ಕನ್ನಡಪ್ರಭ ವಾರ್ತೆ ಶಿರಸಿ
ತಾಲೂಕಿನ ದೇವನಳ್ಳಿ ಮಂಡಳದ ರಾಗಿಬಯಲಿನಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನ ಉದ್ಘಾಟಿಸಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸತ್ಯದ ಕುರಿತು ಎಚ್ಚರಿಕೆ ಅಗತ್ಯ. ಇಲ್ಲವಾದರೆ ವಿಕೃತಿಗಳು ಉಂಟಾಗುತ್ತವೆ. ಧರ್ಮದ ಬಗ್ಗೆ ಜಾಗೃತಿ ಮೂಡದಂತೆ ಕಪ್ಪು ಛಾಯೆ ಮೂಡಿಸಲು ಕೆಲವರು ಪ್ರಯತ್ನಿಸುತ್ತಾರೆ. ಆದ್ದರಿಂದ ಸದಾ ಎಚ್ಚರಿಕೆಯಿಂದಿರಬೇಕು ಎಂದು ಹೇಳಿದರು.ಮುಂಜಾನೆ ಭೂತಾಯಿಗೆ ನಮಸ್ಕರಿಸಬೇಕು. ನದಿಗಳ ಸ್ಮರಣೆ ಮಾಡಬೇಕು. ಅಡುಗೆ ಮಾಡುವಾಗ ದೇವರ ಸ್ಮರಣೆ ಮಾಡಿದರೆ ಆಹಾರವೂ ರುಚಿಯಾಗಿರುತ್ತದೆ. ಮಕ್ಕಳು ಹಿರಿಯರಿಗೆ ನಮಸ್ಕಾರ ಮಾಡುವ ಅಭ್ಯಾಸ ಬೆಳೆಸಬೇಕು. ಸಂಜೆ ವೇಳೆ ದೇವರ ಸ್ಮರಣೆಯೊಂದಿಗೆ ಮನೋಭಾವನೆಯಿಂದ ಆಚರಣೆ ಮಾಡಿದರೆ ಆ ಮನೆ ಧರ್ಮಾಚರಣೆಯ ಕೇಂದ್ರವಾಗುತ್ತದೆ. ಮಕ್ಕಳಲ್ಲಿ ಧರ್ಮಬದ್ಧತೆ ಬೆಳೆದಾಗ ಅವರು ಧರ್ಮಿಷ್ಠರಾಗುತ್ತಾರೆ. ದೇಶದಲ್ಲಿ ಧರ್ಮ ಬಲಿಷ್ಠವಾಗಬೇಕಾದರೆ ಹಳ್ಳಿ-ಗ್ರಾಮಗಳಲ್ಲಿ ಧರ್ಮ ಬಲಿಷ್ಠವಾಗಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿರಸಿ ವಿಭಾಗದ ಪ್ರಚಾರಕ ಗಣೇಶ ತೇಕ್ಕಟ್ಟೆ ದಿಕ್ಸೂಚಿ ಮಾತನಾಡಿ, ಹಿಂದೂ ಸಮಾಜ ಸಂಘಟಿತವಾದಾಗ ಜಗತ್ತಿಗೆ ಬೆಳಕು ನೀಡಲು ಸಾಧ್ಯ. ಹಿಂದೂಗಳು ಪುಣ್ಯವಂತರು; ಆದರೆ ಮೈಮರೆಯಬಾರದು. ನಾವು ಎಲ್ಲರೂ ಭಾರತ ಮಾತೆಯ ಮಕ್ಕಳಾಗಿ ಒಟ್ಟಾಗಿ ಬದುಕಿದರೆ ಸಾಧನೆ ಸಾಧ್ಯವಾಗುತ್ತದೆ ಮತ್ತು ದೇಶಕ್ಕೆ ಒಳ್ಳೆಯದನ್ನು ಮಾಡಬಹುದು. ಹಿಂದೂ ಧರ್ಮ ಸಂಸ್ಕಾರಯುತ ಸಮಾಜವಾಗಿ ಬೆಳೆಯಬೇಕಿದೆ ಎಂದರು.ವಾಗ್ಮಿ ವೇದಮೂರ್ತಿ ಅನಂತಮೂರ್ತಿ ಭಟ್ಟ ಯಲುಗಾರ ಮಾತನಾಡಿ, ನಾವು ನಮ್ಮನ್ನು ತಿದ್ದಿಕೊಳ್ಳಬೇಕು. ಭಾರತೀಯ ಪರಂಪರೆ ಮತ್ತು ಆಚರಣೆಗಳನ್ನು ಉಳಿಸೋಣ ಎಂದರು.
ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿದರು.ದೇವನಳ್ಳಿ ಗ್ರಾಪಂ ಸದಸ್ಯೆ ಪಾರ್ವತಿ ಚನ್ನಯ್ಯ, ಕೃಷಿಕ ಟೀಕೂ ಮರಾಠಿ, ರಾಮ ಗೌಡ ಕುಳಿಗದ್ದೆ, ಸಂಚಾಲನಾ ಸಮಿತಿ ಅಧ್ಯಕ್ಷ ಗಿರೀಶ ಭಟ್ಟ ಬೆಣಗಾಂವ, ದಿನೇಶ ನಾಯ್ಕ ಮತ್ತಿತರರಿದ್ದರು.
ವಿವಿಧ ಕ್ಷೇತ್ರಗಳ ಸಾಧಕರಾದ ಕಿರಣ ಮರಾಠಿ, ಶಂಭು ಹೆಗಡೆ, ತಿಮ್ಮ ಬಡಗಿ, ಹಿಲ್ಲು ಮರಾಠಿ, ಗೌರಿ ಗೌಡ, ಮಾಬ್ಲೇಶ್ವರ ಹೆಗಡೆ, ಮಾದೇವಿ ಗೌಡ, ಲಕ್ಷಮ್ಮಣ ಮರಾಠಿ, ಭಾಗಿ ಸಿದ್ದಿ, ಲಕ್ಷ್ಮಿ ಮರಾಠಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಶುಭಾ ಪಾಟೀಲ ವೈಯಕ್ತಿಕ ಗೀತೆ ಹಾಡಿದರು. ರಾಜೇಂದ್ರ ದಿವೇಕರ ಹಾಗೂ ರಕ್ಷಾ ದಿವೇಕರ ಪಲ ಸಮರ್ಪಿಸಿದರು. ಶಿಕ್ಷಕ ಶ್ರೀನಿವಾಸ ಭಾಗವತ್ ನಿರೂಪಿಸಿದರು. ವಿದ್ಯಾರ್ಥಿನಿ ಅರ್ಪಿತಾ ಮರಾಠಿ ಪ್ರಾಸ್ತಾವಿಕ ಮಾತನಾಡಿದರು. ದೇವನಳ್ಳಿ ಗ್ರಾಪಂ ಅಧ್ಯಕ್ಷ ನಾಗರಾಜ ಮರಾಠಿ ಸ್ವಾಗತಿಸಿದರು.
ಸಮ್ಮೇಳನದ ನಿರ್ಣಯಗಳನ್ನು ವಿಶ್ವನಾಥ ಗೌಡ ವಾಚಿಸಿದರು. ನಿತ್ಯಾನಂದ ಭಟ್ಟ ಮತ್ತಿಘಟ್ಟ ವಂದೇ ಮಾತರಂ ಗೀತೆ ಹಾಡಿದರು. ಸಭಾ ಕಾರ್ಯಕ್ರಮಕ್ಕೆ ಶ್ರೀಗಳು ಹಾಗೂ ಮಾತೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ದೇವನಳ್ಳಿಯಿಂದ ರಾಗಿಬಯಲಿನವರೆಗೆ ನಡೆದ ಶೋಭಾಯಾತ್ರೆ ಗಮನಸೆಳೆಯಿತು.