ಯಲ್ಲಾಪುರ: ರಾಜ್ಯದಲ್ಲಿ ಸರ್ಕಾರ ರೈತರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಡಕೆ ಹಾಗೂ ತೆಂಗಿಗೆ ಸರಿಯಾದ ಬೆಲೆ ಸಿಗಬೇಕು. ರೈತರು ಬೆಳೆದ ಯಾವುದೇ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಗಣೇಶ ಪಾಟಣಕರ್ ಮಾತನಾಡಿ, ರೈತರು ಸಂಕಷ್ಟದಲ್ಲಿದ್ದಾರೆ. ಜಗತ್ತಿನಲ್ಲಿ ಎಷ್ಟೇ ತಂತ್ರಜ್ಞಾನ ಮುಂದುವರಿದರೂ ರೈತರ ಬದುಕನ್ನು ಹಸನಾಗಿಸುವ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಈ ಕುರಿತಾಗಿ ಸಂಘಟನೆಯಿಂದ ಹೋರಾಟ ನಡೆಸಲಾಗುವುದೆಂದರು.
ಸಂಘಟನೆಯ ಪ್ರಮುಖರಾದ ವಿ.ಎಸ್. ಕಂರೆಪ್ಪಗೌಡ್ರ, ಸಂಗಣ್ಣ ಬಾಗೇವಾಡಿ, ಬಸವರಾಜ ಸಂಬೋಜಿ, ಬಾಳಮ್ಮ ಮುದೆನೂರ, ಫಕೀರಪ್ಪ ಪೂಜಾರ, ಎಂ.ಡಿ. ಕಾಲಿಬಾಗ, ಹೇಮಣ್ಣ ದೊಡ್ಡಮನಿ, ಈಶ್ವರಪ್ಪ ರಾಯನಗೌಡ್ರ, ರಾಮನಗೌಡ ಪರ್ವತಗೌಡ್ರ, ಯಲ್ಲಪ್ಪ ದುಂದೂರು, ಶಂಕ್ರಮ್ಮ ಸುತಾರ, ರೇಣುಕಾ, ಉದ್ಯಮಿ ಬಾಲಕೃಷ್ಣ ನಾಯಕ, ಬಿಜೆಪಿ ತಾಲೂಕಾಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಸುಭಾಸ್ ಶೇಷಗಿರಿ, ಬಶೀರ ಸೈಯ್ಯದ್, ಮಾರುತಿ ಸೋಮಾಪುರಕರ್, ಪರಶುರಾಮ ಮರಾಠಿ, ಗಣಪ ಸಿದ್ದಿ, ಶಾಣಾ ಮರಾಠಿ, ಗೀತಾ ಮಿರಾಶಿ, ಆಯೇಷಾ ಗೋಜನೂರು, ಗಾಂಧಿ ಸೋಮಾಪುರಕರ್ ಇದ್ದರು.