ವಲಸೆ ಬೇಡ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ-ಶರಣಪ್ಪ

KannadaprabhaNewsNetwork |  
Published : Mar 26, 2025, 01:37 AM IST
25ಜಿಡಿಜಿ4 | Kannada Prabha

ಸಾರಾಂಶ

ಏ. 1ರಿಂದ ನರೇಗಾ ಯೋಜನೆಯಡಿಯಲ್ಲಿ ಸಮುದಾಯ ಕಾಮಗಾರಿ ಪ್ರಾರಂಭಿಸಿ ಕೂಲಿಕಾರರಿಗೆ ಕೆಲಸ ಪ್ರಾರಂಭಿಸಲಾಗುತ್ತದೆ. ಎಲ್ಲಾ ಕಾಯಕ ಬಂಧುಗಳು ನಮೂನೆ 6 ತುಂಬಿ ಕೂಲಿಕಾರರನ್ನು ಕೆಲಸಕ್ಕೆ ಕರೆ ತರಬೇಕೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶರಣಪ್ಪ ನರೇಗಲ್ ತಿಳಿಸಿದರು.

ನರೇಗಲ್ಲ: ಏ. 1ರಿಂದ ನರೇಗಾ ಯೋಜನೆಯಡಿಯಲ್ಲಿ ಸಮುದಾಯ ಕಾಮಗಾರಿ ಪ್ರಾರಂಭಿಸಿ ಕೂಲಿಕಾರರಿಗೆ ಕೆಲಸ ಪ್ರಾರಂಭಿಸಲಾಗುತ್ತದೆ. ಎಲ್ಲಾ ಕಾಯಕ ಬಂಧುಗಳು ನಮೂನೆ 6 ತುಂಬಿ ಕೂಲಿಕಾರರನ್ನು ಕೆಲಸಕ್ಕೆ ಕರೆ ತರಬೇಕೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶರಣಪ್ಪ ನರೇಗಲ್ ತಿಳಿಸಿದರು.

