ರಾಜೀನಾಮೆ ವಿಚಾರದಲ್ಲಿ ಡ್ರಾಮ ಮಾಡಿಲ್ಲ: ನಯನಾ ಮೋಟಮ್ಮ

KannadaprabhaNewsNetwork |  
Published : Nov 29, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರು: ಕಾಡಾನೆ ಸಮಸ್ಯೆಯಿಂದ ಕ್ಷೇತ್ರದ ಜನರು ಎದುರಿಸುತ್ತಿರುವ ಸಂಕಷ್ಟಕ್ಕೆ ಪರಿಹಾರ ಕಲ್ಪಿಸುವ ಉದ್ದೇಶ ದಿಂದ ರಾಜೀನಾಮೆ ನೀಡಲು ಮುಂದಾಗಿದ್ದೆನೇ ಹೊರತು, ಯಾವುದೇ ಡ್ರಾಮ ಮಾಡಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಚಿಕ್ಕಮಗಳೂರು: ಕಾಡಾನೆ ಸಮಸ್ಯೆಯಿಂದ ಕ್ಷೇತ್ರದ ಜನರು ಎದುರಿಸುತ್ತಿರುವ ಸಂಕಷ್ಟಕ್ಕೆ ಪರಿಹಾರ ಕಲ್ಪಿಸುವ ಉದ್ದೇಶ ದಿಂದ ರಾಜೀನಾಮೆ ನೀಡಲು ಮುಂದಾಗಿದ್ದೆನೇ ಹೊರತು, ಯಾವುದೇ ಡ್ರಾಮ ಮಾಡಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.ಮಾಕೋನಹಳ್ಳಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ ಬೇಲೂರು ಭಾಗದ 56 ಕಾಡಾನೆಗಳನ್ನು ಭದ್ರಾ ಅಭಯಾ ರಣ್ಯಕ್ಕೆ ಸ್ಥಳಾಂತರಿಸಲು ಆದೇಶಿಸಲಾಗಿತ್ತು. ತತ್ಕೊಳ ಮೀಸಲು ಅರಣ್ಯದ ಮೂಲಕ ಆಪರೇಷನ್ ಎಲಿಫೆಂಟ್ ಕಾರ್ಯಾ ಚರಣೆ ನಡೆಸಲು ಮುಂದಾದಾಗ ಕುಂದೂರು, ವಸ್ತಾರೆ, ಆಲ್ದೂರು, ಮೂಡಿಗೆರೆ, ಮಾಕೋನಹಳ್ಳಿ ಹಾಗೂ ನಂದಿಪುರ ಭಾಗದ ಜನರು ವಿರೋಧ ವ್ಯಕ್ತಪಡಿಸಿದ್ದರು. ಮೂಡಿಗೆರೆ ಭಾಗದಲ್ಲಿ ಸ್ಥಳಾಂತರಕ್ಕೆ ವಿರೋಧ ವ್ಯಕ್ತವಾಗಿದ್ದರೆ, ಮಾಕೋನ ಹಳ್ಳಿಯಲ್ಲಿ ಸ್ಥಳಾಂತರಿಸುವಂತೆ ಒತ್ತಾಯಿಸಲಾಗುತ್ತಿದೆ. ಭದ್ರಾ ಅಭಯಾರಣ್ಯಕ್ಕೆ ಆನೆಗಳನ್ನು ಸ್ಥಳಾಂತರಿಸಿದರೆ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ ಎಂದರು.ಈಗಾಗಲೇ 22 ಆನೆಗಳು ಬೇಲೂರು ಭಾಗದತ್ತ ತೆರಳಿವೆ ಎಂಬ ಮಾಹಿತಿ ಇದೆ. ನ.30ರಂದು ಬೆಂಗಳೂರಿನಲ್ಲಿ ನಡೆವ ಸಭೆಯಲ್ಲಿ ರೈತರ ಬೆಳೆ ನಷ್ಟ, ಜನರ ಸಂಕಷ್ಟ ಹಾಗೂ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರದ ಕುರಿತು ಗಂಭೀರವಾಗಿ ಚರ್ಚಿಸುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್ ಹಾಗೂ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಚರ್ಚಿಸಿ, ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಪರಿಹಾರ ದೊರೆಯುವ ವಿಶ್ವಾಸವಿದೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆಗಳಿಗೆ ಸ್ಪಂದಿಸುವುದೇ ಪ್ರಜಾಸೇವೆ: ಶಾಸಕ ಟಿ.ಬಿ. ಜಯಚಂದ್ರ
ಸಾಹೇ ವಿಶ್ವವಿದ್ಯಾಲಯದ 15 ನೇ ಘಟಿಕೋತ್ಸವ