ಕನ್ನಡಪ್ರಭ ವಾರ್ತೆ, ಕಡೂರು
ಪಟ್ಟಣದ ಶಾಸಕರ ಕಚೇರಿಯಲ್ಲಿ ಭಾನುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾ.13ರ ಶುಕ್ರವಾರ ಕಂದಾಯ ಗ್ರಾಮ, ಉಪ ಗ್ರಾಮ ರಚನೆ ಕುರಿತು ತಾಲೂಕು ಪಂಚಾಯ್ತಿಯಲ್ಲಿ ತಹಸೀಲ್ದಾರ್, ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ನೌಕರರ ಸಭೆ ಕರೆದಿದ್ದರು. ತಾವು ಅಧ್ಯಕ್ಷತೆ ವಹಿಸಬೇಕಿತ್ತು ಆದರೆ ಅಧಿವೇಶನದಲ್ಲಿ ಭಾಗವಹಿಸಿದ ಕಾರಣ ನಾನು ಸಭೆಗೆ ಬರಲಿಲ್ಲ. ಆದರೆ 2.45ಕ್ಕೆ ಆರಂಭವಾಗಿ ಸುಧೀರ್ಘ ಸಭೆ ನಡೆದಿದೆ. ನಮ್ಮ ಆಪ್ತ ಸಹಾಯಕ ಮಂಜುನಾಥ್ ಸಭೆ ಮುಗಿದ ಬಳಿಕ 4.50ಕ್ಕೆ ಹೋಗಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಬಂದಿದ್ದ ಫೇಕ್ ಪೋಟೋ ಬಳಸಿಕೊಂಡು ಪತ್ರಿಕೆಗಳಲ್ಲಿ ಪ್ರಚಾರ ಆಗಿದೆ. ಡಿಸ್ ಪ್ಲೇ ಸ್ಕ್ರೀನ್ ನಲ್ಲಿ ಬಂದ ಪೋಟೋ ಬಳಸಿಕೊಂಡು ಕ್ರಿಯೇಟ್ ಮಾಡಿದ ಪೋಟೋ ಹಾಕಿ ವೈರಲ್ ಮಾಡಲಾಗಿದೆ. ಸತ್ಯಾ ಸತ್ಯತೆ ಇದಿದ್ದರೆ ಹಾಕಬಹುದಿತ್ತು. ಆದರೆ ಬಿಜೆಪಿಯವರು ಚೌಳಹಿರಿಯೂರು ರವಿಯಿಂದ ಪತ್ರಿಕಾಗೋಷ್ಠಿ ಮಾಡಿಸಿದ್ದಾರೆ ಎಂದು ಹೇಳಿದರು.ನನ್ನ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಬಿಜೆಪಿಯವರು ಅಪಪ್ರಚಾರ ಮಾಡಿದ್ದು ಇದರಲ್ಲಿ ಯಾವುದೇ ಸತ್ಯವಿಲ್ಲ. ಬಿಜೆಪಿ ಕುತಂತ್ರಗಳಿಗೆ ಕೆ.ಎಸ್. ಆನಂದ್ ಜಗ್ಗುವುದಿಲ್ಲ. ನಾನು ಜನಪರ ಕಾಳಜಿ ಇಟ್ಟುಕೊಂಡು ರಾಜಕೀಯಕ್ಕೆ ಬಂದಿದ್ದು ನನ್ನ ಕುಟುಂಬದ ಯಾರನ್ನು ನಾನು ರಾಜಕಾರಣಕ್ಕೆ ತಂದಿಲ್ಲ. ನನ್ನ ಪಿಎ ಮೀಟಿಂಗ್ ಮಾಡಿದ್ದಾರೆ ಎಂದು ಅಪಪ್ರಚಾರದ ಹುನ್ನಾರ ಎಂಬುದನ್ನು ಜನ ಸಾಮಾನ್ಯರು ತಿಳಿಯಬೇಕು ಎಂದರು.
