ಶಾಲೆಗಳಲ್ಲಿ ಟ್ರಾಫಿಕ್ ಸುರಕ್ಷತಾ ವಲಯವಿಲ್ಲ: ನಿಮ್ಹಾನ್ಸ್‌ ಮಾಜಿ ನಿರ್ದೇಶಕ ಬೇಸರ

KannadaprabhaNewsNetwork |  
Published : Feb 09, 2024, 01:51 AM IST
ಐಐಎಸ್ಸಿಯಲ್ಲಿ ನಡೆದ ಸಂಚಾರ ಸುರಕ್ಷತಾ ಶಿಕ್ಷಣ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಗುರುವಾರ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಸಾರಿಗೆ ಇಲಾಖೆ ಸಹಯೋಗದಲ್ಲಿ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆ ಆಯೋಜಿಸಿದ್ದ ‘ಸಂಚಾರ ಸುರಕ್ಷತಾ ಶಿಕ್ಷಣ ಕಾರ್ಯಕ್ರಮ’ದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನಿಮ್ಹಾನ್ಸ್‌ ಸಂಸ್ಥೆಯ ಮಾಜಿ ನಿರ್ದೇಶಕ ಡಾ। ಜಿ.ಗುರುರಾಜ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರು ಸುಮಾರು ಶೇಕಡ 10ರಷ್ಟು ಶಾಲೆಗಳು ಮಾತ್ರ ಸಂಚಾರ ಸುರಕ್ಷತಾ ವಲಯಗಳನ್ನು ಹೊಂದಿವೆ ಎಂದು ನಿಮ್ಹಾನ್ಸ್‌ ಸಂಸ್ಥೆಯ ಮಾಜಿ ನಿರ್ದೇಶಕ ಡಾ। ಜಿ.ಗುರುರಾಜ್ ಹೇಳಿದರು.

ಗುರುವಾರ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಸಾರಿಗೆ ಇಲಾಖೆ ಸಹಯೋಗದಲ್ಲಿ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆ ಆಯೋಜಿಸಿದ್ದ ‘ಸಂಚಾರ ಸುರಕ್ಷತಾ ಶಿಕ್ಷಣ ಕಾರ್ಯಕ್ರಮ’ದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಶಾಲೆಗಳ ಬಳಿ ಮಕ್ಕಳನ್ನು ಕರೆ ತರಲು ಶಾಲಾ ವಾಹನಗಳಿಗೆ ಮತ್ತು ಮಕ್ಕಳ ಪಾಲಕರಿಗೆ ಸುರಕ್ಷಿತ ಸ್ಥಳಾವಕಾಶ ಒದಗಿಸಬೇಕು, ಸಿಬ್ಬಂದಿ ನಿಯೋಜನೆ, ಸಂಚಾರ ಚಿಹ್ನೆಗಳ ಅಳವಡಿಕೆ, ಪಾರ್ಕಿಂಗ್ ವ್ಯವಸ್ಥೆ ಮುಂತಾದ ಅನೇಕ ಕ್ರಮಗಳನ್ನು ಶಾಲೆಗಳನ್ನು ಹೊಂದಿರಬೇಕು. ಆದರೆ ಇಂತಹ ಸುರಕ್ಷಿತಾ ವಾತಾವರಣ ಶೇ.10ರಷ್ಟು ಶಾಲೆಗಳು ಮಾತ್ರ ಹೊಂದಿವೆ ಎಂಬುದು ಸಮೀಕ್ಷೆಯಲ್ಲಿ ಗೊತ್ತಾಗಿದೆ ಎಂದು ಹೇಳಿದರು.

ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಮಾತನಾಡಿ, ಮುಂಬರುವ ದಿನಗಳಲ್ಲಿ ನಗರದ 500 ಟ್ರಾಫಿಕ್ ಜಂಕ್ಷನ್‌ಗಳು ಸಂಚಾರ ಪೊಲೀಸರ ಬದಲು ಕೇವಲ ಸಿಗ್ನಲ್ ವ್ಯವಸ್ಥೆಯ ಮೇಲೆ ಕಾರ್ಯ ನಿರ್ವಹಿಸಲಿವೆ. ಜಂಕ್ಷನ್‌ಗಳಿಗೆ ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಟೊಯೊಟಾ ಕಿರ್ಲೋಸ್ಕರ್ ಮೋಟರ್ಸ್‌ನ ನಿರ್ದೇಶಕ ಸುದೀಪ್ ಎಸ್.ದಾಲ್ವಿ ಮಾತನಾಡಿ, ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ಪ್ರತಿ ಮೂರು ನಿಮಿಷಕ್ಕೊಬ್ಬರು ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಅದರಲ್ಲೂ 18-45ರ ವಯೋಮಾನದವರು ಅಪಘಾತದಲ್ಲಿ ಸಾವಿಗೀಡಾಗುವುದರಿಂದ ಅವಲಂಬಿತ ಕುಟುಂಬದ ಮೇಲೂ ಋಣಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ, ಬಾಲ್ಯದಿಂದಲೇ ಮಕ್ಕಳು ಸುರಕ್ಷತೆ ನಿಯಮಗಳನ್ನು ಅರಿತು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಸಿ.ಮಲ್ಲಿಕಾರ್ಜುನ್ ಮಾತನಾಡಿ, ಶಾಲೆ ಮತ್ತು ಕಾಲೇಜಿನ ಎಲ್ಲ ಹಂತಗಳಲ್ಲೂ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಕುರಿತು ವಿದ್ಯಾರ್ಥಿಗಳಿಗೆ ಹೇಳಿಕೊಡಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಸಂಚಾರ ನಿಯಮಗಳ ಕುರಿತು ಜನರಲ್ಲಿ ಜ್ಞಾನ ಕಡಿಮೆ ಇದೆ. ಹೀಗಾಗಿ, ಗ್ರಾಮಾಂತರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?