ಸಾಮಾಜಿಕ ಮಾಧ್ಯಮಗಳು ಕೆಲವರಿಗೆ ಸಂತೋಷ ನೀಡುವ ಫ್ಲಾಟ್‌ಪಾರಂ ಆದರೆ ಇನ್ನೂ ಬದುಕು ರೂಪಿಸಿದ ತಾಣಗಳು
ದಿನನಿತ್ಯ ನಾವು ಬದುಕುವ ಸಮಾಜದಲ್ಲಿ ಅನೇಕ ಘಟನೆಗಳು ಜರುಗುತ್ತವೆ. ಸಮಯವೆಂಬುದು ಯಾವಾಗಲು ಮುಂದೆ ಸಾಗುತ್ತಲೆ ಇರುತ್ತದೆ. ಸಮಯವನ್ನು ನಿಲ್ಲಿಸುವ ಶಕ್ತಿ ಇಲ್ಲಿ ಯಾರಿಗೂ ಇಲ್ಲ, ಆದರೆ ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದು ಕೆಲವರಿಗೆ ಮಾತ್ರ ಗೊತ್ತು ಅವರು ಯಾವಾಗಲೂ ಸಮಯದ ಜೊತೆಗೆ ತಮ್ಮ ಜೀವನದಲ್ಲಿ ಮುಂದೆ ಮುಂದೆ ಸಾಗುತ್ತಲೇ ಇರುತ್ತಾರೆ. ಈ ಪ್ರಪಂಚದಲ್ಲಿ ಎಲ್ಲರಿಗೂ ಇರುವುದು ದಿನಕ್ಕೆ 24 ಗಂಟೆಗಳ ಕಾಲ ಸಮಯವಿದೆ. ಆದರೆ ಈ ಸಮಯವನ್ನು ಯಾವುದರ ಮೇಲೆ ಹೇಗೆ ವಿನಿಯೋಗ ಮಾಡುತ್ತೇವೆ ಎಂಬುದರ ಮೇಲೆ ಅವರವರ ಜೀವನ ಶೈಲಿ ಮತ್ತು ಬದುಕು ಸಾಗುತ್ತಿರುತ್ತದೆ.
ಬದಲಾದ ಜಗತ್ತಿನಲ್ಲಿ ಇಂದು ಅನೇಕರು ಇನ್‌ಸ್ಟಾಗ್ರಾಮ್, ವಾಟ್ಸಾಪ್, ಫೇಸ್ಬುಕ್, ಟ್ವಿಟರ್ ಹೀಗೆ ಇನ್ನೀತರ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುತ್ತಾರೆ. ಇವುಗಳು ತಕ್ಕಮಟ್ಟಿಗೆ ಖುಷಿ ನೀಡಬಹುದೆ ವಿನಾಃ ಇವುಗಳಿಂದ ಬದುಕು ಬದಲಾಗದು. ಈ ಎಲ್ಲ ಸಾಮಾಜಿಕ ಮಾಧ್ಯಮಗಳನ್ನು ಆವಿಷ್ಕಾರ ಮಾಡಿದ ವ್ಯಕ್ತಿಗಳು ಹಾಗೂ ಕಂಪನಿಗಳು ಇಂದು ಪ್ರಪಂಚದ ಅತೀ ಶ್ರೀಮಂತರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಆದರೆ ಅವರು ಯಾರೂ ಕೂಡ ಇವುಗಳಲ್ಲಿ ಸಮಯವನ್ನು ಕಳೆಯುವುದಿಲ್ಲ, ಏಕೆಂದರೆ ಅವರ ಉದ್ದೇಶವೆ ಬೇರೆಯಾಗಿರುತ್ತದೆ. ಜನರನ್ನು ಇನ್ನೂ ಹೇಗೆ ತಮ್ಮತ್ತ ಸೇಳೆಯಬೇಕೆಂದು ಹೊಸ ಹೋಸ ಆವಿಷ್ಕಾರಗಳನ್ನು ಹುಡುಕುತ್ತಲೆ ಇರುತ್ತಾರೆ. ಸಾಮಾಜಿಕ ಮಾಧ್ಯಮ ಸಂಪೂರ್ಣವಾಗಿ ಕೆಟ್ಟದ್ದು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇವುಗಳಿಂದ ಅನೇಕರು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಅನೇಕರು ಮೊದಲು ರೀಲ್ಸ್ ಮಾಡುತ್ತಿದ್ದವರು, ಇಂದು ಸಿನಿಮಾ, ಸಿರಿಯಲ್‌ಗಳಲ್ಲಿ ನಟನೆ ಮಾಡುವುದರ ಮೂಲಕ ಅದೇ ವೃತ್ತಿ ಜೀವನವನ್ನಾಗಿ ಮಾಡಿಕೊಂಡಿದ್ದಾರೆ. ಇಲ್ಲಿ ಎರಡು ರೀತಿಯ ವ್ಯಕ್ತಿಗಳನ್ನು ನೋಡಬಹದು. ಕೆಲವರು ಸಾಮಾಜಿಕ ಮಾದ್ಯಮಗಳಲ್ಲಿ ರೀಲ್ಸ್, ವೀಡಿಯೊಗಳನ್ನು ಸ್ಕ್ರೋಲ್ ಮಾಡುತ್ತ ಸಮಯ ವ್ಯರ್ಥ ಮಾಡುತ್ತಿದ್ದರೆ, ಇನ್ನೂ ಕೆಲವರು ಅದೇ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮಲ್ಲಿನ ಕಲೆಯನ್ನು ಪ್ರದರ್ಶನ ಮಾಡುವ ಪ್ರಸಿದ್ಧಿ ಪಡೆಯುತ್ತಿದ್ದಾರೆ. ಇಲ್ಲಿ ಸಾಮಾಜಿಕ ಮಾಧ್ಯಮಗಳು ಕೆಲವರಿಗೆ ಸಂತೋಷ ನೀಡುವ ಫ್ಲಾಟ್‌ಪಾರಂ ಆದರೆ ಇನ್ನೂ ಬದುಕು ರೂಪಿಸಿದ ತಾಣಗಳು ಎನ್ನಬಹದು.
ಇಲ್ಲಿ ಅರ್ಥಮಾಡಿಕೊಳ್ಳಬೇಕಾಗಿರುವುದು ಏನೆಂದರೆ ನಮ್ಮ ಬದುಕು ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇರುತ್ತದೆ ಆದರೆ ನಾವು ಅದನ್ನು ಗಮನಿಸದೆ ಇನ್ನೂ ಬೇರೆ ಏನೋ ಸಾಧನೆ ಮಾಡಬೇಕೆಂದು ಬೇರೆ ಕಡೆ ಹುಡುಕುತ್ತೇವೆ.....
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.