ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಬುಧವಾರ ಪಕ್ಷದ ಕಚೇರಿಯ ಹೊರ ವಲಯದಲ್ಲಿ ನಡೆದ ಬಿಜೆಪಿ ಜಿಲ್ಲಾ ನೂತನ ಅಧ್ಯಕ್ಷ ದೇವರಾಜ್ ಶೆಟ್ಟಿ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳಾಗಿದ್ದು, 8 ಹಗರಣಗಳಾಗಿವೆ. ಸಿದ್ದರಾಮಯ್ಯ ಎಂದರೆ ಹಳೆ ಬ್ರಾಂಡ್ ಅಂಬಾಸಿಟರ್ ಇದ್ದಂತೆ. ಜಾತಿ ಗಣತಿಗಾಗಿ ನೇಮಕ ಮಾಡಲಾಗಿದ್ದ ಕಾಂತರಾಜು ಅವರು ವರದಿಗೆ ಸಹಿ ಮಾಡಿಲ್ಲ, ವರದಿಯ ಮೂಲ ಪ್ರತಿ ಕಳೆದು ಹೋಗಿದೆ. ಇದೀಗ ಸಿದ್ಧವಿರುವ ವರದಿ ಸಿದ್ದರಾಮಯ್ಯ ಬರೆಸಿದಂತಿದೆ ಎಂದರು.
ಸಿದ್ದರಾಮಯ್ಯ ದಾರಿಯಲ್ಲಿ ಹೋಗುವವರನ್ನೆಲ್ಲಾ ಕರೆದು ನಾನು ಹಿಂದೂ ಎಂದು ಹೇಳಿಕೊಳ್ಳುತ್ತಿದ್ದಾರೆ. ರಾಮ ಎನ್ನುವುದು ಹೆಸರಿನಲ್ಲಿದ್ದರೆ ಸಾಲದು ಅದು ಮನಸ್ಸಿನಲ್ಲಿರಬೇಕು. ಸಿದ್ದರಾಮಯ್ಯ ಎದೆ ಬಗೆದರೆ ಟಿಪ್ಪು ಇದ್ದಾರೆ. ಅವರು ಆರಾಧಿಸುತ್ತಿರುವ ಜಗಮಗಿಸುತ್ತಿರುವ ಟಿಪ್ಪು ಇದ್ದಾರೆ ಎಂದ ಅವರು, ಗಂಟಲಲ್ಲಿ ಮಾತ್ರ ರಾಮ, ಒಳಗೆಲ್ಲ ಟಿಪ್ಪು ರಾರಾಜಿಸುತ್ತಿದ್ದಾರೆ ಎಂದು ಟೀಕಿಸಿದರು.ಶಾದಿ ಭಾಗ್ಯ ತರುವ ಮೂಲಕ ಮುಸಲ್ಮಾನರು ಮಾತ್ರ ಬಡವರು ಎಂದು ಹೇಳಿದರು, ಮುಲ್ಲಾಗಳಿಗೆ ಹತ್ತು ಸಾವಿರ ಕೋಟಿ ಕೊಡುವ ಭರವಸೆ ನೀಡಿದ್ದಾರೆ. ಆದರೆ, ರೈತರಿಗೆ ನೂರು ಕೋಟಿ ಕೊಡುತ್ತೇವೆ ಎಂದಿದ್ದಾರೆ ಎಂದು ಹೇಳಿದರು.
ಹನುಮ ಧ್ವಜ ಹಾರಬೇಕೆಂದು 24 ಮಂದಿ ಸಹಿ ಹಾಕಿದ್ದಾರೆ. ಹನುಮ ದೇವಸ್ಥಾನದ ಮುಂದೆ ಹನುಮ ಧ್ವಜ ಹಾಕೋಕೆ ಕಾಂಗ್ರೆಸ್ ಅಪ್ಪಣೆ ಯಾಕೆ ಬೇಕು ಎಂದು ಹೇಳಿದ ಅವರು, 22 ಹಳ್ಳಿಯ ಜನ ಹಣ ಹಾಕಿಧ್ವಜ ಕಟ್ಟಿ ನಿರ್ಮಿಸಿದ್ದಾರೆ. ಸರ್ಕಾರ ಒಂದು ಕೋಟಿ ಹಣ ಹಾಕಿ ಅದಕ್ಕಿಂತ ದೊಡ್ಡ ಕಂಬ ನಿರ್ಮಿಸಿ ಧ್ವಜ ಹಾರಿಸಲಿ ಎಂದು ಹೇಳಿದರು.
