ರಕ್ತಕ್ಕೆ ಪರ್ಯಾಯವಿಲ್ಲ- ಡಾ.ವೈಶಾಲಿ ನಾಯ್ಕ

KannadaprabhaNewsNetwork |  
Published : Nov 30, 2026, 03:15 AM IST
ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್‌ನ ಸಿಬ್ಬಂದಿ ವರ್ಗದವರು ರಕ್ತದಾನ ಹಾಗೂ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿದರು. | Kannada Prabha

ಸಾರಾಂಶ

ರಕ್ತದಾನದಿಂದ ಒಂದು ಜೀವ ಉಳಿಸಬಹುದು. ನಮ್ಮ ಇಲಾಖೆಯಿಂದ ರಕ್ತದಾನ ಮತ್ತು ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ.

ಹೊನ್ನಾವರ: ಅನ್ನದಾನಕ್ಕಿಂತ ರಕ್ತದಾನ ಮಹಾದಾನ. ರಕ್ತವನ್ನು ಮನುಷ್ಯನ ಹೊರತಾಗಿ ಬೇರೆ ಯಾವುದೇ ಯಂತ್ರ ಬಳಸಿ ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಬೇರೆಲ್ಲ ಸಂಶೋದನೆಗಳಲ್ಲಿ ಯಶಸ್ಸನ್ನು ಗಳಿಸಿದ್ದೇವೆ, ಆದರೆ ರಕ್ತವನ್ನು ಉತ್ಪಾದಿಸಲು ಇಲ್ಲಿಯವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ವೈಶಾಲಿ ನಾಯ್ಕ ಹೇಳಿದರು.

ಕಾಸರಕೋಡಿನ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಆಶ್ರಯದಲ್ಲಿ ನಡೆದ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ನಾವು ಇತರರಿಂದ ರಕ್ತವನ್ನು ಪಡೆಯಬೇಕು. 18ರಿಂದ 65 ವರ್ಷದ ವಯಸ್ಸಿನವರು ರಕ್ತ ನೀಡಬಹುದು ಎಂದರು. ರಕ್ತದಾನ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಅಧಿಕಾರಿ ನೀಲಂ ಪಾಯ್ದೆ ಮಾತನಾಡಿ, ರಕ್ತದಾನದಿಂದ ಒಂದು ಜೀವ ಉಳಿಸಬಹುದು. ನಮ್ಮ ಇಲಾಖೆಯಿಂದ ರಕ್ತದಾನ ಮತ್ತು ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ತಾವೆಲ್ಲರೂ ಕೈಜೋಡಿಸಿ ರಕ್ತದಾನದಲ್ಲಿ ಪಾಲ್ಗೊಳ್ಳಬೇಕು ಎಂದರು.

ಕೃಷ್ಣ ನಾಯ್ಕ, ದಾಮೋದರ, ಸರಳಾ ಫರ್ನಾಂಡೀಸ್ ಹಾಜರಿದ್ದರು. ಡಾ. ಅಲ್ತಾಫ್‌, ಡಾ. ಲಕ್ಷ್ಮೀ ಬಿರಾದಾರ, ಬಸವರಾಜ ರಕ್ತದಾನ ಹಾಗೂ ಆರೋಗ್ಯ ಶಿಬಿರ ನಡೆಸಿಕೊಟ್ಟರು. ಅಶೋಕ ಕಾಸರಕೋಡ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಾಮಸ್ತಕಾಭಿಷೇಕಕ್ಕೆ ಸಂಘಟಿತ ಸಿದ್ಧತೆ ಅಗತ್ಯ: ಡಾ. ಹೆಗ್ಗಡೆ
ಸಿ ಆ್ಯಂಡ್ ಡಿ , ಸೆಕ್ಷನ್-೪ ಸಮಸ್ಯೆ ಪರಿಹಾರ ಅಗತ್ಯ: ಮಂತರ್‌