ವಾಸ್ತವ ಗೊತ್ತಿಲ್ಲದೆ. ಸಣ್ಣ ವಿಚಾರಗಳಿಗೆ ಪ್ರತಿಕ್ರಿಯೆ ನೀಡಿರುವ ಸಿ.ಟಿ.ರವಿ ಮತ್ತು ಭೋಜೇಗೌಡರು ನಿರುದ್ಯೋಗಿ ರಾಜಕಾರಣಿಗಳಾಗಿದ್ದಾರೆ. ಸಿ.ಟಿ. ರವಿ ತಮ್ಮ ಸೋಲಿನ ನೋವಿನಿಂದ ಇನ್ನೂ ಹೊರಬಂದಿಲ್ಲ. ಸತ್ಯಾಸತ್ಯತೆ ತಿಳಿದು ಮಾತನಾಡಲಿ. ಸಿ.ಟಿ ರವಿ ತಮ್ಮ 20 ವರ್ಷದ ರಾಜಕಾರಣದಲ್ಲಿ ಚಿಕ್ಕಮಗಳೂರನ್ನು ಕಡೆಗಣಿಸಿದ್ದಾರೆ ಎಂದು ದೂರಿದ ಆನಂದ್, ನನ್ನ 3 ವರ್ಷದ ಶಾಸಕಗಿರಿಯಲ್ಲಿ ಶಕ್ತಿ ಮೀರಿ ಕೆಲಸ ಮಾಡುತ್ತಿರುವ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
-- ಬಾಕ್ಸ್ ಸುದ್ದಿಗೆ---ಚಿಕ್ಕಮಗಳೂರು ಕ್ಷೇತ್ರ ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿದೆ
ಯುವ ಸಮೂಹದ ಆಶಾಕಿರಣವಾದ ಸ್ವಾಮಿ ವಿವೇಕಾನಂದರ ಪ್ರತಿಮೆ ಎಲ್ಲಿದೆ ತಿಳಿಸಲಿ. ಮನೆಯಲ್ಲಿಟ್ಟಿದ್ದಾರ ಅಥವಾ ಅಡವಿ ಟ್ಟಿದ್ದಾರಾ... ಡಿ.ಸಿ. ಕಚೇರಿ ಕಟ್ಟಲು ಹೋಗಿ ವಾಪಸ್ ಬಂದ ಅವರಿಂದ ನಾನು ರಾಜಕಾರಣದ ಪಾಠ ಕಲಿಯಬೇಕಿಲ್ಲ. ಸಣ್ಣತನದ ಹೇಳಿಕೆ ನೀಡುವುದಾದರೆ ಅವರ ಹಗರಣ ಅನಾಚಾರಗಳನ್ನು ನಾನು ಬಯಲಿಗೆ ತರುತ್ತೇನೆ ಎಂದು ಎಚ್ಚರಿಸಿದರು.ಅವರಿಗೆ ಕನಿಷ್ಠ ಪ್ರಜ್ಞೆ ಇಲ್ಲವೆಂಬುದು ಸ್ಪಷ್ಟವಾಗುತ್ತದೆ. ಕಡೂರು ಬಿಜೆಪಿಯವರಿಗೆ ಆನಂದ್ ಅಭಿವೃದ್ದಿ ಗೊತ್ತಿದ್ದು, ಬಿಜೆಪಿ ಮತ್ತು ಜೆಡಿಎಸ್ ಸಣ್ಣ ವಿಚಾರಗಳಿಂದ ನಿರುದ್ಯೋಗಿ ಗಳಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಇದೇ ಸಂಧರ್ಭದಲ್ಲಿ ಮುಖಂಡರಾದ ಅರುಣ, ಅರೇಹಳ್ಳಿ ಶಿವು, ಧನಂಜಯ ಮತ್ತಿತರರು ಇದ್ದರು.15ಕೆಕೆಡಿಯು2. ಕೆ.ಎಸ್. ಆನಂದ್.