ಸಂಗೀತ ಎಷ್ಟು ಕಲಿತರೂ ಮುಗಿಯುವುದಿಲ್ಲ: ಪರಮೇಶ್ವರ ಹೆಗಡೆ

KannadaprabhaNewsNetwork |  
Published : Jun 24, 2026, 03:30 AM IST
ಫೋಟೊಪೈಲ್-23ಎಸ್ಡಿಪಿ4- ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ಪಂ| ಪರಮೇಶ್ವರ ಹೆಗಡೆಯವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಸುಷಿರ ಸಂಗೀತ ಪರಿವಾರ ಭುವನಗಿರಿ ಕಲ್ಲಾರೆಮನೆ ಸಂಸ್ಥೆಯ 24ನೇ ಭುವನೇಶ್ವರಿ ಸಂಗೀತ ಮಹೋತ್ಸವ ಭುವನಗಿರಿ ದೇವಸ್ಥಾನದಲ್ಲಿ ಜರುಗಿತು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಸುಷಿರ ಸಂಗೀತ ಪರಿವಾರ ಭುವನಗಿರಿ ಕಲ್ಲಾರೆಮನೆ ಸಂಸ್ಥೆಯ 24ನೇ ಭುವನೇಶ್ವರಿ ಸಂಗೀತ ಮಹೋತ್ಸವ ಭುವನಗಿರಿ ದೇವಸ್ಥಾನದಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಿರಾಣಾ, ಗ್ವಾಲಿಯರ್ ಮತ್ತು ಪಾಟಿಯಾಲಾ ಘರಾಣೆಯ ಪ್ರಸಿದ್ಧ ಗಾಯಕ, ಗುರು ಹಾಗೂ ಸಂಗೀತ ನಿರ್ದೇಶಕ ಪಂ. ಪರಮೇಶ್ವರ ಹೆಗಡೆ ಕಲಭಾಗ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪರಮೇಶ್ವರ ಹೆಗಡೆ, ತಾನು ಎಂಟನೇ ವಯಸ್ಸಿನಲ್ಲಿಯೇ ಸಂಗೀತ ಅಭ್ಯಾಸ ಪ್ರಾರಂಭಿಸಿದೆ. ಎಷ್ಟು ಕಲಿತರೂ ಅದು ಮುಗಿಯುವುದಿಲ್ಲ. ಸಂಗೀತ ಅರ್ಥವಾಗಬೇಕೆಂದರೆ ಕನಿಷ್ಠ ಐವತ್ತು ವರ್ಷ ಆಗಬೇಕು ಎಂದರು.

ಅಭಿನಂದನಾ ನುಡಿಗಳನ್ನಾಡಿದ ಪ್ರಾಚಾರ್ಯ ಎಂ.ಕೆ. ನಾಯ್ಕ ಹೊಸಳ್ಳಿ, ಪರಮೇಶ್ವರ ಹೆಗಡೆಯವರು ಸ್ಥಾಪಿಸಿದ ಸಂಗೀತ ಸಂಸ್ಥೆಗಳು ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಿವೆ ಎಂದರು.

ಭುವನೇಶ್ವರಿ ದೇವಸ್ಥಾನದ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲಾಪೋಷಕ ಅಶೋಕ ರಾವ್ (ವಡ್ಡಿನಕೊಪ್ಪ) ಬೆಂಗಳೂರು ಮುಖ್ಯ ಅಭ್ಯಾಗತರಾಗಿ ಅನಿಸಿಕೆ ಹಂಚಿಕೊಂಡರು. ಕರ್ನಾಟಕಿ ಮೃದಂಗ ವಾದಕ ನರಸಿಂಹಮೂರ್ತಿ ಹಳೆಇಕ್ಕೇರಿ ವೇದಿಕೆಯಲ್ಲಿದ್ದರು. ಕೊಳಲುವಾದಕ ಪ್ರಕಾಶ ಹೆಗಡೆ ಕಲ್ಲಾರೆಮನೆ ಸ್ವಾಗತಿಸಿದರು. ರಾಜೇಶ್ವರಿ ಭಟ್ಟ ಡೊಂಬೆಕೈ ಸನ್ಮಾನಪತ್ರ ವಾಚಿಸಿದರು. ಪ್ರಶಾಂತ ಹೆಗಡೆ ಕಾಶಿಗದ್ದೆ ಧನ್ಯವಾದ ಸಮರ್ಪಿಸಿದರು. ಪರಮೇಶ್ವರ ಹೆಗಡೆ ಭಾನ್ಕುಳಿ ನಿರೂಪಿಸಿದರು.

