ಕನ್ನಡಪ್ರಭ ವಾರ್ತೆ ಚವಡಾಪುರ
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪರಿ ಮಹಾನಗರ ಪಾಲಿಕೆಯ ಬಸವಣ್ಣನವರ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿ ಹೋಯ್ ಹಮಿ ಹಿಂದುಚ್ ಅಭಿಯಾನ ನಡೆಸಿ ಮಾತನಾಡಿದ ಅವರು ಕರ್ನಾಟಕದ ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ಮುಂಬರುವ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಹಿಂದು ಪದ ಬಳಕೆ ಮಾಡಬಾರದೆಂದು ನಿರ್ಣಯಿಸಿದ್ದು ದುಃಖದ ಸಂಗತಿಯಾಗಿದೆ. ಇದನ್ನು ನಾವು ಕಟುವಾಗಿ ವಿರೋಧಿಸುತ್ತೇವೆ. ನಾವೆಲ್ಲರೂ ಹಿಂದುಗಳಾಗಿದ್ದು ಜನಗಣತಿಯ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ಎಲ್ಲರೂ ಹಿಂದು ಎಂದು ನಮೂದಿಸಬೇಕೆಂದು ಮನವಿ ಮಾಡಿದ ಅವರು ಬರುವ ದಿನಗಳಲ್ಲಿ ಕರ್ನಾಟಕ ರಾಜ್ಯದ ತುಂಬಾ ಜನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ ಎಂದು ತಿಳಿಸಿದರು.
ಖ್ಯಾತ ಉದ್ಯಮಿ ಎಸ್.ಬಿ. ಪಾಟೀಲ್ ಬಡದಾಳ ಮಾತನಾಡಿ ಹೌದು ನಾವು ಹಿಂದುಗಳು ಎನ್ನುವ ಸ್ವಾಭಿಮಾನದ ಕೂಗು ಪ್ರತಿ ಮನೆಯಿಂದಲೂ ಕೇಳಿಸುವಂತಾಗಬೇಕು. ಜಾತಿ, ಮತ ಪಂಥಗಳನ್ನು ಬದಿಗಿಟ್ಟು ನಾವೆಲ್ಲರೂ ಹಿಂದುಗಳೆನ್ನುವ ಒಗ್ಗಟ್ಟಿನ ಮಂತ್ರ ಜಪಿಸಬೇಕಾದ ಕಾಲ ಬಂದಿದೆ. ಇಂತಹ ಸಂದರ್ಭದಲ್ಲಿ ಪ್ರತ್ಯೇಕ ಧರ್ಮಕ್ಕಾಗಿ ಬೇಡಿಕೆ ಇಡುವವರಿಗೆ ಜನ ಬೆಂಬಲಿಸಬಾರದೆಂದು ಮನವಿ ಮಾಡಿದರು.ಬಸವೇಶ್ವರ ಪ್ರತಿಮೆ ಸಮಿತಿ ಅಧ್ಯಕ್ಷ ನಾರಾಯಣ ಬಹಿರವಾಡ, ಶರದ ಗಂಜಿವಾಲೆ, ಗುರುರಾಜ ಚರಂತಿಮಠ, ವಿಜಯ ಜಂಗಮ, ಸಂಜಯ ಗರುಳೆ, ವಿಶ್ವನಾಥ ಹಿರೇಮಠ, ಸಂಜಯ ಮಣ್ಣೂರಕರ, ಹೆಂತರ ಹರಹರೆ, ಸತೀಶ ಗೊರಡೆ, ಶಿವಾನಂದ ಚೌಗುಲೆ, ಅಪ್ಪಾ ದಿವಾನ, ಸುರೇಶ ವಾಲ್ಕೆ, ವಿಜಯ ಬಿರಾಜದಾರ, ಬಿ.ಕೆ ಹಿರೇಮಠ, ರಾಜೇಂದ್ರ ಮೈಂದರ್ಗಿಕರ, ಶಿವಾನಂದ ಪಾಟೀಲ್, ಸಿದ್ದರಅಮ ಘೊಂಗಡೆ, ವಿಜಯಕುಮಾರ ಸ್ವಾಮಿ, ಶಿವಪುತ್ರ ದರೂರ, ಆನಂದ ಬಿರಾಜದಾರ, ರವಿ ಪಾಟೀಲ, ಗುರುರಾಜ ಕುಂಬಾರ, ಕೃಷ್ಣ ಗೊಂದಳೆ, ಚಂದ್ರಕಾಂತ ಹಲಗೆ, ಅಭಿಷೇಕ ಚರಂತಿಮಠ, ಸುನೀಲ ಚೌಗುಲೆ, ಜಯಶ್ರೀ ಪಾಟೀಲ, ರಾಗಿಣಿ ಬಿರಾಜದಾರ, ಪ್ರಮೀಳಾ ಪಾತರಜದಾರ, ಲಕ್ಷ್ಮೀ ಸ್ಪಮ್ರಾಣಿ ಮತ್ತಿತರರು ಉಪಸ್ಥಿತರಿದ್ದರು.