ಗಣೇಶೋತ್ಸವ ತಡೆಯಲು ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ

KannadaprabhaNewsNetwork |  
Published : Sep 30, 2026, 01:30 AM IST
ಪೋಟೋ 6  : ನೆಲಮಂಗಲ ನಗರದಲ್ಲಿ  ಹಿಂದೂಮಹಾಗಣಪತಿ ಶೋಭಯಾತ್ರೆಯನ್ನು ನಡೆಸಲಾಯಿತು. | Kannada Prabha

ಸಾರಾಂಶ

ದಾಬಸ್‍ಪೇಟೆ: ಪಕ್ಕದ ರಾಜ್ಯದಲ್ಲಿ ಪೊಲೀಸರು ಗಣೇಶೋತ್ಸವದಲ್ಲಿ ಕುಣಿದು ಕುಪ್ಪಳಿಸಿದ್ದಾರೆ, ನಮ್ಮ ರಾಜ್ಯದಲ್ಲಿ ಡಿಜೆ ನಿಷೇಧ, ಅನುಮತಿಗಳ ಬೇಲಿ ಹಾಕಿದ್ದಾರೆ. ಆದರೆ ಗಣೇಶೋತ್ಸವ ನಿಯಂತ್ರಿಸಲು ಯಾವ ಸರ್ಕಾರದಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು

ದಾಬಸ್‍ಪೇಟೆ: ಪಕ್ಕದ ರಾಜ್ಯದಲ್ಲಿ ಪೊಲೀಸರು ಗಣೇಶೋತ್ಸವದಲ್ಲಿ ಕುಣಿದು ಕುಪ್ಪಳಿಸಿದ್ದಾರೆ, ನಮ್ಮ ರಾಜ್ಯದಲ್ಲಿ ಡಿಜೆ ನಿಷೇಧ, ಅನುಮತಿಗಳ ಬೇಲಿ ಹಾಕಿದ್ದಾರೆ. ಆದರೆ ಗಣೇಶೋತ್ಸವ ನಿಯಂತ್ರಿಸಲು ಯಾವ ಸರ್ಕಾರದಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ನೆಲಮಂಗಲದ ಬಸವಣ್ಣ ದೇವರಮಠದಲ್ಲಿ ಹಿಂದೂ ಮಹಾ ಗಣಪತಿ ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಟಿ.ನರಸೀಪುರದಲ್ಲಿ ಶಾಂತಿಯುತ ಗಣೇಶ ವಿಸರ್ಜನೆ ಮಾಡಿದ್ದೇವೆ, ರಾಜ್ಯದಲ್ಲಿ ಗಣೇಶೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ. ಆದರೆ 3 ವರ್ಷದಿಂದ ಗಣೇಶೋತ್ಸವ ಪ್ರತಿಷ್ಠಾಪನೆಗೆ, ಶೋಭಾಯಾತ್ರೆಗೆ ವಿಸರ್ಜನೆಗೆ, ಮೈಕ್ ಹಾಕಲು ಅನುಮತಿ ಕೇಳಬೇಕಾಗಿದೆ. ಯಾವುದೇ ಸರ್ಕಾರಗಳು ಎಷ್ಟೇ ನಿಯಮಗಳನ್ನು ರೂಪಿಸಿ ಕಟ್ಟುಹಾಕುವ ಪ್ರಯತ್ನ ಮಾಡಿದರೂ ಗಣೇಶೋತ್ಸವ ನಿಲ್ಲುವುದಿಲ್ಲ ಎಂದರು.

ಶೋಭಯಾತ್ರೆ: ಬಸವಣ್ಣದೇವರ ಮಠದಿಂದ ಬಸ್ ನಿಲ್ದಾಣ, ತಾಲೂಕು ಕಚೇರಿ, ಪೇಟೆ ಬೀದಿಯ ಮೂಲಕ ಟಿ.ಬಿ ಬಸ್ ನಿಲ್ದಾಣದವರೆಗೂ ಹಿಂದೂಮಹಾ ಗಣಪತಿಯ ಜತೆ ಶೋಭಯಾತ್ರೆಯನ್ನು ನಡೆಸಿದರು. ತಮಟೆ ಸದ್ದಿಗೆ ಯುವಕರು, ಮಹಿಳೆಯರು ಕುಣಿದು ಕುಪ್ಪಳಿಸಿದರು.

ಡಿಜೆ ನೀಡುವಂತೆ ರಸ್ತೆಯಲ್ಲಿ ಪ್ರತಿಭಟನೆ:

