ಕಲಬುರಗಿಯಲ್ಲಿ ನ.15ರಂದು ಆಯೋಜಿಸಲಾಗಿರುವ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಬೀದರ್ ಜಿಲ್ಲಾ ಘಟಕವು ಯಾವುದೇ ಬೆಂಬಲ ನೀಡುವುದಿಲ್ಲ ಎಂದು ಸಂಘದ ರಾಜ್ಯ ಖಜಾಂಚಿ ಶರತಕುಮಾರ ಅಭಿಮಾನ, ಜಿಲ್ಲಾಧ್ಯಕ್ಷ ಸಂತೋಷ ಪಾಟೀಲ ಹಾಗೂ ರಾಜ್ಯ ಪರಿಷತ್ ಸದಸ್ಯ ದೇವಪ್ಪ ಚಂಬಾಳೆ ಸ್ಪಷ್ಟಪಡಿಸಿದ್ದಾರೆ.
ಬೀದರ್: ಕಲಬುರಗಿಯಲ್ಲಿ ನ.15ರಂದು ಆಯೋಜಿಸಲಾಗಿರುವ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಬೀದರ್ ಜಿಲ್ಲಾ ಘಟಕವು ಯಾವುದೇ ಬೆಂಬಲ ನೀಡುವುದಿಲ್ಲ ಎಂದು ಸಂಘದ ರಾಜ್ಯ ಖಜಾಂಚಿ ಶರತಕುಮಾರ ಅಭಿಮಾನ, ಜಿಲ್ಲಾಧ್ಯಕ್ಷ ಸಂತೋಷ ಪಾಟೀಲ ಹಾಗೂ ರಾಜ್ಯ ಪರಿಷತ್ ಸದಸ್ಯ ದೇವಪ್ಪ ಚಂಬಾಳೆ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಜಂಟಿ ಪ್ರಕಟಣೆ ನೀಡಿದ ಅವರು, ಕಲಬುರಗಿ ಕಾರ್ಯಕ್ರಮದ ಕುರಿತು ರಾಜ್ಯ ಸಂಘ ದೊಂದಿಗೆ ಯಾವುದೇ ಚರ್ಚೆ ಅಥವಾ ಸಮಾಲೋಚನೆ ನಡೆದಿಲ್ಲ. ಹೀಗಾಗಿ ಈ ಕಾರ್ಯಕ್ರಮಕ್ಕೆ ರಾಜ್ಯ ಸಂಘವು ಬೆಂಬಲ ಅಥವಾ ಸಹಮತಿ ನೀಡಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ರಾಜ್ಯ ಸಂಘದ ಈ ನಿಲುವಿಗೆ ಬೀದರ್ ಜಿಲ್ಲಾ ಘಟಕವೂ ಸಂಪೂರ್ಣ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.ಆದ್ದರಿಂದ ಬೀದರ್ ಜಿಲ್ಲೆಯ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು. ಸಂಘದ ಪೂರ್ವಾನುಮತಿ ಇಲ್ಲದೆ ಸಂಘದ ಹೆಸರು, ಲಾಂಛನ, ಹುದ್ದೆ ಅಥವಾ ಪ್ರತಿನಿಧಿತ್ವವನ್ನು ಬಳಸಿಕೊಳ್ಳುವುದಕ್ಕೆ ಬೀದರ್ ಜಿಲ್ಲಾ ಘಟಕವು ತೀವ್ರ ವಿರೋಧ ವ್ಯಕ್ತಪಡಿಸುತ್ತದೆ ಎಂದು ಎಚ್ಚರಿಸಿದ್ದಾರೆ.
ಪ್ರಮುಖ ಬೇಡಿಕೆಗಳೇ ಆದ್ಯತೆ: ಪ್ರಸ್ತುತ ಗ್ರಾಮ ಪಂಚಾಯಿತಿಗಳು ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಕಲ್ಪಿಸು ವುದು, ಪರ್ಯಾಯ ಅನುದಾನ ಬಿಡುಗಡೆ ಮಾಡಿಸುವುದು ಹಾಗೂ ಪಿಡಿಒಗಳ ಗ್ರೂಪ್-ಬಿ ಹುದ್ದೆ ಉನ್ನತೀಕರಣ, ಬಡ್ತಿ ಮತ್ತು ಇತರ ಸೇವಾ ಬೇಡಿಕೆಗಳನ್ನು ಈಡೇರಿಸುವುದೇ ನಮ್ಮ ಸಂಘದ ಪ್ರಮುಖ ಆದ್ಯತೆಯಾಗಿದೆ. ಈ ಎಲ್ಲ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಬೀದರ್ ಜಿಲ್ಲಾ ಘಟಕವು ರಾಜ್ಯ ಸಂಘದೊಂದಿಗೆ ದೃಢವಾಗಿ ನಿಲ್ಲಲಿದೆ ಎಂದಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.