ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜನಗಣತಿ 2027ರ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಎರಡು ಹಂತದಲ್ಲಿ ಜನಗಣತಿ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಮೊದಲ ಹಂತ ಏ.1 ರಿಂದ ಜನಗಣತಿ ಪ್ರಕ್ರಿಯೆ ಆರಂಭವಾಗಲಿದೆ. ಎರಡನೇ ಹಂತವು 2027ರ ಫೆಬ್ರವರಿಯಲ್ಲಿ ನಡೆಯಲಿದೆ. ಏಪ್ರಿಲ್ 1 ರಿಂದ 15ರ ವರೆಗೆ ಸ್ವಯಂ ಗಣತಿ ಪ್ರಕ್ರಿಯೆ ನಡೆಯಲಿದೆ. ಏ.16ರಿಂದ ಮೇ 15ರವರೆಗೆ ಮನೆ ಪಟ್ಟಿ ಸಿದ್ಧಪಡಿಸಲಾಗುವುದು. ಮೊದಲ ಹಂತದ ಪ್ರಕ್ರಿಯೆ ಏಪ್ರಿಲ್‌ನಿಂದ ಸೆಪ್ಟಂಬರ್ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಜನಗಣತಿಯು ದೇಶದ ಜನಸಂಖ್ಯೆಯ ಗಣತಿಯ ಜತೆಗೆ ದೇಶದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳು ಮತ್ತು ಸಾಂಸ್ಕೃತಿಕ ವೈವಿಧತೆಯನ್ನು ದಾಖಲಿಸುವ ವೈಜ್ಞಾನಿಕ ಪ್ರಕ್ರಿಯೆಯಾಗಿದ್ದು, ಭಾರತದ ಮೊದಲ ಡಿಜಿಟಲ್ ಜನಗಣತಿ ನಡೆಸಲಾಗುತ್ತಿದೆ ಎಂದು ವಿವರಿಸಿದರು.2500 ಮಂದಿ ಅಧಿಕಾರಿ ಸಿಬ್ಬಂದಿ ನಿಯೋಜನೆ
ಸ್ವಯಂ ಗಣತಿ ಹೇಗೆ?
ಉಳಿದಂತೆ ಯಾವುದೇ ಗಣತಿದಾರರು ಫೋನ್, ಸಾಮಾಜಿಕ ಜಾಲತಾಣ ಸೇರಿದಂತೆ ಇತರೆ ಮಾರ್ಗದಲ್ಲಿ ಸಾರ್ವಜನಿಕರನ್ನು ಸಂಪರ್ಕಿಸುವುದಕ್ಕೆ ಅವಕಾಶ ಇರುವುದಿಲ್ಲ. ಜತೆಗೆ, ಒಟಿಪಿ ಸೇರಿದಂತೆ ಯಾವುದೇ ದಾಖಲೆ ಕೇಳುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವುದರೊಂದಿಗೆ, ಮನೆ ಬಾಗಿಲಿಗೆ ಬರುವ ಸರ್ಕಾರ ನಿಯೋಜಿಸಿದ ಗಣತಿದಾರರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಹಿಂದೆ ಜನಗಣತಿ ಸಮಯದಲ್ಲಿ ಪೇಪರ್‌ದಲ್ಲಿ ಮಾಹಿತಿ ಸಂಗ್ರಹಿಸಿ ನಂತರ ಡೇಟಾ ಎಂಟ್ರಿ ಮಾಡುವ ಕಾರ್ಯ ಆಗುತ್ತಿತ್ತು. ಈ ಬಾರಿ ಮೊಬೈಲ್ ಆ್ಯಪ್ ಸಿದ್ದಪಡಿಸಲಾಗಿದ್ದು, ದಾಖಲಿಸುವ ಮಾಹಿತಿ ನೇರವಾಗಿ ದಾಖಲಾಗಲಿದೆ ಎಂದು ಮಾಹಿತಿ ನೀಡಿದರು.
34 ಪ್ರಶ್ನಾವಳಿ ಹೇಗಿದೆ?
ಅಲ್ಲದೇ, ಕನ್ನಡ, ಇಂಗ್ಲಿಷ್ ಸೇರಿದಂತೆ ಪ್ರಮುಖ ಭಾಷೆಯಲ್ಲಿ ಪ್ರಶ್ನಾವಳಿ ಇರಲಿದೆ. ಸಾರ್ವಜನಿಕರು ತಮಗೆ ಅನುಕೂಲವಾಗುವ ಭಾಷೆ ಆಯ್ಕೆ ಮಾಡಿಕೊಂಡು ಉತ್ತರಿಸಬಹುದಾಗಿದೆ.
ಗಣತಿದಾರರು ಆಗಮಿಸಿದ ವೇಳೆ ನೈಜವಾದ ಮಾಹಿತಿ ನೀಡಿ, ಮಾಹಿತಿ ನೀಡುವುದರಿಂದ ರೇಷನ್ ಕಾರ್ಡ್ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯ ನಿಂತು ಹೋಗಲಿದೆ ಎಂಬ ಆತಂಕ ಬೇಡ. ಸಂಗ್ರಹಿಸುವ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಸೇರಿದಂತೆ ಯಾವುದೇ ಸಂಸ್ಥೆಗೆ ಹಂಚಿಕೊಳ್ಳುವುದಿಲ್ಲ. ಗೌಪ್ಯವಾಗಿ ಇಡಲಾಗುವುದು.
ಎನ್.ಎಂ.ನಾಗರಾಜ್ ಜಿಲ್ಲಾಧಿಕಾರಿ, ಚಿಕ್ಕಮಗಳೂರುತಾಲೂಕುವಾರು ಗಣತಿದಾರರು ಮತ್ತು ಮೇಲ್ವಿಚಾರಕರ ನಿಯೋಜನೆ ವಿವರ
ತಾಲೂಕುಬ್ಲಾಕ್‌ಗಣತಿದಾರರು ಮೇಲ್ವಿಚಾರಕರುಶೃಂಗೇರಿ 88 82 17
ಕೊಪ್ಪ 169 165 28ಎನ್‌ಆರ್‌ಪುರ 131 126 24
ತರೀಕೆರೆ 337 284 48ಅಜ್ಜಂಪುರ 200 147 25
ಕಡೂರು 663 512 86ಚಿಕ್ಕಮಗಳೂರು 666 623 104
ಮೂಡಿಗೆರೆ 213 212 36ಕಳಸ 61 70 12