ಈಗ ಸದ್ಯಕ್ಕೆ ದರ್ಶನ್ ಭೇಟಿ ಇಲ್ಲ: ನಟ ಚಿಕ್ಕಣ್ಣ

KannadaprabhaNewsNetwork |  
Published : Nov 20, 2026, 02:15 AM IST
ಫೋಟೋವಿವರ- (19ಎಚ್‌ಪಿಟಿ2) ಹೊಸಪೇಟೆ ನಗರದ ಡಾ. ಪುನೀತ್ ರಾಜ್ ಕುಮಾರ್‌ ಅವರ ಪುತ್ಥಳಿಗೆ ಚಲನಚಿತ್ರದ ಹಾಸ್ಯ ನಟ ಹಾಗೂ ನಾಯಕ ನಟ ಚಿಕ್ಕಣ್ಣ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು | Kannada Prabha

ಸಾರಾಂಶ

ನಾನು ನಾಯಕ ನಟನಾಗಿ ಅಭಿನಯಿಸಿರುವ ಲಕ್ಷ್ಮೀಪುತ್ರ ಚಲನಚಿತ್ರ ನ. 27ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ

ಹೊಸಪೇಟೆ: ಯಾವುದೇ ಕಾರಣಕ್ಕೂ ಸದ್ಯಕ್ಕೆ ನಟ ದರ್ಶನ ಅವರನ್ನು ಭೇಟಿ ಮಾಡುವುದಿಲ್ಲ ಮತ್ತು ಅವರ ಕುರಿತು ಏನನ್ನೂ ಮಾತನಾಡುವುದಿಲ್ಲ ಎಂದು ಹಾಸ್ಯ ನಟ ಚಿಕ್ಕಣ್ಣ ಹೇಳಿದರು. ಅವರು ನಾಯಕ ನಟನಾಗಿ ಅಭಿನಯಿಸಿರುವ ಲಕ್ಷ್ಮೀಪುತ್ರ ಚಲನಚಿತ್ರದ ಪ್ರಚಾರಕ್ಕೆ ಗುರುವಾರ ನಗರಕ್ಕೆ ಆಗಮಿಸಿ ಪುನೀತ್‌ ರಾಜಕುಮಾರ ವೃತ್ತದಲ್ಲಿರುವ ಪುನೀತ್‌ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ದರ್ಶನ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ದರ್ಶನ್ ಅವರನ್ನು ಭೇಟಿ ಮಾಡುವುದಿಲ್ಲ ಮತ್ತು ಅವರ ಬಗ್ಗೆ ಏನನ್ನೂ ಮಾತನಾಡುವುದಿಲ್ಲ ಎಂದು ತಿಳಿಸಿದರು.

ನಾನು ನಾಯಕ ನಟನಾಗಿ ಅಭಿನಯಿಸಿರುವ ಲಕ್ಷ್ಮೀಪುತ್ರ ಚಲನಚಿತ್ರ ನ. 27ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡದ ಎಲ್ಲ ಸಿನಿಮಾ ಬಿಡುಗಡೆಯಾಗುವ ಮುನ್ನ ಹೊಸಪೇಟೆಗೆ ಬಂದು ಅಪ್ಪು ಅವರ ಆಶೀರ್ವಾದ ಪಡೆಯುವ ಸಂಪ್ರದಾಯವಿದೆ. ಅದೇ ರೀತಿ ನಾನೂ ಕೂಡ ಅಪ್ಪು ಸರ್ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದರು.

ಪುನೀತ್ ರಾಜ್‌ಕುಮಾರ್ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಮಾನಸಿಕವಾಗಿ ಸದಾ ನಮ್ಮೊಂದಿಗಿದ್ದಾರೆ. ಅವರ ಆಶೀರ್ವಾದ ಯಾವಾಗಲೂ ನಮ್ಮ ಮೇಲಿರುತ್ತದೆ ಎಂದು ಭಾವುಕರಾಗಿ ನುಡಿದರು.

ಮೊದಲ ಬಾರಿಗೆ ನಾನು ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದ್ದು, ಕಾಮಿಡಿ ಜತೆಗೆ ಉತ್ತಮ ಸೆಂಟಿಮೆಂಟ್ ಕೂಡ ಇದೆ. ಹಿರಿಯ ನಟಿ ತಾರಾ ಸೇರಿದಂತೆ ಅನೇಕ ಪ್ರಮುಖ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಟಿ ವಂದಿತಾ, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕಿಚಿಡಿ ವಿಶ್ವನಾಥ, ಜೋಗಿ ತಾಯಪ್ಪ, ಚಿಕ್ಕಣ್ಣ ಆಪ್ತ ಸಹಾಯಕ ಜೀವ ಸೇರಿದಂತೆ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುರಳಿ ಕಡೆಕಾರ್‌ಗೆ ಶಾರದಾಕೃಷ್ಣ ಪ್ರಶಸ್ತಿ - 2027
ಸಾಂಸ್ಕೃತಿಕ ಕಲಾ ವೇದಿಕೆ 13ನೇ ವರ್ಷದ ಕಾರ್ಯಕ್ರಮ