇರುವುದಿಲ್ಲ ಎಂದು ಉತ್ತರದಲ್ಲಿ ಹೇಳಲಾಗಿದೆ.

ಪಿಂಚಣಿ ಪರಿಶೀಲನೆಗೆ ಮನೆ ಮನೆಗಳಿಗೆ ತೆರಳಿದಾಗ ಫಲಾನುಭವಿಗಳು ಗ್ರಾಮದಿಂದ ಸ್ಥಳಾಂತರಗೊಂಡಿರುವ ಪ್ರಕರಣಗಳು ಕಂಡುಬಂದಿದ್ದು, ಈ ಸ್ಥಳಾಂತರ ಫಲಾನುಭವಿಗಳ ನಾಡ ಕಚೇರಿಗೆ ಆಗಮಿಸಿ ಪಿಂಚಣಿ ಮಾಹಿತಿ ಪಡೆಯುತ್ತಿದ್ದಾರೆಯೇ ಹೊರತು ಯಾವುದೇ ಅರ್ಹ ಫಲಾನುಭವಿಗಳನ್ನು ಅಲೆದಾಡಿಸುತ್ತಿರುವುದಿಲ್ಲ ಹಾಗೂ ಸಂಯೋಜನೆ ಮೊಬೈಲ್ ತಂತ್ರಾಂಶದಲ್ಲಿ ಯಾವ ದಾಖಲೆಗಳನ್ನು ಪಡೆದು ಅಪ್ಲೋಡ್ ಮಾಡಲು ತಿಳಿಸಲಾಗಿರುತ್ತದೆಯೋ, ಕೇವಲ ಅಂತಹ ದಾಖಲಾತಿಗಳನ್ನು ಮಾತ್ರ ಫಲಾನುಭವಿಗಳಿಂದ ಸಂಗ್ರಹಿಸಿ ಸಂಯೋಜನೆ ಮೊಬೈಲ್ ತಂತ್ರಾಂಶದಲ್ಲಿ ಅಳವಡಿಸಲಾಗುತ್ತಿದೆ ಹೊರತು ಯಾವುದೇ ಫಲಾನುಭವಿಗಳಿಂದ ಹೆಚ್ಚುವರಿ ದಾಖಲೆಗಳನ್ನು ಪಡೆಯುತ್ತಿರುವುದಿಲ್ಲ ಎಂದು ಉಲ್ಲೇಖಿಸಲಾಗಿದೆ.ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಪೈಕಿ ಸಂದೇಹಾಸ್ಪದವಾಗಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಪಿಂಚಣಿಗಳನ್ನು ಪರಿಶೀಲಿಸಿ ಸಂಯೋಜನೆ ಮೊಬೈಲ್ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡುವ ಸಂಬಂಧ ಫಲಾನುಭವಿಗಳಿಂದ ದಾಖಲಾತಿಗಳನ್ನು ಪಡೆಯಲಾಗುತ್ತಿದೆ ಎಂದು ಕುಶಾಲನಗರ ತಹಸೀಲ್ದಾರರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಪಿಂಚಣಿದಾರರಿಗೆ ಮಾಶಾಸನಕ್ಕಾಗಿ ಸರ್ಕಾರದ ಆದೇಶದಂತೆ ದಾಖಲೆಗಳನ್ನು ಕೇಳಲಾಗುತ್ತಿದೆ. ಬದಲಾಗಿ ಹೆಚ್ಚುವರಿ ದಾಖಲೆಗಳನ್ನು ಕೇಳಲಾಗುತ್ತಿಲ್ಲ. ಯಾರಾದರೂ ಆ ರೀತಿ ಕೇಳಿದಲ್ಲಿ ತಮಗೆ ಮಾಹಿತಿ ನೀಡಿದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. -ಕೃಷ್ಣಮೂರ್ತಿ, ತಹಸೀಲ್ದಾರ್, ಕುಶಾಲನಗರ.

ತನ್ನ ಪಿಂಚಣಿಯು ಕಳೆದ 3 ತಿಂಗಳಿನಿಂದ ಸ್ಥಗಿತಗೊಂಡಿದ್ದು, ಈ ಬಗ್ಗೆ ಉಲುಗುಲಿ ಗ್ರಾಮ ಆಡಳಿತಾಧಿಕಾರಿ ಅವರನ್ನು ಭೇಟಿ ಮಾಡಿ ವಿಚಾರಿಸಿದಾಗ ವಾಸ ದೃಢೀಕರಣ ಪತ್ರ ಹಾಗೂ ವಾರ್ಷಿಕ ಆದಾಯ ದೃಢೀಕರಣ ಪತ್ರಗಳನ್ನು ನೀಡುವಂತೆ ಸೂಚಿಸಿದ ಮೇರೆ ಸಂಬಂಧಿಕರೊಂದಿಗೆ ತೆರಳಿ ದಾಖಲಾತಿ ಹೊಂದಿಸಿಕೊಂಡಿದ್ದೇನೆ. -ಹೆಸರು ಹೇಳಲಿಚ್ಛಿಸದ ವೃದ್ದೆ, ಸುಂಟಿಕೊಪ್ಪ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಶಾಲನಗರ: ಆಂಗ್ಲ ಫಲಕ ಅಳವಡಿಕೆ ವಿರೋಧಿಸಿ ಪ್ರತಿಭಟನೆ
ಗ್ರಾಮೀಣ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಡಾ. ಶಿವಕುಮಾರ ಸ್ವಾಮೀಜಿ ಕನಸು: ಸಿದ್ದಲಿಂಗ ಸ್ವಾಮೀಜಿ