ಅಭಿವೃದ್ಧಿ ಇಲ್ಲದ ಲೇಔಟ್ ಗಳಿಗೆ ಫಾರಂ-3 ಬೇಡ

KannadaprabhaNewsNetwork |  
Published : Nov 18, 2026, 02:15 AM IST
ಪೋಟೋ                                                                                   ಅಭಿವೃದ್ಧಿ ಇಲ್ಲದ ಲೇಔಟ್‌ಗಳಿಗೆ ಫಾರಂ-೩ ನೀಡದಂತೆ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಮುಖ್ಯಾಧಿಕಾರಿ ನಾಗರಾಜಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಅಭಿವೃದ್ಧಿ ಇಲ್ಲದ ಲೇಔಟ್ ಗಳಿಗೆ ಯಾವುದೇ ಕಾರಣಕ್ಕೂ ಫಾರಂ-೩ ನೀಡದಂತೆ ಹಾಗೂ ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಪ.ಪಂ ಮುಖ್ಯಾಧಿಕಾರಿ ನಾಗರಾಜಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕನಕಗಿರಿ

ಅಭಿವೃದ್ಧಿ ಇಲ್ಲದ ಲೇಔಟ್ ಗಳಿಗೆ ಯಾವುದೇ ಕಾರಣಕ್ಕೂ ಫಾರಂ-೩ ನೀಡದಂತೆ ಹಾಗೂ ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಪ.ಪಂ ಮುಖ್ಯಾಧಿಕಾರಿ ನಾಗರಾಜಗೆ ಮನವಿ ಸಲ್ಲಿಸಿದರು.

ತಾಲೂಕು ಅಧ್ಯಕ್ಷ ಹರೀಶ ಪೂಜಾರ ಮಾತನಾಡಿ, ಪಟ್ಟಣದಲ್ಲಿ ಅನಧಿಕೃತ ಲೇಔಟ್ ಗಳ ಸಂಖ್ಯೆ ಹೆಚ್ಚಿದೆ. ಅರೆಬರೆ ಕಾಮಗಾರಿ ಮಾಡಿದ ಲೇಔಟ್‌ಗಳಿಗೆ ಈ ಹಿಂದೆ ಇದ್ದ ಮುಖ್ಯಾಧಿಕಾರಿಗಳು ನಮೂನೆ-೩ ನೀಡಿದ್ದಾರೆ. ಫಾರಂ-೩ ವಿತರಣೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಕಚೇರಿಗೆ ಅಲೆದಾಡುವುದನ್ನು ತಡೆಯಬೇಕು. ಲೇಔಟ್ ಗಳಲ್ಲಿ ರಸ್ತೆ, ಚರಂಡಿ, ವಿದ್ಯುತ್ ಹಾಗೂ ಉದ್ಯಾನವನ ಎಲ್ಲವನ್ನೂ ಪರಿಶೀಲಿಸಿ ಫಾರಂ-೩ ವಿತರಿಸಬೇಕು. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸದಿದ್ದರೆ ಮುಂದಿನ ದಿನಮಾನಗಳಲ್ಲಿ ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಆಗ್ರಹಿಸಿದರು.

ವಿದ್ಯಾರ್ಥಿ ಘಟಕದ ತಾಲೂಕು ಅಧ್ಯಕ್ಷ ಹನುಮೇಶ ಭಜಂತ್ರಿ ಮಾತನಾಡಿ, ಪಟ್ಟಣವು ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಬೀದಿ ದೀಪಗಳು, ಚರಂಡಿ, ಸ್ವಚ್ಛತೆ ಸೇರಿದಂತೆ ನಾನಾ ಸಮಸ್ಯೆಗಳು ತಾಂಡವಾಡುತ್ತಿವೆಯಾದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಕಾರಟಗಿ, ತಾವರಗೇರಾ ರಸ್ತೆಗಳ ಅಗಲೀಕರಣ ಹಾಗೂ ಸೌಂದರ್ಯದ ನೆಪದಲ್ಲಿ ಡಬ್ಬಾ ಅಂಗಡಿಗಳನ್ನು ಯಾವುದೇ ನೋಟಿಸ್ ನೀಡದೆ ಕಿತ್ತೆಸೆದು ಬಡ ವ್ಯಾಪಾರಸ್ಥರ ಮೇಲೆ ದೌರ್ಜನ್ಯ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಬಸವರಾಜ ಕೋರಿ, ವೆಂಕಟೇಶ ಬಲಿಜ, ಸಚಿನ್ ಬ್ಯಾಳಿ, ಖಾದರಬಾಷ, ತೊಂಡೆಪ್ಪ ದಾಸರ, ಸುನೀಲ್ ನಾಯಕ, ದೊಡ್ಡ ಬಸವ ಹಡಪದ, ಪರಶುರಾಮ ಕನಕಾಪುರ ಸೇರಿದಂತೆ ಇತರರು ಇದ್ದರು. ಪೋಟೋ

ಅಭಿವೃದ್ಧಿ ಇಲ್ಲದ ಲೇಔಟ್‌ಗಳಿಗೆ ಫಾರಂ-೩ ನೀಡದಂತೆ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಮುಖ್ಯಾಧಿಕಾರಿ ನಾಗರಾಜಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಾಯುಕ್ತ ಬಲೆಗೆ ಎಸಿ ಕಚೇರಿ ಎಸ್‌ಡಿಎ
ಶಾಂತಿ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು