ಅಂಬಳೆ ವೀರಭದ್ರ ನಾಯಕ
ಬೆಳ್ಳಂ ಬೆಳಗ್ಗೆ ವಿದ್ಯಾರ್ಥಿಗಳು ಮೈಸೂರು, ಬೆಂಗಳೂರು, ಚಾಮರಾಜನಗರ, ಕೊಳ್ಳೇಗಾಲ ಕಡೆ ಹೋಗುವ ವಿದ್ಯಾರ್ಥಿಗಳು ಸಕಾಲದಲ್ಲಿ ಸರ್ಕಾರಿ ಬಸ್‌ಗಳು ಇಲ್ಲದೆ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಯಳಂದೂರು ತಾಲೂಕಿನ ಬಹುತೇಕ ವಿದ್ಯಾರ್ಥಿಗಳು ಹೊರ ಜಿಲ್ಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದಿನ ಬೆಳಿಗ್ಗೆ ಯಳಂದೂರು ಪಟ್ಟಣದ ಬಸ್ ನಿಲ್ದಾಣದಿಂದಲೇ ಎಲ್ಲಾ ವಿದ್ಯಾರ್ಥಿಗಳು ಹೋಗಬೇಕಾದ್ದರಿಂದ ಬಸ್ಸಿಗಾಗಿ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಕಾದು ನಿಲ್ಲಬೇಕಾದ ಪರಿಸ್ಥಿತಿ ಇದೆ.ಬೆರಳೆಣಿಕೆಯಷ್ಟು ಬರುವ ಬಸ್ಸುಗಳಿಗೆ ಈ ವಿದ್ಯಾರ್ಥಿಗಳು ಸಕಾಲದಲ್ಲಿ ಶಾಲಾ ಕಾಲೇಜುಗಳಿಗೆ ನಿಗದಿತ ಸಮಯದಲ್ಲಿ ತಲುಪ ಬೇಕಾಗಿದ್ದರಿಂದ ತಮ್ಮ ಪ್ರಾಣದ ಹಂಗು ತೊರೆದು ಬಸ್ ಹತ್ತಬೇಕಾಗಿದೆ.
ನೂರಾರು ವಿದ್ಯಾರ್ಥಿಗಳು ಒಂದೇ ಬಸ್ ಏರಲು ನೂಕು ನುಗ್ಗಲಿನಲ್ಲಿ ಬಿದ್ದು ಗಾಯ ಮಾಡಿ ಕೊಂಡು ಕಣ್ಣೀರು ಸುರಿಸಬೇಕಾಗಿದೆ. ಎಷ್ಟೋ ಬಾರಿ ಬಸ್ ಹತ್ತಬೇಕಾದರೆ ಕಾಲು ಜಾರಿ ಬಿದ್ದು ಗಾಯಗಳಾಗಿ ವಿದ್ಯಾರ್ಥಿಗಳು ಆಸ್ಪತ್ರೆಗೂ ಕೂಡಾ ದಾಖಲಾಗಿರುವ ನಿದರ್ಶನಗಳಿವೆ . ಆದರೆ ವಿಧಿ ಇಲ್ಲದೆ ಬರುವ ಬಸ್ಸನ್ನೇ ಕಷ್ಟವೋ ಸುಖವೋ ಖಾಸಗಿ ಬಸ್ಸನ್ನೇ ಹತ್ತಿ ಶಾಲಾ-ಕಾಲೇಜು ತಲುಪಬೇಕಾಗಿದೆ.
ಕೆಎಸ್‌ಆರ್‌ಟಿಸಿ ಬಸ್‌ಗಳು ಸಕಾಲದಲ್ಲಿ ಬರುವುದೇ ಗ್ಯಾರಂಟಿ ಇಲ್ಲ. ಆದರೂ ಜನ ಮಾತ್ರ ಬರುವ ಬಸ್ಸಿಗೆ ಕಾದು ಹತ್ತುತ್ತಿದ್ದಾರೆ.