ಸಂಗೀತ ಕಾರ್ಯಕ್ರಮವನ್ನು ವಸುಧಾ ಶರ್ಮ ಮತ್ತು ಡಾ. ಮೇಘನಾ ಕಶ್ಯಪ್ ಬೆಂಗಳೂರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಸಂಗೀತ ಕಾರ್ಯಕ್ರಮದಲ್ಲಿ ಮೊದಲಿಗೆ ಅಮೃತಾ ರಾವ್ ಬೆಂಗಳೂರು ರಾಗ ಶ್ರೀ ಪ್ರಸ್ತುತ ಪಡಿಸಿ, ಹರಿಭಜನೆ ಮಾಡೋ ನಿರಂತರ ಎಂಬ ಭಜನೆ ಹಾಡಿದರು. ಗುರುರಾಜ ಆಡುಕುಳ ತಬಲಾದಲ್ಲಿ ಅಜಯ ಹೆಗಡೆ ವರ್ಗಾಸರ ಹಾರ್ಮೋನಿಯಂ ಸಾಥ್ ನೀಡಿದರು. ಬಾಲ ಕಲಾವಿದ ಚಕ್ಷು ಕಶ್ಯಪ್ ಬೆಂಗಳೂರು ಸಿತಾರ್ ವಾದನದಲ್ಲಿ ರಾಗ ಯಮನ್ ಪ್ರಸ್ತುತ ಪಡಿಸಿದರು. ಪ್ರಣವ ಶರ್ಮಾ ಕಲ್ಲಾಳ ತಬಲಾ ಸಾತ್ ನೀಡಿದರು. ಹಿರಿಯ ಗಾಯಕ ಪಂ| ಪರಮೇಶ್ವರ ಹೆಗಡೆ ರಾಗ ದುರ್ಗಾ, ರಾಗ ಶಂಕರ ರಾಗ ಕಲಾವತಿ, ರಾಗ ಭೈರವಿ ಹಾಡಿದರು. ವಾದಕ ಡಾ. ರವೀಂದ್ರ ಕಾಟೋಟಿ ಹಾರ್ಮೋನಿಯಂ ಮತ್ತು ಪ್ರೊ. ಗೋಪಾಲಕೃಷ್ಣ ಹೆಗಡೆ ಕಲಭಾಗ ತಬಲಾ ಸಾಥ್‌ ನೀಡಿದರು. ಕೌಶಿಕ್ ಐತಾಳ ಹಾಗೂ ಕೀರ್ತನ ಹೊಳ್ಳ ಸಹಗಾಯನ ನೀಡಿದರು.

ಸುಷಿರ ಸಂಗೀತ ಪರಿವಾರದ ಸಂಚಾಲಕ ನಾರಾಯಣ ಹೆಗಡೆ ಕಲ್ಲಾರೆಮನೆ ಹಾಗೂ ಸದಸ್ಯರು ಮತ್ತು ಭುವನೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯಕ್ರಮ ಸಂಘಟಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇವಿನ ಹಣ್ಣಿಗೆ ಭಾರಿ ಬೇಡಿಕೆ
ಕಾರ್ಖಾನೆ ಬಾಧಿತ ಹಳ್ಳಿಗಳಿಗೆ ಸಿಎಂ ಭೇಟಿ ನೀಡಲಿ