ಶಾಲೆ ಬಳಿ ಬಾರ್‌ಗೆ ಅನುಮತಿ ಬೇಡ : ದಸಂಸ ಆಗ್ರಹ

KannadaprabhaNewsNetwork |  
Published : Sep 22, 2026, 03:15 AM IST
ಸುರಪುರದ ತಾಲೂಕು ಆಡಳಿತ ಸೌಧದ ಎದುರು ಸೋಮವಾರ ಕುಂಬಾರಪೇಟ ರಾಷ್ಟçನಾಯಕರ ಪುತ್ಥಳಿಗಳು ಮತ್ತು ಶಾಲೆಯ ಬಳಿ ಮದ್ಯದಂಗಡಿ(ಬಾರ್) ಅನುಮತಿ ರದ್ದುಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ವತಿಯಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಎಚ್.ಎ.ಸರಕಾವಸ್ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

No permission for bar near school: DaSamSa demands

-ಮದ್ಯದಂಗಡಿ ಅನುಮತಿ ರದ್ದುಪಡಿಸಲು ಚ್.ಎ.ಸರಕಾವಸ್ ಮೂಲಕ ಜಿಲ್ಲಾಧಿಕಾರಿಗೆ ಮನವಿ

----

ಕನ್ನಡಪ್ರಭ ವಾರ್ತೆ ಸುರಪುರ

ನಗರ ಸಮೀಪದ ಕುಂಬಾರಪೇಟೆ ವಾರ್ಡ್ ನಂ.1 ಮತ್ತು 2ರ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ರಾಷ್ಟ್ರನಾಯಕರ ಪುತ್ಥಳಿಗಳು ಹಾಗೂ ಶಾಲೆಯ ಸಮೀಪ ಸರ್ಕಾರಿ ಮದ್ಯದಂಗಡಿ (ಬಾರ್) ತೆರೆಯಲು ನೀಡಲಾಗುತ್ತಿರುವ ಅನುಮತಿ ತಕ್ಷಣವೇ ರದ್ದುಪಡಿಸಬೇಕು ಎಂದು ರಾಜ್ಯ ದಸಂಸ (ನಾಗವಾರ ಬಣ) ಆಗ್ರಹಿಸಿದೆ.

ನಗರದ ತಾಲೂಕು ಆಡಳಿತ ಸೌಧದ ಎದುರು ಸೋಮವಾರ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿ, ಬಳಿಕ ತಹಸೀಲ್ದಾರ್ ಎಚ್.ಎ.ಸರಕಾವಸ್ ಅವರ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಸಂಘಟನೆಯ ತಾಲೂಕು ಸಂಚಾಲಕ ಹಣಮಂತ ಭದ್ರಾವತಿ, ಕುಂಬಾರಪೇಟೆಯ ರಾಜ್ಯ ಹೆದ್ದಾರಿ ಬಳಿ ಡಾ.ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಮಹರ್ಷಿ ವಾಲ್ಮೀಕಿ ಹಾಗೂ ಅಂಬಿಗರ ಚೌಡಯ್ಯ ಅವರ ವೃತ್ತ ಮತ್ತು ಪುತ್ಥಳಿಗಳಿವೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಬಾರ್ ಸ್ಥಾಪನೆಗೆ ಅವಕಾಶ ನೀಡುವುದರಿಂದ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆಯಾಗುವುದಲ್ಲದೆ, ಕಾನೂನು ಸುವ್ಯವಸ್ಥೆಗೂ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಆರೋಪಿಸಿದರು.

ಬಾರ್ ಸ್ಥಾಪನೆ ಉದ್ದೇಶಿಸಿರುವ ಸ್ಥಳದ ಸುತ್ತ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆ, ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಪ.ಜಾತಿ, ಪ.ಪಂ ಕುಟುಂಬಗಳ ಮನೆಗಳಿವೆ. ಪ್ರತಿನಿತ್ಯ ನೂರಾರು ಮಕ್ಕಳು ಹಾಗೂ ಮಹಿಳೆಯರು ಸಂಚರಿಸುವ ಈ ಸ್ಥಳದಲ್ಲಿ ಮದ್ಯದಂಗಡಿಗೆ ಅನುಮತಿ ನೀಡುವುದು ಸಾಮಾಜಿಕ ನೆಮ್ಮದಿಗೆ ಧಕ್ಕೆ ತರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಪ್ರದೇಶವು ದೇವಪುರ, ಸುರಪುರ, ತಳವರಾಗೇರಾ ಮತ್ತು ಕವಡಿಮಟ್ಟಿ ಕಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಗಳ ಕೇಂದ್ರವಾಗಿದೆ. ಇಲ್ಲಿ ಮದ್ಯದಂಗಡಿ ಆರಂಭವಾದರೆ ಮದ್ಯಪಾನ ಮಾಡಿ ವಾಹನ ಚಲಾಯಿಸು ವುದರಿಂದ ಅಪಘಾತಗಳ ಸಂಖ್ಯೆಯು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಜಿಲ್ಲಾಡಳಿತ ತಕ್ಷಣವೇ ಬಾರ್ ಅನುಮತಿ ಪ್ರಕ್ರಿಯೆಯನ್ನು ರದ್ದುಪಡಿ ಸಬೇಕು ಎಂದು ಒತ್ತಾಯಿಸಿದರು.

ಮನವಿಗೆ ಸ್ಪಂದಿಸದಿದ್ದಲ್ಲಿ ಸಂಘಟನೆಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದರು.

ದಲಿತ ಮುಖಂಡರಾದ ತಾಯಪ್ಪ ಮಂದಾಲಿ, ಬಸವರಾಜ ಭಜಂತ್ರಿ, ಪರಶುರಾಮ ಭಜಂತ್ರಿ, ಸಿದ್ದಪ್ಪ ಬಂಢಾರಿ, ಪ್ರಕಾಶ ಛಲವಾದಿ, ಪ್ರಮೋದ ಎತ್ತಿನಮನಿ, ಕೃಷ್ಣ ಮ್ಯಾಗೇರಿ, ಬಸವರಾಜ ವಜ್ಜಲ, ಸಾಹೇಬಗೌಡ ವಾಗನಗೇರಾ, ಫಕೀರಪ್ಪಗೌಡ ವಾಗನಗೇರಾ, ಮಲ್ಲಪ್ಪ ವಾಗನಗೇರಾ, ಸಿದ್ದಪ್ಪ ಗುಡ್ಡಕಾಯಿ, ಬಸವರಾಜ ಕುಂಬಾರಪೇಟ, ವೆಂಕಟೇಶನಾಯಕ ವಕೀಲರು ಕುಂಬಾರಪೇಟ್, ಗೋಪಾಲ ವಜ್ಜಲ, , ಬಸವರಾಜ ಚಿಂಚೋಳಿ, ಶಿವಶರಣ ಯಾಳಗಿ, ಶಿವಪ್ಪ ಕಂಬಾರ, ಮಂಜುನಾಥ ಕೊಂಬೀನ್, ಹಣಮಂತ ಬಾಂಬೆ, ಗೋಪಾಲ ಛಲವಾದಿ, ಪಿಡ್ಡನಾಯಕ ಕುಂಬಾರಪೇಟ, ಮಲ್ಲಪ್ಪ ಹುಬ್ಬಳ್ಳಿ, ಭೀಮರಾಯ ಕುಂಬಾರ, ಮಹೇಶ ಸಾಹುಕಾರ ವಾಲಿ, ಡಾ.ಮಲ್ಲಪ್ಪ ಛಲವಾದಿ, ದೇವಿಂದ್ರ ಬೇವಿನಾಳ,ಮರೆಪ್ಪ ಬಡಿಗೇರ, ಬಲಭೀಮನಾಯಕ, ಹಣಮಂತ್ರಾಯ ಮಿಲ್ಟ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಫೋಟೊ:21ವೈಡಿಆರ್1 ಸುರಪುರದ ತಾಲೂಕು ಆಡಳಿತ ಸೌಧದ ಬಳಿ ಕುಂಬಾರಪೇಟ ರಾಷ್ಟ್ರನಾಯಕರ ಪುತ್ಥಳಿ ಮತ್ತು ಶಾಲೆಯ ಬಳಿ ಮದ್ಯದಂಗಡಿ ಅನುಮತಿ ರದ್ದುಪಡಿಸುವಂತೆ ಆಗ್ರಹಿಸಿ ದಸಂಸ ದಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಎಚ್.ಎ.ಸರಕಾವಸ್ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವಜಲವೇ ಹಾಲಾಹಾಲ: ಪ್ರಯೋಗಾಲಯ ವರದಿ !
ಕಾರು ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೆ ಸಾವು