ಖಾಸಗಿ ಬಸ್ಸಿಗೆ ಕೊಡಲು ಕಾಸಿಲ್ಲ:
ಪಟ್ಟಣದಕ್ಕೆ ಬಾರದೆ ಬೈಪಾಸ್:
ತಾಲೂಕು ಕೇಂದ್ರಕ್ಕೆ ಬಾರದ ಬಸ್‌ಗಳು:
ಬೈಪಾಸ್ ರಸ್ತೆ ಮಾಡಿರುವುದು ದೊಡ್ಡ ಪ್ರಮಾಣದ ವಾಹನಗಳು, ಲಾರಿಗಳು, ಪಟ್ಟಣದ ವ್ಯಾಪ್ತಿಯಲ್ಲಿ ವಾಹನ ಸಂಚಾರ ದಟ್ಟಣೆ ಯಾಗಬಾರದು ಎಂಬ ಉದ್ದೇಶದಿಂದ ಬೈಪಾಸ್ ರಸ್ತೆಗಳನ್ನು ಮಾಡಲಾಗಿದೆ. ಆದರೆ ಸಾರ್ವಜನಿಕ ಪ್ರಯಾಣಿಸುವ ಸಾರಿಗೆ ಬಸ್‌ಗಳು ಕೂಡ ಬೈಪಾಸ್ ನಲ್ಲಿ ಹೋಗುವುದು ದುರಂತ.
ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ವಿಶೇಷ ಹೆಚ್ಚುವರಿ ಬಸ್ಸು ಬಿಟ್ಟರೆ ವಿದ್ಯಾರ್ಥಿಗಳು ಹಾಗೂ ನೌಕರ ವರ್ಗದವರಿಗೆ ಕೂಲಿಕಾರ್ಮಿಕರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸರ್ಕಾರ ಗಮನ ಹರಿಸಿ ಬಸ್ಸಿನ ಸಮಸ್ಯೆಯನ್ನು ನಿವಾರಣೆ ಮಾಡಬೇಕಾಗಿದೆ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಎಸ್ ಚಂದ್ರಶೇಖರ್ ಹೇಳಿದ್ದಾರೆ.130 ಬಸ್‌ಗೆ ಸಾರಿಗೆ ಇಲಾಖೆಗೆ ಪ್ರಸ್ತಾವನೆ
ಬೆಳಿಗ್ಗೆ ಸಮಯದಲ್ಲಿ ಜಿಲ್ಲೆಯ ಎಲ್ಲಾ ಕಡೆ ಶಾಲಾ ಕಾಲೇಜಿಗೆ ವಿದ್ಯಾರ್ಥಿಗಳು ಹಾಗೂ ನೌಕರರ ವರ್ಗ ಜತೆಗೆ ಕೂಲಿ ಕಾರ್ಮಿಕರು ಕೆಲಸ ಕಾರ್ಯಗಳಿಗೆ ಹೋಗಬೇಕಾದರೆ ಬಸ್ ಸಮಸ್ಯೆ ಉಂಟಾಗಿದೆ. ಈಗಾಗಲೇ ಸರ್ಕಾರದಿಂದ ಹೊಸದಾಗಿ 130 ಬಸ್‌ಗಳನ್ನು ನೀಡಬೇಕೆಂದು ಸಾರಿಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು 64 ಹೊಸ ಬಸ್‌ಗಳು ಬಂದಿದ್ದು ಸಂಚಾರವಾಗುತ್ತಿದೆಚಾಮರಾಜನಗರ ಜಿಲ್ಲೆಯಲ್ಲಿ ಬಿಳಿಗಿರಂಗನಬೆಟ್ಟ ,ಮಹದೇಶ್ವರನ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಭರಚುಕ್ಕಿ ಪ್ರವಾಸಿ ತಾಣವಾಗಿದ್ದರಿಂದ ಶನಿವಾರ ಭಾನುವಾರ ಹಾಗೂ ಸೋಮವಾರ ದಿನಗಳಲ್ಲಿ ಹೆಚ್ಚಿನ ಬಸ್ ಪ್ರವಾಸಿ ತಾಣಕ್ಕೆ ಹೋಗುವುದರಿಂದ ಸಮಸ್ಯೆ ಉಂಟಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಚಿವರ ಗಮನಕ್ಕೆ ತರಲಾಗಿದ್ದು ಇನ್ನು ಸ್ವಲ್ಪ ದಿನದಲ್ಲಿ ಸಾರ್ವಜನಿಕರಿಗೆ ಸಕಾಲದಲ್ಲಿ ಬಸ್ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು ಹೇಳಿದ್ದಾರೆ.