ನವಲಗುಂದ:
ಪಟ್ಟಣದ ಪುರಸಭೆ ಎದುರು ಕರ್ನಾಟಕ ಚಾಲಕರ ಒಕ್ಕೂಟದ ತಾಲೂಕು ಘಟಕದಿಂದ ಹಮ್ಮಿಕೊಳ್ಳಲಾಗಿದ್ದ 2ನೇ ದಿನದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದರು.
ನೀಲಮ್ಮನ ಕೆರೆಯ ದಡದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದರೂ ಸಹ, ಟ್ಯಾಕ್ಸಿ ಸ್ಟ್ಯಾಂಡ್‌ನ ವರೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆಟೋ ಚಾಲಕರು ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಭರವಸೆ ನೀಡಿದರು. ಶಾಸಕರ ಭರವಸೆ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ಧರಣಿಯಿಂದ ಆಟೋ ಚಾಲಕರು ಹಿಂದೆ ಸರಿದರು.ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಶರಣು ಪೂಜಾರ, ಮಂಜುನಾಥ ಸುಣಗಾರ, ಮಾಬುಸಾಬ್ ಯರಗುಪ್ಪಿ, ನಿಂಗಪ್ಪ ಕೆಳಗೇರಿ, ಮಂಜುನಾಥ ಮೆಣಸಿನಕಾಯಿ, ಸಿರಾಜುದ್ದೀನ್ ಧಾರವಾಡ, ಪ್ರವೀಣ ಕಾಳೆ, ಅಲ್ತಾಫ್ ಇಬ್ರಾಹಿಂಪೂರ, ರಿಯಾಜ್ ಹುಗ್ಗಿ, ಶಂಭು ಪವಾರ, ಪುಂಡಲೀಕ್ ಕಲಾಲ, ಅಶೋಕ ಬಸಾಪುರ, ಶಶಿ ತುಳಸಿಗೇರಿ ಸೇರಿ ಹಲವರಿದ್ದರು.