ನಿತೀಶಕುಮಾರ ಬಗ್ಗೆ ವೈಯಕ್ತಿಕ ಟೀಕೆ ಮಾಡಿಲ್ಲ: ಜೋಶಿ
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟ ಪರಿವಾರವಾದಿ ಜತೆ ಇವರಿಗೆ (ನಿತೀಶ್ ಕುಮಾರ್) ಹೊಂದಾಣಿಕೆಯಾಗಲ್ಲ ಎಂಬುದು ಗೊತ್ತಿತ್ತು. ನಿತೀಶಕುಮಾರ ಬಗ್ಗೆ ನಾವು ಟೀಕೆ-ಟಿಪ್ಪಣಿ ಮಾಡಿದ್ದೇವೆ. ಆದರೆ, ಎಂದಿಗೂ ವೈಯಕ್ತಿಕವಾಗಿ ಟೀಕಿಸಿಲ್ಲ. ಬಿಹಾರದಲ್ಲಿ ಅಪವಿತ್ರ ಮೈತ್ರಿ ಇತ್ತು. ಅದು ಈಗ ಅಂತ್ಯವಾಗಿದ್ದು, ಜೆಡಿಯು ಎನ್‌ಡಿಎ ಮಿತ್ರಪಕ್ಷ ಭಾಗವಾಗಿ ಆಡಳಿತ ನಡೆಸಲಿದೆ ಎಂದರು.
ಐಎನ್‌ಡಿಐಎ ಒಕ್ಕೂಟದ ನಾಯಕತ್ವವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿದ್ದಕ್ಕಾಗಿ ಈ ಬೆಳವಣಿಗೆ ಆಗಿದೆ ಎನ್ನಲು ಸಾಧ್ಯವಿಲ್ಲ. ಲಾಲು ಪ್ರಸಾದ್ ಮತ್ತು ಇತರೆ ಪರಿವಾರದವರು ನಿತೀಶಕುಮಾರ್ ಅವರಿಗೆ ತೊಂದರೆ ಕೊಡುತ್ತಿದ್ದರು. ಅದರ ಪರಿಣಾಮವಾಗಿ ಈ ರೀತಿಯ ಬೆಳವಣಿಗೆಯಾಗಿದೆ ಎಂದರು.ಮುಸ್ಲಿಮರ ತುಷ್ಟೀಕರಣ:
ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಏಕೆ ಅಹಿಂದ ಸಮಾವೇಶ ಮಾಡುತ್ತಿದ್ದಾರೆ. ಮೊದಲ ಅಕ್ಷರ ಬಿಟ್ಟು ಮಾಡಿ. ಹಿಂದ ಅಕ್ಷರಗಳು ಅವರಿಗೆ ಸಂಬಂಧವಿಲ್ಲ ಎಂದು ವ್ಯಂಗ್ಯವಾಡಿದರು.