ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಸಂವಿಧಾನ ಯಾರಿಗೂ ಸೀಮಿತವಲ್ಲ
ಅಂಬೇಡ್ಕರ್ ದಲಿತರಿಗಾಗಿ ಸಂವಿಧಾನ ರಚಿಸಿದ್ದಾರೆಂಬ ತಪ್ಪು ಕಲ್ಪನೆ ಮೂಡಿದೆ. ಇದನ್ನು ಹೋಗಲಾಡಿಸಬೇಕು. ಸಮಾಜದಲ್ಲಿನ ಎಲ್ಲಾ ಶೋಷಿತ ಸಮಾಜದವರು ಎಲ್ಲಾ ರಂಗದಲ್ಲಿಯೂ ಮುಂಚೂಣಿಯಲ್ಲಿರಬೇಕೆಂಬ ಉದ್ದೇಶದಿಂದ ಇಡೀ ವಿಶ್ವವೇ ಮೆಚ್ಚುವಂತ ಸಂವಿಧಾನ ರಚಿಸಿದರೆ ಅದನ್ನು ದಲಿತರಿಗೆ ಮಾತ್ರ ಸೀಮಿತ ಎನ್ನುವುದು ತಪ್ಪು ಎಂದರು.ಈಗಲೂ ಗ್ರಾಮಗಳಲ್ಲಿ ಅಂಬೇಡ್ಕರ್ ಎಂದರೆ ಅವರು ಎಸ್‌ಸಿ ಅಥವಾ ದಲಿತರಿಗೆ ಸೀಮಿತ ಎನ್ನುವ ಭಾವನೆ ಇದೆ, ಅಂಬೇಡ್ಕರ್ ರವರ ಬಗ್ಗೆ ಅರಿತು ಮಾತನಾಡಬೇಕು ಹಾಗೂ ಅಂಬೇಡ್ಕರ್ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಪಾಲಿಸಬೇಕು, ಆದರೆ ಯಾರೂ ಪಾಲಿಸುತ್ತಿಲ್ಲ ಎಂದು ಅವರು ವಿಷಾದಿಸಿದರು.ಕಾಲೆಳೆಯುವುದನ್ನು ಬಿಡಿ:
ಅಂಬೇಡ್ಕರ್ ಅವರನ್ನು ಬರೀ ಭಾಷಣಗಳಿಗೆ ಸೀಮಿತಗೊಳಿಸಲಾಗಿದೆ. ಅಂಬೇಡ್ಕರ್ ಸಿದ್ದಾಂತ ಅನುಸರಿಸಿದರೆ ಸಮಾಜದಲ್ಲಿನ ಅನೇಕ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ದಲಿತರಿಗೆ ಎಷ್ಟೇ ಸೌಲಭ್ಯಗಳನ್ನು ನೀಡಿದರೂ ಅಸೂಯೆ ಕಾಲೆಳೆಯುವ ಸಂಸ್ಕೃತಿಯಿಂದ ಮುಂದೆ ಬರಲು ಸಾಧ್ಯವಾಗುತ್ತಿಲ್ಲ, ಮೊದಲು ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕೆಂದು ಸಲಹೆ ನೀಡಿದರು.ದೊಡ್ಡವಲಗಮಾದಿ ಗ್ರಾಪಂ ಅಭಿವೃದ್ದಿಗೆ ತಾವು ಶ್ರಮಿಸುತ್ತಿದ್ದು, ಆದರೆ ಕೆಲವರು ಪಂಚಾಯ್ತಿ ಸದಸ್ಯರಾಗುತ್ತಿದ್ದಂತೆ ಸ್ವಾರ್ಥಕ್ಕಾಗಿ ಗ್ರಾಪಂ ದುರ್ಬಳಕೆ ಮಾಡಿಕೊಳ್ಳುವರು, ಸದಸ್ಯರಾದರೆ ಅವರಿಗೆ ಅಹಂ ಬರುತ್ತದೆ, ಇಂತಹ ಮನಸ್ಥಿತಿ ಇದ್ದರೆ ಮುಂದೆ ಬರಲು ಸಾಧ್ಯವಿಲ್ಲ. ಅಹಂ ಬಿಟ್ಟು ಮತ ನೀಡಿದ ಜನರಿಗೆ ಅನುಕೂಲ ಕಲ್ಪಿಸುವ ಕೆಲಸ ಮಾಡಬೇಕು, ಅದು ಬಿಟ್ಟು ಮೆರೆಯಬಾರದೆಂದು ಕೆಲವು ಸದಸ್ಯರ ಹೆಸರು ಹೇಳದರೆ ಟೀಕಿಸಿದರು.ಸಮಾರಂಭದಲ್ಲಿ ನಗರ ಯೋಜನಾ ಪ್ರಾಥಿಕಾರದ ಅಧ್ಯಕ್ಷ ಆರ್.ಮುನಿರಾಜು,ಅಕ್ಕ ಸಂಸ್ಥೆಯ ಅಧ್ಯಕ್ಷ ಡಾ.ಶಿವಕುಮಾರ್, ಪುರಸಭೆ ಅಧ್ಯಕ್ಷ ಗೋವಿಂದ, ದಲಿತ ಸಮಾಜಸೇನೆ ಅಧ್ಯಕ್ಷ ಸೂಲಿಕುಂಟೆ ಆನಂದ್, ಗ್ರಾಪಂ ಸದಸ್ಯ ಚೌಡಪ್ಪ,ಮುನಿಸ್ವಾಮಿ,ಸಿ.ಜೆ.ನಾಗರಾಜ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಅ.ನಾ.ಹರೀಶ್, ಸಮಾಜ ಕಲ್ಯಾಣಾಧಿಕಾರಿ ಶಿವಕುಮಾರಿ, ರಾಜಕುಮಾರ್ ಇತರರು ಇದ್ದರು.