ಕಾಂತಾರ ಚಿತ್ರೀಕರಣ ವೇಳೆ ಯಾವುದೇ ಅವಘಡ ಸಂಭವಿಸಿಲ್ಲ

KannadaprabhaNewsNetwork |  
Published : Jun 16, 2025, 06:12 AM ISTUpdated : Jun 16, 2025, 08:23 AM IST
Kantara

ಸಾರಾಂಶ

ಕಾಂತಾರ ಚಾಪ್ಟರ್ 1 ಚಿತ್ರೀಕರಣ ಸಂದರ್ಭದಲ್ಲಿ ಯಾವುದೇ ಅವಘಡ ನಡೆದಿಲ್ಲ ಎಂದು ಹೊಂಬಾಳೆ ಫಿಲಂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ ಸ್ಪಷ್ಟನೆ ನೀಡಿದ್ದಾರೆ.

  ಶಿವಮೊಗ್ಗ :  ಕಾಂತಾರ ಚಾಪ್ಟರ್  1 ಚಿತ್ರೀಕರಣ ಸಂದರ್ಭದಲ್ಲಿ ಯಾವುದೇ ಅವಘಡ ನಡೆದಿಲ್ಲ ಎಂದು ಹೊಂಬಾಳೆ ಫಿಲಂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಣಿ ಜಲಾಶಯದ ಹಿನ್ನೀರಿನಲ್ಲಿ ಕಾಂತಾರ ಚಾಪ್ಟರ್ 1 ಶೂಟಿಂಗ್ ನಡೆಯುತ್ತಿದೆ. 

ಶೂಟಿಂಗ್‌ಗಾಗಿ ಬ್ಯಾಕ್ ಡ್ರಾಪ್ನಲ್ಲಿ ದೋಣಿಯೊಂದರ ಸೆಟ್ ಹಾಕಲಾಗಿತ್ತು. ಆದರೆ, ಇಲ್ಲಿ ಭಾರೀ ಗಾಳಿ ಮಳೆಗೆ ಆ ಸೆಟ್ ಕೆಳಗೆ ಬಿದ್ದಿದೆ. ಬ್ಯಾಕ್ ಡ್ರಾಪ್ ಕೆಳಗೆ ಬಿದ್ದಾಗ ಆ ಸುತ್ತಮುತ್ತಲು ನಮ್ಮ ಶೂಟಿಂಗ್‌ ನವರು ಯಾರು ಇರಲಿಲ್ಲ. ಇದರಿಂದ ಯಾರಿಗೂ ಯಾವುದೇ ತೊಂದರೆ ಆಗಲಿಲ್ಲ. ಭಾನುವಾರ ಶೂಟಿಂಗ್ ಮುಂದುವರಿಸಿದ್ದೇವೆ. ಶೂಟಿಂಗ್‌ಗಾಗಿ ಎಲ್ಲಾ ಇಲಾಖೆಗಳ ಅನುಮತಿ ಪಡೆದಿದ್ದೇವೆ ಎಂದು ತಿಳಿಸಿದರು.

ಪೊಲೀಸ್ ಇಲಾಖೆ, ಅರಣ್ಯ ಇಲಾಖೆ , ಕೆಪಿಸಿಎಲ್ ಅನುಮತಿಯನ್ನು ಪಡೆಯಲಾಗಿದೆ. ಜೊತೆಗೆ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತಕ್ಕೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ನೀರಿನ ಭಾಗದಲ್ಲಿ ಯಾವುದೇ ರೀತಿಯ ಚಿತ್ರೀಕರಣ ಮಾಡುತ್ತಿಲ್ಲ. ಚಿತ್ರೀಕರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಆದರೂ ಸ್ಪೀಡ್ ಬೋಟ್, 25 ಜನ ಮೀನುಗಾರರು, ಸ್ಕೂಬಾ ಡೈವರ್ಸ್, ಲೈಫ್ ಜಾಕೆಟ್ ಎಲ್ಲವನ್ನು ಇಟ್ಟುಕೊಂಡೆ ಶೂಟಿಂಗ್ ಮಾಡುತಿದ್ದೇವೆ. ನೀರಿನ ಭಾಗದಲ್ಲಿ ಯಾವುದೇ ಚಿತ್ರೀಕರಣ ಇಲ್ಲ ನಾವು ಅಲ್ಲಿ ಶಿಪ್ ಸೆಟ್ ಹಾಕಿದ್ದೆವು. ಶಿಫ್ ಟಾಪಲ್ಲಿ ಆಗಿದ್ದ ಘಟನೆ ಅದು ಅದರಿಂದ ಯಾರಿಗೂ ತೊಂದರೆ ಆಗಿಲ್ಲ ಎಂದು ತಿಳಿಸಿದರು.

ಕ್ಯಾಮರಾ ಹಾನಿ ಮತ್ತು ರಿಷಬ್ ಶೆಟ್ಟಿ ಇತರರಿಗೆ ತೊಂದರೆಯಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಆ ಶಿಪ್‌ನಿಂದ ಸುಮಾರು ದೂರದಲ್ಲಿ ಶೂಟಿಂಗ್ ಮಾಡುತ್ತಿದ್ದೆವು. ಕ್ಯಾಮೆರಾ ನೀರಿನಲ್ಲಿ ಹೋಗಿದಿದ್ದರೆ ನಾವು ಇವತ್ತು ಶೂಟಿಂಗ್ ಮಾಡಲು ಆಗುತ್ತಿರಲಿಲ್ಲ. ಶಿಫ್ ಸೆಟ್ ಇದ್ದ ಜಾಗದಲ್ಲಿ ನಮ್ಮ ಕ್ರಿವ್ ಆಗಲಿ ಜೂನಿಯರ್ಸ್ ಆಗಲಿ ಆರ್ಟಿಸ್ಟ್ ಆಗಲಿ ಯಾರು ಇರಲಿಲ್ಲ.

ಸಕ್ಸಸ್ ಆಗಿ ಶೂಟಿಂಗ್ ಮಾಡುತ್ತಿದ್ದೇವೆ. ಪೊಲೀಸ್ ಇಲಾಖೆಯವರು ಬಂದು ಪರಿಶೀಲನೆ ನಡೆಸಿದ್ದಾರೆ. ಆ ರೀತಿ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

PREV
Read more Articles on

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