ಸಂವಿಧಾನ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ - ಪ್ರೊ. ರುದ್ರೇಶ

KannadaprabhaNewsNetwork |  
Published : Nov 28, 2024, 12:31 AM IST
ಫೋಟೊ ಶೀರ್ಷಿಕೆ: 26ಆರ್‌ಎನ್‌ಆರ್8ರಾಣಿಬೆನ್ನೂರಿನ ಮಾರುತಿ ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಕಾನೂನು ಪ್ರಾದ್ಯಾಪಕ ರುದ್ರೇಶ ಬಿ.ಆರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಬದಲಾವಣೆ ಪ್ರಯತ್ನದ ಹೇಳಿಕೆ ನೀಡಿದವರಿಗೆ ಸುಪ್ರೀಂ ಕೋರ್ಟ್ ತಕ್ಕ ಪಾಠ ಕಲಿಸಿದೆ ಎಂದು ಕಾನೂನು ಪ್ರಾಧ್ಯಾಪಕ ರುದ್ರೇಶ ಬಿ.ಆರ್. ಹೇಳಿದರು.

ರಾಣಿಬೆನ್ನೂರು: ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಬದಲಾವಣೆ ಪ್ರಯತ್ನದ ಹೇಳಿಕೆ ನೀಡಿದವರಿಗೆ ಸುಪ್ರೀಂ ಕೋರ್ಟ್ ತಕ್ಕ ಪಾಠ ಕಲಿಸಿದೆ ಎಂದು ಕಾನೂನು ಪ್ರಾಧ್ಯಾಪಕ ರುದ್ರೇಶ ಬಿ.ಆರ್. ಹೇಳಿದರು. ಇಲ್ಲಿನ ಮಾರುತಿ ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಸ್‌ಎಫ್) ಹಾಗೂ ಮಾತೋಶ್ರೀ ಮಹಾದೇವಕ್ಕ ಮಂಗಳ ವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆ ವತಿಯಿಂದ ಆಯೋಜಿಸಿದ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಲ್ಲಿಯ ಮಾರುತಿ ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಸ್‌ಎಫ್) ಹಾಗೂ ಮಾತೋಶ್ರೀ ಮಹಾದೇವಕ್ಕ ಮಂಗಳ ವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆ ವತಿಯಿಂದ ಆಯೋಜಿಸಿದ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಸರ್ಕಾರ ವಿದೇಶಿ ಆಡಳಿತಕ್ಕೆ ಒಳಪಟ್ಟಿಲ್ಲ. ನಾವು ಸ್ವತಂತ್ರರು, ಸಮಾಜವಾದಿ ಎಂದರೆ ದೇಶದ ಸಂಪನ್ಮೂಲ ಎಲ್ಲರಿಗೂ ವಿತರಣೆಯಾಗಲಿ ಎಂಬ ಚಿಂತನೆಯಿಂದ ರಷ್ಯಾದ ಸಮಾಜವಾದಿ ಸಿದ್ಧಾಂತವನ್ನು ಅಳವಡಿಸಿಕೊಳ್ಳಲಾಗಿದೆ. ನಮ್ಮ ಸರ್ಕಾರಗಳು ಯಾವುದೇ ಧರ್ಮದ ಹೆಸರಿನಲ್ಲಿ ಆಡಳಿತ ಮಾಡಬಾರದು. ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವುದು ಧರ್ಮ ನಿರಪೇಕ್ಷ ಎಂದರ್ಥ ಎಂದರು. ಅಂಬೇಡ್ಕರ್ ಹೆಸರು ಬಳಕೆ ಮಾಡುವ ನಾವು ಅವರ ವ್ಯಕ್ತಿತ್ವ ಗೊತ್ತಿಲ್ಲ. ಪ್ರಪಂಚದ ಅತ್ಯಂತ ಬುದ್ಧಿವಂತ ವ್ಯಕ್ತಿ ಬಹುತೇಕ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಎಲ್ಲಾ ಸಂವಿಧಾನಗಳ ವಿಮರ್ಶೆ ಮಾಡುವ ಏಕೈಕ ವ್ಯಕ್ತಿ ಅಂಬೇಡ್ಕರ್. ಹಾಗಾಗಿ ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾದರು ಎಂದರು.ಉಪನ್ಯಾಸಕ ಚಂದು ನಾಯಕ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿದರು. ಪ್ರಾ. ಎಚ್.ಎಮ್. ದೊಡ್ಡಬಿಲ್ಲ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಬಸವರಾಜ ಸಾವಕ್ಕನವರ, ಮಲ್ಲೇಶಪ್ಪ ಮದ್ಲೇರ್, ಉಪನ್ಯಾಸಕರಾದ ಗಿರಿಜಾ ದೇವಿ ಮುಳಗುಂದ, ಮಂಜುನಾಥ ಬಾರ್ಕಿ, ರವಿಕುಮಾರ ಲಮಾಣಿ, ಎಚ್. ಎಸ್. ಮುಲ್ಲಾ, ರಾಜಶೇಖರ, ಕಾರ್ಯದರ್ಶಿ ಶೃತಿ ಆರ್.ಎಂ., ಉಪಾಧ್ಯಕ್ಷ ಮಹೇಶ ಮರೋಳ, ಗಜೇಂದ್ರ ಆರೇರ, ಕಾಲೇಜು ಘಟಕ ಅಧ್ಯಕ್ಷ ನಾಗರಾಜ ಬಾಗಲದವರ ಮತ್ತಿತರರಿದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