- ಸಿಎಂ ಸ್ಥಾನ ನೀಡುವಂತೆ ಡಿಕೆಶಿ ಪರ ಮತ್ತೆ ಬ್ಯಾಟಿಂಗ್
- - - * ಶಾಸಕರ ಸಮರ್ಥನೆ ಏನು?- ಡಿಕೆಶಿ ಸಾಹೇಬರಿಗೆ ಅನೇಕ ಶಾಸಕರ ಬೆಂಬಲವಿದೆ
- ಕಾಂಗ್ರೆಸ್ ಅಧಿಕಾರಕ್ಕೆ ತರಲು ಶಿವಕುಮಾರ್ ಹಗಲಿರುಳು ಶ್ರಮಿಸಿದ್ದಾರೆ- ಎಲ್ಲ ಜಾತಿ, ಸಮುದಾಯದವರ ಪರವಾಗಿ ಡಿಕೆಶಿ ಸಮರ್ಥ ನಾಯಕ
- ಮತ ಹಾಕಿದ್ದಾರೆಂದು ಜಾತಿಗೊಂದು ಉಪ ಮುಖ್ಯಮಂತ್ರಿ ಹುದ್ದೆ ಸಾಧ್ಯವೇ?- - -
ಕನ್ನಡಪ್ರಭ ವಾರ್ತೆ, ದಾವಣಗೆರೆ
ಈ ಬಾರಿಯೇ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗುತ್ತಾರೆ. ಈ ಬಗ್ಗೆ ಯಾವುದೇ ಸಂಶಯವೂ ಇಲ್ಲ ಎಂದು ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಮತ್ತೆ ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ.ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ ಅವರಿಗೆ ಅನೇಕ ಶಾಸಕರ ಬೆಂಬಲವಿದೆ. ಹತ್ತು ಜನರನ್ನು ಉಪ ಮುಖ್ಯಮಂತ್ರಿ ಮಾಡಲಿ. ಆದರೆ, ಡಿ.ಕೆ.ಶಿವಕುಮಾರರನ್ನು ಮೊದಲು ಮುಖ್ಯಮಂತ್ರಿ ಮಾಡಬೇಕು. ಡಿ.ಕೆ.ಶಿವಕುಮಾರ ಸಾಹೇಬರ ಸಂಘಟನೆಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂಬುದಾಗಿ ಅವರು ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ಬೆನ್ನಲ್ಲೇ ಡಿಕೆಶಿ ಪರ ಮತ್ತೆ ಧ್ವನಿ ಎತ್ತಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ ಡಿ.ಕೆ.ಶಿವಕುಮಾರ ಸಾಹೇಬರು ಮುಖ್ಯಮಂತ್ರಿ ಆಗಬೇಕಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶನದಲ್ಲಿ ಡಿಕೆಶಿ ಉಪ ಮುಖ್ಯಮಂತ್ರಿ ಆಗಿದ್ದಾರೆ. ಜಾತಿಗೊಂದು ಉಪ ಮುಖ್ಯಮಂತ್ರಿ ಮಾಡುವುದಾದರೆ ನಮ್ಮ ಅಭ್ಯಂತರವೇನೂ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸಿದ್ದಂತಹ ಡಿ.ಕೆ.ಶಿವಕುಮಾರ ಸಾಹೇಬರನ್ನು ಮೊದಲು ಮುಖ್ಯಮಂತ್ರಿ ಮಾಡಲಿ. ಆನಂತರ ಡಜನ್ ಡಿಸಿಎಂಗಳನ್ನು ಬೇಕಾದರೂ ಮಾಡಲಿ. ಡಿ.ಕೆ.ಶಿ. ಸಾಹೇಬರಿಗೆ ಅನೇಕ ಶಾಸಕರ ಬೆಂಬಲವಿದೆ. ಬೆಂಬಲ ಇರುವಂಥ ಶಾಸಕರ ಹೆಸರನ್ನು ನಾನು ಪ್ರಸ್ತಾಪ ಮಾಡುವುದೂ ಇಲ್ಲ ಎಂದು ಬಸವರಾಜ ಶಿವಗಂಗಾ ತಿಳಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಲ್ಲ ಜಾತಿಯವರೂ ಮತ ಹಾಕಿದ್ದಾರೆ. ಹಾಗೆಂದು ಜಾತಿಗೊಂದು ಉಪ ಮುಖ್ಯಮಂತ್ರಿ ಸ್ಥಾನ ಕೊಡುವುದಕ್ಕೆ ಸಾಧ್ಯವೇ? ಎಲ್ಲ ಜಾತಿ, ಸಮುದಾಯದವರ ಪರವಾಗಿ ಸಮರ್ಥ ನಾಯಕ ಎಂಬ ಕಾರಣಕ್ಕಾಗಿಯೇ ಡಿ.ಕೆ.ಶಿವಕುಮಾರ ಅವರನ್ನು ಉಪ ಮುಖ್ಯಮಂತ್ರಿ ಮಾಡಿರುವುದು.
- - -ಟಾಪ್ ಕೋಟ್.. ಡಿಸಿಎಂ ಹುದ್ದೆ ಬಗ್ಗೆ ಯಾರೂ ಮಾತನಾಡದಂತೆ ಕಾಂಗ್ರೆಸ್ ಹೈಕಮಾಂಡ್ ಹೇಳಿದೆ. ಹೀಗಿದ್ದರೂ ಡಿಸಿಎಂ ಹುದ್ದೆ ಬಗ್ಗೆ ಹಿರಿಯರೇ ಹೇಳಿಕೆ ನೀಡುವಾಗ ನಾವೂ ಅಂತಹ ಹಿರಿಯರನ್ನೇ ಪಾಲಿಸಬೇಕಾಗುತ್ತದೆ- ಬಸವರಾಜ ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ
- - --28ಕೆಡಿವಿಜಿ12, 13:
ಬಸವರಾಜ ವಿ.ಶಿವಗಂಗಾ