ಚಿಕ್ಕಮಗಳೂರಿಗೆ ಶಾಸಕ ಯಾರು ಎಂದು ಗೊತ್ತೇ ಇಲ್ಲ, ಒಂದೇ ಒಂದು ನಯಾ ಪೈಸೆ ಅಭಿವೃದ್ಧಿ ಕೆಲಸ ಮಾಡದ ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದರು.
ಪಿಎಸ್‌ಐ, ಡಾಕ್ಟರ್ ಅವರ ಬಳೀ ಪೋಸ್ಟಿಂಗ್ ಗೆ ಇಂತಿಷ್ಟು ಎಂದು ಮಾಮೂಲಿ ಪಡೆಯುವ ಪೊಲಿಟಿಕಲ್ ಕಲ್ಚರ್ ಎಲ್ಲೋ ದೂರದ ಜಿಲ್ಲೆಗಳಲ್ಲಿ ಇತ್ತು. ಆದ್ರೆ ಆ ಕಲ್ಚರ್ ನಮ್ಮ ಜಿಲ್ಲೆಗೆ ತಂದ ಅಪಕೀರ್ತಿ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಸಲ್ಲುತ್ತದೆ. ಹಿರಿಯಕ್ಕನ ಛಾಳಿ ಮನೆಮಂದಿಗೆಲ್ಲ ಎಂದ ಅವರು, ವೈನ್ ಶಾಪ್, ಪೊಲೀಸ್ ಠಾಣೆಗೆ ರೇಟ್ ಫಿಕ್ಸ್ ಮಾಡಿದ್ದಾರೆ. ಯಾವ ಸಂಸ್ಕೃತಿ ಜಿಲ್ಲೆಯಲ್ಲಿ ಇರಲಿಲ್ಲವೋ ಅದನ್ನ ಜಿಲ್ಲೆಗೆ ತಂದಿದ್ದಾರೆ ಎಂದು ಆರೋಪಿಸಿದರು.
ನೂತನ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ ಮಾತನಾಡಿ, ಇವತ್ತೇ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ನಡೆದರೂ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು 20-25 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಮತದಾರರ ಮನಸ್ಸಿನಲ್ಲಿ ಬಿಜೆಪಿ, ಮೇದಿ, ಯಡಿಯೂರಪ್ಪ ಇದ್ದಾರೆ. ನಾವು ಅವರನ್ನು ತಲುಪುವ ಕೆಲಸ ಮಾಡಬೇಕು ಎಂದರು.
ಚುನಾವಣೆಯಲ್ಲಿ ಸೋತರೂ ಕೂಡಾ ಜನಮಾನಸದಲ್ಲಿ ಬಿಜೆಪಿ ಅಚ್ಚಳಿಯದೇ ಉಳಿದಿದೆ, ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನವರು ಆಶ್ಚರ್ಯಪಡುವ ಫಲಿತಾಂಶ ಕೊಡಬೇಕು ಎಂದು ಕರೆ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಮಾಜಿ ಶಾಸಕರುಗಳಾದ ಡಿ.ಎಸ್. ಸುರೇಶ್, ಬೆಳ್ಳಿಪ್ರಕಾಶ್, ಪಕ್ಷದ ಮುಖಂಡರಾದ ದೀಪಕ್ ದೊಡ್ಡಯ್ಯ, ಗಿರೀಶ್ ಪಟೇಲ್,ಪ್ರಮೇದ್ ಮದ್ವರಾಜ್, ಹರೀಶ್ ಪೂಂಜಾ ಹಾಗೂ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.