೩೭೧ಜೆ ಪ್ರಮಾಣ ಪತ್ರ ಪಡೆಯಲು ಅಲೆಯಬೇಕಾಗಿಲ್ಲ: ಉಮೇಶಗೌಡ ಮಾಲಿಪಾಟೀಲ

KannadaprabhaNewsNetwork |  
Published : Nov 18, 2024, 12:05 AM IST
ಹನುಮಸಾಗರದ ಗ್ರಾಮದ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ೩೭೧ಜೆ ಪ್ರಮಾಣಪತ್ರ ಅಭಿಯಾನ ನಡೆಯಿತು. ಸಾಹೇಬಗೌಡ ಬಿರಾದಾರ, ಲಕಪತಿ ರಾಠೋಡ, ಶರಣಪ್ಪ ಬಂಜತ್ರಿ ಇತರರಿದ್ದರು. | Kannada Prabha

ಸಾರಾಂಶ

ಹೈದರಾಬಾದ ಕರ್ನಾಟಕದ ೩೭೧ಜೆ ಪ್ರಮಾಣ ಪತ್ರ ಪಡೆಯಲು ಇನ್ನು ಮುಂದೆ ಅಲೆಯಬೇಕಾದ ಅವಶ್ಯಕತೆ ಇರುವುದಿಲ್ಲ.

ಕನ್ನಡಪ್ರಭ ವಾರ್ತೆ ಹನುಮಸಾಗರ

ಹೈದರಾಬಾದ ಕರ್ನಾಟಕದ ೩೭೧ಜೆ ಪ್ರಮಾಣ ಪತ್ರ ಪಡೆಯಲು ಇನ್ನು ಮುಂದೆ ಅಲೆಯಬೇಕಾದ ಅವಶ್ಯಕತೆ ಇರುವುದಿಲ್ಲ ಎಂದು ಕಂದಾಯ ನಿರೀಕ್ಷಕ ಉಮೇಶಗೌಡ ಮಾಲಿಪಾಟೀಲ ಹೇಳಿದರು.

ಗ್ರಾಮದ ಸರ್ಕಾರಿ ಕಾಲೇಜಿನಲ್ಲಿ ಗುರುವಾರ ನಡೆದ ವಿದ್ಯಾರ್ಥಿಗಳಿಗೆ ೩೭೧ಜೆ ಪ್ರಮಾಣಪತ್ರ ಅಭಿಯಾನದಲ್ಲಿ ಮಾತನಾಡಿದರು.

ಒಂದನೆ ತರಗತಿಯಿಂದ ಹತ್ತನೆ ತರಗತಿಯವರೆಗೆ ಕಲಿತ ಶಾಲಾ ದಾಖಲಾತಿ, ನಿಮ್ಮ ಆಧಾರ್‌ ಕಾರ್ಡ್‌, ತಂದೆಯ ಆಧಾರ್‌ ಕಾರ್ಡ್‌, ೧೦ ವರ್ಷ ಹಿಂದಿನ ಮನೆಯ ಉತಾರ, ಹೊಲ ಇದ್ದರೆ ಹೊಲದ ಉತಾರ ಹಚ್ಚಿ ನಿಮ್ಮ ಶಾಲೆಯ ಪ್ರಾಶುಪಾಲರಿಗೆ ಒಪ್ಪಿಸಬೇಕು. ಕಂದಾಯ ಇಲಾಖೆಯಿಂದ ಅದನ್ನು ಪರಿಶೀಲಿಸಿ ತೆಗೆದುಕೊಂಡು ಹೋಗುತ್ತೇವೆ. ಇದರ‌ ಸರ್ಕಾರಿ ವೆಚ್ಚ ₹೪೦ ಕೊಡಬೇಕು. ಕೆಲವೇ ದಿನಗಳಲ್ಲಿ ನಿಮ್ಮ ೩೭೧ ಜೆ ಪ್ರಮಾಣ ಪತ್ರವನ್ನು ನಿಮ್ಮ ಶಾಲೆಗೆ ತಂದು ವಿತರಿಸಲಾಗುವುದು ಎಂದರು.

ರೈತ ಸಂಘದ ಕರ್ನಾಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಜೀರಸಾಬ ಮೂಲಿಮನಿ ಮಾತನಾಡಿ, ಹೈದರಾಬಾದ ೩೭೧ ಜೆ ಪ್ರಮಾಣಪತ್ರ ತೆಗೆದುಕೊಳ್ಳಲು ಕಚೇರಿ ಅಲೆದಾಟ ತಪ್ಪಿಸಲು ಕಂದಾಯ ಇಲಾಖೆಯವರು ಈ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. ಇದೇ ಸಂದರ್ಭ ರೈತ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಅನುಬಂಧ ಸಿ ಪ್ರಮಾಣ ಪತ್ರ ವಿತರಿಸಲಾಯಿತು.

ಆರ್‌ಐ ಅಭಿಶೇಕ ಕರಡಿ, ಪ್ರಾಚಾರ್ಯ ಸಾಹೇಬಗೌಡ ಬಿರಾದಾರ, ಲಕಪತಿ ರಾಠೋಡ, ಶರಣಪ್ಪ ಬಂಜತ್ರಿ, ಚನ್ನಬಸಪ್ಪ ಬಂಡೆಪ್ಪನವರ, ವನಜಾ, ಶರಣಪ್ಪ ಗೊಡೆಕಾರ, ಉಮೆಶ ದೊಟಿಹಾಳ, ಶರಣಪ್ಪ ಬಾಚಲಾಪೂರ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