ರಾಜೀನಾಮೆ ಕೊಡೋದಾಗಿ ಯಾವ ಮುಖ್ಯಮಂತ್ರಿಯೂ ಹೇಳಲ್ಲ: ಶೆಟ್ಟರ

KannadaprabhaNewsNetwork |  
Published : Sep 14, 2024, 01:49 AM IST
ಜಗದೀಶ ಶೆಟ್ಟರ | Kannada Prabha

ಸಾರಾಂಶ

ಆಪಾದನೆ ಬಂದಾಗ ಎಲ್ಲ ಮುಖ್ಯಮಂತ್ರಿಗಳು ನಾನೇ ಮುಂದುವರಿಯುತ್ತೇನೆ ಎನ್ನುತ್ತಾರೆ. ನನ್ನ ವಿರುದ್ಧ ತೀರ್ಪು ಬರುತ್ತದೆ. ನಾನು ರಾಜೀನಾಮೆ ಕೊಟ್ಟು ಹೋಗುತ್ತೇನೆಂದು ಯಾವ ಮುಖ್ಯಮಂತ್ರಿಯೂ ಹೇಳುವುದಿಲ್ಲ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಆಪಾದನೆ ಬಂದಾಗ ಎಲ್ಲ ಮುಖ್ಯಮಂತ್ರಿಗಳು ನಾನೇ ಮುಂದುವರಿಯುತ್ತೇನೆ ಎನ್ನುತ್ತಾರೆ. ನನ್ನ ವಿರುದ್ಧ ತೀರ್ಪು ಬರುತ್ತದೆ. ನಾನು ರಾಜೀನಾಮೆ ಕೊಟ್ಟು ಹೋಗುತ್ತೇನೆಂದು ಯಾವ ಮುಖ್ಯಮಂತ್ರಿಯೂ ಹೇಳುವುದಿಲ್ಲ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿ ರಾಜೀನಾಮೆ ಕೊಡುವವರು ಹೇಳಬೇಕು, ಹೇಳುತ್ತಾರಷ್ಟೇ. ಕೊನೆಗೆ ಅವರ ಹಣೆಬರಹ ಕೋರ್ಟ್‌ನಲ್ಲಿ ಆಗುತ್ತದೆ ಎಂದರು.ನಾಗಮಂಗಲದ ಗಲಭೆ ಪ್ರಕರಣ ಪೂರ್ವನಿಯೋಜಿತ ಕೃತ್ಯವಾಗಿದೆ. ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ರಾಜ್ಯದಲ್ಲಿ ಈ ರೀತಿ ಯಾರು ಗಲಭೆಗೆ ಪ್ರಚೋದನೆ ಕೊಟ್ಟವರು? ಕಲ್ಲು ತೂರಿ ಹಾನಿ ಮಾಡಿದವರ ರಕ್ಷಣೆ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಅಲ್ಪಸಂಖ್ಯಾತರೇ ಗಲಭೆ ಮಾಡಿದ್ದಾರೆ. ಗಣಪತಿ ಮೆರವಣಿಗೆ ಹೋಗುತ್ತದೆ. ಅದಕ್ಕೆ ಮಸೀದಿ ಮುಂದೆ ಬರಬೇಡಿ ಎನ್ನುವ ಹಕ್ಕು ಅವರಿಗೇನಿದೆ ಎಂದು ಪ್ರಶ್ನಿಸಿದರು.

ನೀವು ಅವರಿಗೆ ರಕ್ಷಣೆ ಕೊಡಿ, ಮಸೀದಿಗೆ ತೊಂದರೆಯಾಗದಂತೆ ರಕ್ಷಣೆ ಕೊಡಿ. ಅದನ್ನು ಬಿಟ್ಟು ಅಲ್ಲಿ ಹೋಗಬೇಡಿ, ಇಲ್ಲಿ ಹೋಗಬೇಡಿ ಎಂದರೆ ಹೇಗೆ? ಇದು ಸ್ವತಂತ್ರ ಭಾರತ, ಇಂತವರಿಗೆ ಸಹಕಾರ ಕೊಡುವುದರಿಂದಲೇ ಇಂತಹ ಗಲಭೆ ನಡೆಯುತ್ತಿವೆ. ರಾಜ್ಯದಲ್ಲಿ ಯಾವಾಗ ಯಾವಾಗ ಕಾಂಗ್ರೆಸ್ ಸರ್ಕಾರ ಬಂದಿದೆ, ಆಗ ರಾಜ್ಯದಲ್ಲಿ ಕೋಮು ಗಲಭೆ ಆಗಿದೆರ. ಅದಕ್ಕೆ ಇದೊಂದು ಉದಾಹರಣೆ ಎಂದು ಹೇಳಿದರು.

ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ರಕ್ಷಣೆ ನೀಡಲಾಗುತ್ತಿದೆ. ಯಾರು ತಪ್ಪು ಮಾಡಿಲ್ಲವೋ ಅವರಿಗೆ ಶಿಕ್ಷೆ ನೀಡುವುದೇ ಕಾಂಗ್ರೆಸ್‌ ನೀತಿಯಾಗಿದೆ. ನಾಗಮಂಗಲ ಗಲಭೆ ಸಣ್ಣಪುಟ್ಟ ಗಲಾಟೆ ಎಂಬ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಮನಸ್ಥಿತಿಯನ್ನು ನೀವೇ ಅರ್ಥ ಮಾಡಿಕೊಳ್ಳಿ ಎಂದುಹೇಳಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