ಅವರು ಸಮೀಪದ ಹಾಲಕೆರೆ ಗ್ರಾಮ ಪಂಚಾಯತಿಯಲ್ಲಿ ಕಾಯಕ ಬಂಧುಗಳ (ಮೇಟ್ಸ್) ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಉದ್ಯೋಗ ಖಾತ್ರಿ ಕೆಲಸಕ್ಕೆ ಬರುವ ಕೂಲಿಕಾರರಿಗೆ ದಿನಕ್ಕೆ 349 ರುಪಾಯಿ ಗರಿಷ್ಠ ಕೂಲಿ ಪಾವತಿಸಲಾಗುತ್ತದೆ. ಕಾಯಕ ಬಂಧುಗಳ ಕೂಲಿಕಾರರನ್ನು ಕೆಲಸಕ್ಕೆ ತರೆತಂದು ಎರಡು ಬಾರಿ ಎನ್.ಎಂ.ಎಂ.ಎಸ್ ಹಾಜರಿಯನ್ನು ಕಡ್ಡಾಯವಾಗಿ ಹಾಕಿಸಬೇಕು. ಕೂಲಿಕಾರರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ, ಪಾಸ್ಟೆಂಡ್ ಕಿಟ್, ನೆರಳಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.ಐಇಸಿ ಸಂಯೋಜಕರಾದ ಮಂಜುನಾಥ ಹಳ್ಳದ ಮಾತನಾಡಿ, ಬೇಸಿಗೆ ಕಾಲದಲ್ಲಿ ಕೆಲಸವಿಲ್ಲದೆ ಮನೆಯಲ್ಲಿರುವ ಮತ್ತು ವಲಸೆ ಹೋಗುವವರನ್ನು ತಡೆಗಟ್ಟುವ ಸಲುವಾಗಿ ಸ್ಥಳೀಯವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಏ. 1ರಿಂದ ಕೆಲಸ ಪ್ರಾರಂಭಿಸಲಾಗುತ್ತದೆ. ಕಾಯಕ ಬಂಧುಗಳಾದವರು ಕೂಲಿಕಾರರಿಗೆ ಕೆಲಸ ನೀಡಲು ಇನ್ನೂ ಒಂದು ವಾರ ಬಾಕಿ ಇದ್ದು, ಅಷ್ಟರೊಳಗೆ ಜಾಬ್ ಕಾರ್ಡನ್ನು ಪರಿಶೀಲನೆ ಮಾಡಿ ಎಬಿಪಿಎಸ್, ಎನ್‌ಪಿಸಿ ಲಿಂಕ್ ಮಾಡಿಸಲು ಕಾಯಕ ಬಂಧುಗಳಿಗೆ ಸೂಚಿಸಲಾಯಿತು.ನಮೂನೆ -6ರಲ್ಲಿ ಕೆಲಸದ ಬೇಡಿಕೆ ಸಲ್ಲಿಸುವುದು ಕುರಿತು ಮಾಹಿತಿ ನೀಡಲಾಯಿತು. ಶೇ. 50ರಷ್ಟು ಮಹಿಳೆಯರಿಗೆ ಎನ್ಎಂಆರ್ ಒದಗಿಸುವುದು. ನಂತರ ಕೆಲಸಕ್ಕೆ ಬರುವ ಕೂಲಿಕಾರರಿಗೆ ಅಳತೆ ಪ್ರಮಾಣ ನೀಡಿ ಎನ್ಎಂಎಂಎಸ್ ಆ್ಯಪ್ ಇಲ್ಲದೆ ಯಾವುದೇ ಕಾಮಗಾರಿ ಕೈಗೊಳ್ಳಲು ಅವಕಾಶವಿಲ್ಲ. ಎರಡು ಬಾರಿ ಎನ್ಎಂಎಂಎಸ್ ಆ್ಯಪ್‌ನಲ್ಲಿ ಹಾಜರಿಯನ್ನು ಕಡ್ಡಾಯವಾಗಿ ಹಾಕಿಸಬೇಕು. ನರೇವಾಗಿ ಆಧಾರ್ ಬೆಸ್ ಮೂಲಕ ಫಲಾನುಭವಿಗಳಿಗೆ ಕೂಲಿ ಹಣ ಪಾವತಿಯಾಗುತ್ತದೆ ಎಂದು ಕಾಯಕ ಬಂಧುಗಳಿಗೆ ಮಾಹಿತಿ ನೀಡಲಾಯಿತು. ಈ ವೇಳೆ ಕಾಯಕ ಬಂಧುಗಳಿಗೆ ನಮೂನೆ 6 ನೀಡಿ ತುಂಬಿಕೊಂಡು ಬರಲು ತಿಳಿಸಲಾಯಿತು.ನಿಡಗುಂದಿ ಗ್ರಾಮ ಪಂಚಾಯಿತಿಯಲ್ಲಿ ಕಾಯಕ ಬಂಧುಗಳ ಸಭೆ ನಡೆಸಲಾಯಿತು. ಈ ವೇಳೆ ಪಿಡಿಒ ಅಮರೇಶ ಮೂಲಿಮನಿ, ಕಾರ್ಯದರ್ಶಿ ಶರಣಪ್ಪ ಮೇಟಿ, ತಾಂತ್ರಿಕ ಸಹಾಯಕ ಪ್ರವೀಣ ಡಿ., ಟಿಎಎ ಮುತ್ತು ಕಟ್ಟಿ, ಬಿಎಪ್ಟಿ ಚಂದ್ರಕಾಂತ ಲಮಾಣಿ, ಡಿಇಒ ದೀಪಾ, ಜಿಕೆಂಎ ಅನಿತಾ ಗಡಾದ ಸೇರಿದಂತೆ ಪಂಚಾಯತಿ ಹಾಗೂ ನರೇಗಾ ಸಿಬ್ಬಂದಿ, ಕಾಯಕ ಬಂಧುಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