ಹಿಂದೂ ಮಹಾಗಣಪತಿ ಶೋಭಯಾತ್ರೆಗೆ ಡಿಜೆಗೆ ಅನುಮತಿ ನೀಡಬೇಕು ಎಂದು ರಸ್ತೆಯಲ್ಲಿಯೇ ಕುಳಿತು ಹಿಂದೂಪರ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಪೊಲೀಸರಿಗೆ ಭಜರಂಗದಳ, ವಿಶ್ವಹಿಂದು ಪರಿಷತ್, ಬಿಜೆಪಿ ಮುಖಂಡರು, ಬಸವಣ್ಣ ದೇವರಮಠದ ಶ್ರೀಸಿದ್ದಲಿಂಗ ಸ್ವಾಮೀಜಿ, ಶಾಸಕ ಶ್ರೀನಿವಾಸ್ ಸೇರಿದಂತೆ ಅನೇಕರು ಡಿಜೆಗೆ ಕೆಲಕಾಲ ಅವಕಾಶ ನೀಡುವಂತೆ ಪೊಲೀಸರಿಗೆ ತಿಳಿಸಿದರೂ ಡಿಜೆಗೆ ಅವಕಾಶ ನೀಡಲಿಲ್ಲ. ಸ್ಥಳದಲ್ಲಿ ಕೆಲ ಸಮಯ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ನಂತರ ಬಸವಣ್ಣ ದೇವರ ಮಠದ ಶ್ರೀಗಳ ಮಧ್ಯಪ್ರವೇಶದಿಂದ ರಸ್ತೆ ತಡೆ ನಿಲ್ಲಿಸಿ ಶೋಭಯಾತ್ರೆ ಮುಂದುವರೆಸಿದರು.

ವಿಸರ್ಜನೆ: ನೆಲಮಂಗಲದಲ್ಲಿ ಶೋಭಯಾತ್ರೆ ಬಳಿಕ ಕೆಂಪಲಿಂಗನಹಳ್ಳಿ ಸಮೀಪದ ಬಾವಿಕೆರೆಗೆ ಹಿಂದೂ ಮಹಾಗಣಪತಿಯನ್ನು ವಿಸರ್ಜಿಸಲಾಯಿತು. ಶೋಭಯಾತ್ರೆ ಆರಂಭದಿಂದ ಗಣೇಶನ ವಿಸರ್ಜನೆಯವರೆಗೂ ಡಿವೈಎಸ್‍ಪಿ ಉಮಾರಾಣಿ ಹಾಗೂ ಇನ್‍ಸ್ಪೆಕ್ಟರ್ ಬಿ.ಆರ್.ಗೌಡ, ನರೇಂದ್ರಬಾಬು ನೇತೃತ್ವದಲ್ಲಿ ಬಿಗಿಭದ್ರತೆ ವಹಿಸಲಾಗಿತ್ತು.

ಈ ಸಂದರ್ಭದಲ್ಲಿ ಶಾಸಕ ಶ್ರೀನಿವಾಸ್, ಮಾಜಿ ಶಾಸಕರಾದ ಎಂ.ವಿ.ನಾಗರಾಜು, ಡಾ.ಕೆ.ಶ್ರೀನಿವಾಸಮೂರ್ತಿ, ಹಿಂದೂ ಮಹಾಗಣಪತಿ ಸ್ವಾಗತ ಸಮಿತಿ ಅಧ್ಯಕ್ಷ ಡಾ.ರಮೇಶ್, ಮುಖಂಡರಾದ ಅರವಿಂದ್, ಸಪ್ತಗಿರಿ ಶಂಕರ್ ನಾಯಕ್, ಎನ್‍ಪಿಎ ಮಾಜಿ ಅಧ್ಯಕ್ಷರಾದ ಎಂ.ಕೆನಾಗರಾಜು, ಮಲ್ಲಯ್ಯ, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಎಂ.ಎನ್ ರಾಮು, ಜೆಡಿಎಸ್ ಅಧ್ಯಕ್ಷ ತಿಮ್ಮರಾಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ತಾಲೂಕು ಅಧ್ಯಕ್ಷ ಜಗದೀಶ ಚೌದರಿ, ಪ್ರಧಾನ ಕಾರ್ಯದರ್ಶಿ ಸತೀಶ್, ಮಹಿಳಾ ಮೋರ್ಚಾ ಅಧ್ಯಕ್ಷ ಮಂಜುಲಾಸುರೇಶ್ ಸೇರಿದಂತೆ ಭಜರಂಗದಳ, ವಿಶ್ವಹಿಂದೂಪರಿಷತ್, ಶ್ರೀರಾಮಸೇನೆ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

ಪೋಟೋ 6 :

ನೆಲಮಂಗಲದಲ್ಲಿ ಹಿಂದೂ ಮಹಾಗಣಪತಿ ಶೋಭಯಾತ್ರೆ ನಡೆಸಲಾಯಿತು.

ಪೋಟೋ 7 :

ನೆಲಮಂಗಲದಲ್ಲಿ ಹಿಂದೂ ಮಹಾಗಣಪತಿ ಶೋಭಯಾತ್ರೆಗೆ ಡಿಜೆ ನೀಡುವಂತೆ ಹಿಂದೂಪರ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಥಪೂರ್ಣವಾಗಿ ದಸರಾಗೆ ಅಗತ್ಯ ಕ್ರಮವಹಿಸಿ: ಜುಬಿನ್‌ ಮೊಹಾಪಾತ್ರ
ತಾಯಿ ಮಕ್ಕಳ ಆರೈಕೆ, ಗುಣಮಟ್ಟದ ಸೇವೆ ನಿಗಾವಹಿಸಿ: ಡಾ.ರಜನಿ ಎಂ