ಬ್ಯಾಡಗಿ: ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಯಾವ ಧರ್ಮದವರೂ ಮಾದಿಗರನ್ನು ತಮ್ಮವರೆಂದು ಮನಃಪೂರ್ವಕ ಪ್ರೀತಿಯಿಂದ ಅಪ್ಪಿಕೊಳ್ಳುತ್ತಿಲ್ಲ. ಅಂಬೇಡ್ಕರ್ ಬಳಿಕವೂ ನಮಗೆ ದಾರಿ ಸಿಗದೇ ನೊಂದು ಬೆಂದಿದ್ದೇವೆ. ಹೀಗಾಗಿ ಸಮಾಜ ಗೊಂದಲದಲ್ಲಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿಷಾದಿಸಿದರು.
ಕರ್ಮ ಸಿದ್ಧಾಂತ ಹಾಗೂ ವರ್ಗ ಪದ್ಧತಿಯನ್ನು ಧಿಕ್ಕರಿಸಿದ ಬಸವೇಶ್ವರರು ಮೊದಲ ಬಾರಿಗೆ ನಮ್ಮನ್ನು ಅಪ್ಪಿಕೊಂಡರು. ಆದರೆ ಇತರೆ ಸಮಾಜದ ಮಕ್ಕಳನ್ನು ನಾವು ಮದುವೆಯಾದರೆ ತಾವು ಹಡೆದ ಮಕ್ಕಳನ್ನೇ ಕೊಲ್ಲುವ ಸಂಸ್ಕೃತಿ ರೂಢಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅಂತರ್ಜಾತಿ ವಿವಾಹ ಜಾರಿಗೆ ತರುವ ಮೂಲಕ ಸಮ ಸಮಾಜ ಕಟ್ಟಲು ಸರ್ಕಾರಕ್ಕೂ ಸಾಧ್ಯವಾಗದೇ ಹೋಯಿತು ಎಂದರು.
ನಾಯಿ ನರಿಗಳು ಎಲ್ಲಿ ಬೇಕಾದರೂ ಪ್ರವೇಶಿಸಬಹುದು. ಆದರೆ ಬಸವ, ಗಾಂಧಿ, ಅಂಬೇಡ್ಕರ ಗುರುತಿಸಿದ ಮಾದಿಗರ ಪ್ರವೇಶಕ್ಕೆ ಮಾತ್ರ ನಿಷೇಧವಿದೆ. ಇದೊಂದು ಮನುಷ್ಯ ಸಂಸ್ಕೃತಿಯ ವಿಪರ್ಯಾಸವೆಂದರೂ ತಪ್ಪಿಲ್ಲ. ತುಳಿತಕ್ಕೆ ಒಳಗಾಗಿದ್ದ ನಮ್ಮ ಸಮಾಜವನ್ನು ತಮ್ಮ ಇಚ್ಛೆಗೆ ತಕ್ಕಂತೆ ಬಳಸಿಕೊಂಡವರೇ ಇಂದಿಗೂ ನಮ್ಮನ್ನು ತುಳಿಯುತ್ತಿದ್ದಾರೆ. ಇನ್ನಾದರೂ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದ್ದು, ಮೊದಲು ಶಿಕ್ಷಣವಂತರಾಗಿ ಬದುಕನ್ನು ಕಟ್ಟಿಕೊಳ್ಳೋಣ ಎಂದು ಸಲಹೆ ನೀಡಿದರು.ಅಸ್ಪೃಶ್ಯರು ಎಂಬ ಶಿರೋನಾಮೆ ಬದಲಿಸಿ ಹರಿಜನ ಎಂದು ಮರು ನಾಮಕರಣ ಮಾಡುವ ಮೂಲಕ ಸ್ವಾತಂತ್ರ್ಯಕ್ಕೂ ಮುನ್ನವೇ ನಮ್ಮನ್ನು ಗುರುತಿಸಿದವರು ಮಹಾತ್ಮ ಗಾಂಧಿ. ಅವರ ಬಳಿಕ ಸಾಮಾಜಿಕ ನ್ಯಾಯದಡಿ ಅಂಬೇಡ್ಕರ ಅವರು ಸಂವಿಧಾನಾತ್ಮಕ ಹಾಗೂ ಹಕ್ಕುಬದ್ಧ ಅವಕಾಶಗಳನ್ನು ಕಲ್ಪಿಸಲು ಮುಂದಾದರು. ಆದರೆ ರಾಜಕಾರಣದ ದಳ್ಳುರಿಗೆ 4 ಜಾತಿಗಳಿದ್ದ ಪರಿಶಿಷ್ಟ ಜಾತಿಯಲ್ಲಿ 118 ಜಾತಿಗಳನ್ನು ಸೇರಿಸುವ ಮೂಲಕ ನಮ್ಮನ್ನು ಮೇಲೆಳಲು ಬಿಡಲಿಲ್ಲ. ಬದಲಾಗಿ ಮೊದಲಿದ್ದ ಜಾಗಕ್ಕೆ ಕರೆದೊಯ್ಯುವ ಕೆಲಸವಾಗುತ್ತಿದೆ ಎಂದರು.
ಒಳಮೀಸಲಾತಿ ಧೈರ್ಯ: ಆದರೆ ಇದೀಗ ಸಮಯ ಬಂದಿದೆ. ಒಳ ಮೀಸಲಾತಿ ಜಾರಿಗೊಳ್ಳುವುದು ಶತಸಿದ್ಧ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಸಮಾಜದವರು ಜಾತಿಗಣತಿ ವೇಳೆ ಮಾದಿಗ ಎಂದು ನಿರ್ಭಯವಾಗಿ ನೋಂದಣಿ ಮಾಡಿಸುವಂತೆ